Advertisement
ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡಿರುವ ಇಲ್ಲಿನ ವಿಜಯನಗರಶ್ರೀಕೃಷ್ಣದೇವರಾಯ ವಿವಿಯು ಕಳೆದ ಅ. 22ರಂದು ಪದವಿ ಅಂತಿಮ ವರ್ಷದ ಫಲಿತಾಂಶವನ್ನು ಆನ್ ಲೈನ್‌ನಲ್ಲಿ ಪ್ರಕಟಿಸಿದೆ. ಆದರೆ, ಬಳ್ಳಾರಿ ನಗರದ ಶ್ರೀಗುರುತಿಪ್ಪೆರುದ್ರ ಪದವಿ ಕಾಲೇಜು, ನಂದಿ, ಪಿಆರ್‌ಕೆ, ಸಿರುಗುಪ್ಪತಾಲೂಕಿನ ವಾಲ್ಮೀಕಿ ಮಹರ್ಷಿ, ಹನುಮಂತಮ್ಮ,ಜ್ಞಾನಭಾರತಿ ಪದವಿ ಕಾಲೇಜುಗಳು, ಹಡಗಲಿಯಜಿಬಿಆರ್ ಪದವಿ ಕಾಲೇಜು, ಕೊಪ್ಪಳದ ಶಾರದಾಂಬಪದವಿ ಕಾಲೇಜು ಸೇರಿ ಒಟ್ಟು 16 ಪದವಿ ಕಾಲೇಜುಗಳ ಬಿ.ಕಾಂ ಅಂತಿಮ ವರ್ಷದ ಫಲಿತಾಂಶವನ್ನು ಪ್ರಕಟಿಸದೆ ತಡೆಹಿಡಿಯಲಾಗಿದೆ.
Related Articles
Advertisement
ಉಪನ್ಯಾಸಕ ವೃತ್ತಿಯಲ್ಲಿ ಮೌಲ್ಯಮಾಪನವೂ ಪವಿತ್ರ ಕಾರ್ಯ. ಅಂತಹದ್ರಲ್ಲಿ ಮೌಲ್ಯಮಾಪನ ಮಾಡಲು ಏಕೆ ಇವರು ಅಸಡ್ಡೆ ತೋರುತ್ತಾರೆ. ಹಿಂದಿನ ವರ್ಷವೂ ಹೀಗೆ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಮೌಲ್ಯಮಾಪನಾ ಕಾರ್ಯ 10 ದಿನಗಳ ಕಾಲ ತಡವಾಗಿ ಆರಂಭಿಸಬೇಕಾಯಿತು. ಪ್ರತಿವರ್ಷ ಹೀಗೆ ಆದರೆ ಈಸಮಸ್ಯೆ ಬಗೆಹರಿಯುವುದು ಹೇಗೆ? ಆದ್ದರಿಂದ ಕೆಲಕಾಲೇಜುಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆಎಂದು ವಿವಿ ಮೌಲ್ಯಮಾಪನಾ ಕುಲಸಚಿವ ಶಶಿಕಾಂತ್ ಉಡಿಕೇರಿ ಕಾಲೇಜುಗಳ ಪ್ರಾಚಾರ್ಯರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ವಿವಿಯಿಂದ ಆದೇಶ ಬಂದಿಲ್ಲ: ಫಲಿತಾಂಶ ಪ್ರಕಟಗೊಳ್ಳದ ಕಾಲೇಜೊಂದರ ಪ್ರಾಚಾರ್ಯರುಹೇಳ್ಳೋದೆ ಬೇರೆ. ವಿವಿಯಿಂದ ಕೆಲ ಕಾಲೇಜುಗಳಿಗೆಆದೇಶನೇ ಹೊರಡಿಸಿಲ್ಲ. ಇನ್ನು ಕೆಲ ಕಾಲೇಜುಗಳಲ್ಲಿಇರುವ ಉಪನ್ಯಾಸಕರನ್ನು ನಿಯೋಜಿಸಲಾಗಿದ್ದು,ಅತಿಥಿ ಉಪನ್ಯಾಸಕರಂಥವರು ಸರ್ಕಾರಿ ಉದ್ಯೋಗಕ್ಕೆ ನೇಮಕವಾಗಿದ್ದರಿಂದ ಹೋಗಿಲ್ಲ. ಬಳ್ಳಾರಿ ಶ್ರೀಗುರುತಿಪ್ಪೇರುದ್ರ ಕಾಲೇಜಿನಿಂದ 21 ಜನ ಉಪನ್ಯಾಸಕರನ್ನು ನಿಯೋಜಿಸುವಂತೆ ವಿವಿ ಆದೇಶ ಹೊರಡಿಸಿತ್ತು.
