Advertisement

ಕಳವಿನಿಂದ ಔಷಧ ತರಿಸುತ್ತಿದೆ ಚೀನ: ಕೋವಿಡ್ ನಿಯಂತ್ರಣಕ್ಕೆ ಹತಾಶ ಕ್ರಮ

12:59 AM Dec 29, 2022 | Team Udayavani |

ಬೀಜಿಂಗ್‌: ಕೊರೊನಾದಿಂದ ಸಂಕಷ್ಟಕ್ಕೆ ಗುರಿಯಾಗಿರುವ ಚೀನದ ಆಸ್ಪತ್ರೆ ಗಳಲ್ಲಿ ಔಷಧಗಳ ಕೊರತೆಯೂ ಉಂಟಾ ಗಿದೆ. ಹೀಗಾಗಿ ಅದು ಭಾರ ತದ ಮುಂದೆಯೇ ಮಂಡಿಯೂ ರಿದೆ. ಆದರೆ ರಹಸ್ಯವಾಗಿ ಬ್ಲ್ಯಾಕ್‌ ಮಾರು ಕಟ್ಟೆಯಲ್ಲಿ ಔಷಧಗಳನ್ನು ತರಿಸಿಕೊಳ್ಳಲು ಮುಂದಾಗಿದೆ. ಆ ದೇಶದ ಸರಕಾರ ದಿಂದ ಮಾನ್ಯತೆ ಪಡೆದ ಔಷಧಗಳು ಸೀಮಿತ ಪ್ರಮಾಣದಲ್ಲಿ ಲಭ್ಯ ವಾಗುತ್ತಿದೆ.

Advertisement

ಲಭ್ಯವಾಗುತ್ತಿದ್ದರೂ ಅವು ಗಳ ಬೆಲೆ ದುಬಾರಿಯಾಗಿಯೂ ಇದೆ. ಹೀಗಾಗಿ ಅನಿವಾರ್ಯವಾಗಿ ಆಸ್ಪತ್ರೆ ಗಳು ಮತ್ತು ವೈದ್ಯರು ಕಳ್ಳತನದ ಮಾರ್ಗದ ಮೂಲಕ ಭಾರತದಿಂದ ಔಷಧಗಳನ್ನು ತರಿಸಿಕೊಳ್ಳುತ್ತಿದ್ದಾರೆ.
ಚೀನದ ಸಾಮಾಜಿಕ ಜಾಲತಾಣ ಗಳಲ್ಲಿ “ಭಾರತದಿಂದ ತರಿಸಲಾಗಿರುವ ಜನೆರಿಕ್‌ ಔಷಧಗಳು ಪ್ರತಿ ಬಾಕ್ಸ್‌ಗೆ 144 ಅಮೆರಿಕನ್‌ ಡಾಲರ್‌ಗೆ ಲಭ್ಯವಾಗುತ್ತಿವೆ’ ಎಂಬ ಶೀರ್ಷಿಕೆಯನ್ನು ಒಳ ಗೊಂಡ ಸಂದೇಶಗಳು ರವಾನೆಯಾ ಗುತ್ತಿವೆ. ಚೀನದ್ಯಾಂತ ಭಾರತದ ಪ್ರಿಮೋವಿರ್‌, ಪಾಕ್ಸಿಸ್ಟಾ, ಮೊಲುನೌಟ್‌ ಮತ್ತು ಮೊಲಾ°ಟ್ರಿಸ್‌ ಎಂಬ ನಾಲ್ಕು ವಿಧಗಳ ಔಷಧಗಳು ಮಾರಾಟವಾಗುತ್ತಿವೆ. ಈ ಬಗ್ಗೆ ಅಲ್ಲಿನ ಪತ್ರಿಕೆಗಳ ಲ್ಲಿಯೂ ವರದಿಯಾಗಿದೆ.

ಲಸಿಕೆ ಹಾಕಿಸಿದರೆ ಇನಾಮು: ಇನ್ನೊಂದೆಡೆ, ಕೊರೊನಾ ನಿಯಂತ್ರಣಕ್ಕೆ ಪರದಾಡುತ್ತಿರುವ ಚೀನ ಸರಕಾರ ತನ್ನ ನಾಗರಿಕರಿಗೆ ಲಸಿಕೆ ಪಡೆದು ಕೊಳ್ಳಬೇಕು ಎಂದು ದುಂಬಾಲು ಬಿದ್ದಿದೆ. ಅದಕ್ಕಾಗಿ ಲಸಿಕೆ ಹಾಕಿಸಲು ಹಿರಿಯ ನಾಗರಿಕರಿಗೆ ಪ್ರೋತ್ಸಾಹ ಧನ ನೀಡಲು ನಿರ್ಧ ರಿಸಿದೆ. ಒಬ್ಬ ಹಿರಿಯ ನಾಗರಿಕ ರಿಗೆ 70 ಡಾಲರ್‌ (5, 795.17 ರೂ) ನೀಡುವ ಬಗ್ಗೆ ಆಮಿಷ ಒಡ್ಡಿದೆ.

ವಿಶೇಷವಾಗಿ ಹಿರಿಯ ನಾಗರಿಕರಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ಸೋಂಕು ತಗಲುತ್ತಿದೆ. ಅದನ್ನು ನಿಯಂತ್ರಿಸಲು ಅನಿವಾರ್ಯವಾಗಿ ಲಸಿಕೆ ಹಾಕಬೇಕಾಗಿದೆ. ಆದರೆ ಅಲ್ಲಿನ ಲಸಿಕೆಯ ಗುಣಮಟ್ಟ ಕಳಪೆ ಯಾಗಿರುವುದೂ ಜನರಿಗೆ ಗೊತ್ತಾಗಿದೆ. ಆ ಕಾರಣಕ್ಕಾಗಿ ಲಸಿಕಾ ಕೇಂದ್ರಗಳಿಗೆ ಯಾರು ಬರುತ್ತಿಲ್ಲ. ಇದರಿಂದಾಗಿ ಆಮಿಷದ ಮಾರ್ಗಕ್ಕೆ ಕ್ಸಿ ಜಿನ್‌ಪಿಂಗ್‌ ಸರಕಾರಮುಂದಾಗಿದೆ.

ಒಂದು ಅಂದಾಜಿನ ಪ್ರಕಾರ ಡ್ರ್ಯಾಗನ್‌ ರಾಷ್ಟ್ರ ದಲ್ಲಿ 24 ಮಿಲಿಯ (2.4 ಕೋಟಿ) ಮಂದಿ 60 ವರ್ಷ ಮೇಲ್ಪಟ್ಟವರು ಇನ್ನೂ ಮೊದಲ ಡೋಸ್‌ನ ಲಸಿಕೆ ಹಾಕಿಸಿಕೊಳ್ಳಲು ಬಾಕಿ ಇದ್ದಾರೆ. ಮತ್ತೊಂದೆಡೆ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಪಾಸ್‌ಪೋರ್ಟ್‌ಗಳನ್ನು ನೀಡಲೂ ಅಲ್ಲಿನ ಸರಕಾರ ನಿರ್ಧರಿಸಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next