Advertisement

ಅಬ್ಟಾ! ಕಾಲೇಜಲ್ಲಿ ಹೀಗೆಲ್ಲ ಇರುತ್ತಾ?

12:30 PM May 02, 2017 | Team Udayavani |

ಎಸ್ಸೆಸ್ಸೆಲ್ಸಿ ಮುಗಿಸಿ ಕಾಲೇಜು ಮೆಟ್ಟಿಲೇರಿದ ಬಳಿಕ ತಿಳಿಯಿತು ವಿದ್ಯಾರ್ಥಿ ಜೀವನ ಅಂದ್ರೆ ಏನು ಅಂತ. ಅದೊಂದು ಹೊಸಮಜಲು. ಮೊದಮೊದಲು ಕಾಲೇಜಲ್ಲಿ ಹೀಗೆಲ್ಲಾ ಇರುತ್ತಾ ಅಂತ ಭಯ ಅದ್ರೂ ನಂತರ ಅದೇ ದಿನಚರಿ ಆಯಿತು. ಪರಿಶ್ರಮದ ಜೊತೆಗೆ ಲಕ್‌ ಕೈ ಹಿಡಿದಿದ್ರಿಂದ ಒಳ್ಳೆಯ ಮಾರ್ಕ್ಸ್, ಪ್ರತಿಷ್ಟಿತ ಕಾಲೇಜು, ಮತ್ತು ಮರೆಯಲಾರದ ಸ್ನೇಹಿತರು ಎಲ್ಲಾ ಸಿಕ್ಕಿದ್ರು. ಕಾಲೇಜ್‌ ಲೈಫ‌ು ಅಂದ್ಮೇಲೆ ಒಂದು ಗ್ಯಾಂಗ್‌ ಇಲೆªà ಇರುತ್ತಾ. ನಮ್ಮ ಟೀಮ್‌ ದೊಡ್ಡದಾಗಿ ಬೆಳೀತು. ನಮ್ಮಲ್ಲಿ ಯಾರಾದರೂ ಒಬ್ಬರು ರಜಾ ಅಂತ ತಿಳಿದ್ರೆ, ಅವತ್ತು ನಮ್ಮ ಟೀಂಗೆ ಟೀಮೇ ಚಕ್ಕರ್‌. ಲೆಕ್ಚರರ್ ಅಂತೂ ನಮ್ಮ ಚಕ್ಕರ್‌ಗೆ ಕಾರಣ ಕೇಳುತ್ತಲೇ ಇರಲಿಲ್ಲ. ಅವರಿಗೆ ನಮ್ಮ ಒಗ್ಗಟ್ಟು ನೋಡಿ ಭಯ ಇತ್ತು ಅಂತ ಅನ್ನಿಸುತ್ತೆ.
ಇವೆಲ್ಲದರ ನಡುವೆ, ನೀವೇನ್‌ ಹೀಗೆ? ಕಾಲೇಜಿನಲ್ಲಿ ಹಿಂಗೆಲ್ಲಾ ಇರ್ತಾರಾ? ಇಲ್ಲಿಗೆ ಬರೋದು ಓದೋದಕ್ಕೆ, ತರೆಲ ಮಾಡೋದಿಕ್ಕಲ್ಲಾ ಅಂತ ಬುದ್ಧಿಮಾತು ಹೇಳುತ್ತಿದ್ದ ತಂಡ ಮತ್ತೂಂದೆಡೆ. ನಾವು ಯಾವಾಗ ಅವರ ಮಾತುಗಳನ್ನು ಕೇಳ್ಳೋದನ್ನ ಬಿಟ್ಟೆವೋ, ಅವರು ನಮಗೆ ಹೇಳ್ಳೋದನ್ನೂ ಬಿಟ್ರಾ.

Advertisement

ಇನ್ನು ಕ್ಲಾಸಲ್ಲಿ ಒಂದು ದಿನವೂ ಪಾಠ ಕೇಳಿದವರೇ ಅಲ್ಲ ನಾವು. ಕೆಲವೊಂದು ಕ್ಲಾಸ್‌ಗಳಲ್ಲಿ ಸೀರಿಯಸ್ನೆಸ್‌ ಬರೋದೆ ಅಪರೂಪ. ಯಾರದ್ದಾದರೂ ಬರ್ತ್‌ಡೇ ಇದ್ರೆ ಸಾಕು, ಅವರ ಪರ್ಸ್‌ ಖಾಲಿಯಾಗೋ ತನಕ ಬಿಡುತ್ತಿರಲಿಲ್ಲ. ನಮ್ಮ ಟೀಂನ ಪ್ರತಿಯೊಬ್ಬರ ಉಪನಾಮ ಗಳು ಸೂಪರ್ರಾಗಿ ಇರಿ¤ತ್ತು. ಒಬ್ಬನ ಹೆಸರು ಜೋಕರ್‌ ಎಂದಿದ್ದರೆ, ಮತ್ತೂಬ್ಬನಿಗೆ ಕಂಜೂಸ್‌ ಎಂಬ ನಾಮಧೇಯ. ನಮ್ಮ ನಮ್ಮ ಅಡ್ಡಹೆಸರುಗಳಿಂದಲೇ ನಾವು ಕಾಲೇಜಿನಲ್ಲಿ ಫೇಮಸ್‌ ಆಗಿದ್ದೆವು.

ಅಪರೂಪಕ್ಕೆ ಗೆಳೆಯರ ಮನೆಯ ಕಾರ್ಯಕ್ರಮ ಬಂದರೆ ಸಂಭ್ರಮವೋ ಸಂಭ್ರಮ. ಆ ದಿನ ಕಾಲೇಜಿನಲ್ಲಿ ನಮ್ಮ ಟೀಮ್‌
ಆಬೆÕಂಟ್‌. ಆದರೆ ಪರೀಕ್ಷೆ ಸಮಯದಲ್ಲಿ ಇಷ್ಟ ಇಲ್ಲದಿದ್ರೂ ಬಹುಜನರ ಒತ್ತಾಯದ ಮೇರೆಗೆ ಓದಿ ಒಳ್ಳೆ ಅಂಕ ಪಡೆಯುತ್ತಿದ್ದೆವು. ಅದೇ ಕಾರಣ ಇರ್ಬೇಕು, ಎಷ್ಟೇ ಕಿತಾಪತಿ ಮಾಡಿದರೂ ನಮ್ಮನ್ನು ಸಹಿಸಿಕೊಳ್ಳುವುದಕ್ಕೆ. ಅದೇನೇ ಆಗಲಿ, ಲೆಕ್ಚರರ್‌ ಅಂದ್ರೆ ನಮ್ಗೆ ಗೌರವ ಹೆಚ್ಚು. ಅವರ ಬಳಿ ಕೆಲವೊಮ್ಮೆ ಸಲುಗೆಯಿಂದಲೂ ಇರುತ್ತಿದ್ದೆವು.

ಆಗಿನ ಎಲ್ಲ ಕ್ಷಣಗಳೂ ನೆನಪಿನಲ್ಲಿವೆ. ಈಗಲೂ ನಾವು ಗೆಳೆಯರು ಭೇಟಿಯಾದಾಗ ಇವೆಲ್ಲಾ ನೆನಪುಗಳನ್ನು ಮೆಲುಕು ಹಾಕುತ್ತೇವೆ.

– ಶ್ರೀಪ್ರಿಯಾ, ಮೂಡಬಿದಿರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next