ಈ ಪೈಕಿ 17 ಜನ ಉಪನ್ಯಾಸಕರು ಮೌಲ್ಯಮಾಪನಕ್ಕೆ ಹಾಜರಾಗಿದ್ದಾರೆ. ಇನ್ನು ನಾಲ್ವರಲ್ಲಿ ಒಬ್ಬರು ಲಾಕ್ ಡೌನ್ ಪರಿಣಾಮ ಕೆಲಸ ಬಿಟ್ಟು ಸ್ವಯಂ ಉದ್ಯೋಗ
ಮಾಡಿಕೊಳ್ಳುತ್ತಿದ್ದರೆ ಒಬ್ಬರು ಮೆಟರ್ನಿಟಿ ರಜೆಗೆ ತೆರಳಿದ್ದಾರೆ. ಇನ್ನಿಬ್ಬರು ಅನಿವಾರ್ಯ ಕಾರಣಗಳಿಂದ ಹೋಗಿಲ್ಲ. ಈ ಕುರಿತು ದಾಖಲೆ ಸಮೇತ ವಿವಿಕುಲಪತಿಗಳ ಗಮನಕ್ಕೆ ತಂದಿದ್ದೇನೆ. ಅವರು ನಿಮ್ಮದೆಲ್ಲಸರಿಯಿದೆ ಎಂದಿದ್ದಾರೆ. ಮೇಲಾಗಿ ಸಿಂಡಿಕೇಟ್ ಸದಸ್ಯರ ಗಮನಕ್ಕೂ ತಂದಿದ್ದರೂ ಕುಲಸಚಿವರು ಕ್ಯಾರೆ ಎನ್ನುತ್ತಿಲ್ಲ.
ಫಲಿತಾಂಶ ಪ್ರಕಟವಾಗದಿದ್ದರೆ ವಿದ್ಯಾರ್ಥಿಗಳೂ ಆತಂಕಕ್ಕೊಳಗಾಗಲಿದ್ದು ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದಾರೋ ಇಲ್ಲವೋ ಎಂಬ ಅನುಮಾನ ಪೋಷಕರನ್ನು ಕಾಡಲಿದೆ. ಹಾಗಾಗಿ ಫಲಿತಾಂಶತಡೆಹಿಡಿಯುವುದು ಸರಿಯಲ್ಲ. ವಿದ್ಯಾರ್ಥಿಗಳ ಮೇಲೆಪರಿಣಾಮ ಬೀರಬಾರದು ಎಂದು ಎಸ್‌ಜಿಟಿ ಕಾಲೇಜು ಪ್ರಾಚಾರ್ಯ ಎಸ್.ಎನ್.ರುದ್ರಪ್ಪ ವಿವಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಫಲಿತಾಂಶ ತಡೆಹಿಡಿದಿರುವ ಕಾಲೇಜುಗಳ ಉಪನ್ಯಾಸಕರು ಮೌಲ್ಯಮಾಪನ ಕಾರ್ಯಕ್ಕೆ ಬರದೇ ಅಸಡ್ಡೆ ತೋರುತ್ತಿದ್ದಾರೆ. ಎಲ್ಲ ಕಾಲೇಜುಗಳಿಂದ 190ಕ್ಕೂ ಹೆಚ್ಚುಉಪನ್ಯಾಸಕರನ್ನು ನಿಯೋಜಿಸಿದರೆ ಕೇವಲ35-45 ಜನರು ಬಂದಿದ್ದಾರೆ. ಉಪನ್ಯಾಸಕರೇಬರದಿದ್ದರೆ ಮೌಲ್ಯಮಾಪನ ಕಾರ್ಯಕ್ಕೆ ತೊಂದರೆಯಾಗಲಿದೆ. ಕಳೆದ ವರ್ಷವೂ ಹೀಗೆಅಸಡ್ಡೆ ತೋರಿದ್ದರು. ಆಗಲೂ 10 ದಿನ ತಡವಾಗಿ ಮೌಲ್ಯಮಾಪನ ಕಾರ್ಯ ಆರಂಭವಾಯಿತು. ಈ ಬಾರಿಯೂ ಅದೇ ಮುಂದುವರೆದಿದ್ದಕ್ಕೆ ಕೆಲಕಾಲೇಜುಗಳ ಫಲಿತಾಂಶ ತಡೆಹಿಡಿಯಲಾಗಿದೆ. –ಶಶಿಕಾಂತ್ ಉಡಿಕೇರಿ, ಮೌಲ್ಯಮಾಪನಾ ಕುಲಸಚಿವರು, ವಿಎಸ್‌ಕೆ ವಿವಿ, ಬಳ್ಳಾರಿ.
ವಿಎಸ್‌ಕೆ ವಿವಿ ವ್ಯಾಪ್ತಿಯ ಬಳ್ಳಾರಿ, ಕೊಪ್ಪಳ ಜಿಲ್ಲೆಗಳ 16 ಕಾಲೇಜುಗಳಫಲಿತಾಂಶಗಳನ್ನು ತಡೆಹಿಡಿಯಲಾಗಿದೆ. ಕೆಲ ಕಾಲೇಜುಗಳಲ್ಲಿ ಕೆಲವರು ಅನಿವಾರ್ಯಕಾರಣಗಳಿಂದ ಮೌಲ್ಯಮಾಪನ ಕಾರ್ಯಕ್ಕೆಹಾಜರಾಗಿಲ್ಲ. ಇನ್ನು ಕೆಲ ಕಾಲೇಜುಗಳಿಗೆಆದೇಶವನ್ನೇ ಹೊರಡಿಸಿಲ್ಲ. ಈ ಕುರಿತು ಸೂಕ್ತದಾಖಲೆಗಳನ್ನು ಸಲ್ಲಿಸಿದ್ದರೂ ಫಲಿತಾಂಶವನ್ನು ಪ್ರಕಟಿಸಿಲ್ಲ. ಇದು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಲಿದ್ದು, ಮಕ್ಕಳು ಪರೀಕ್ಷೆಬರೆದಿದ್ದಾರೋ ಇಲ್ಲವೋ ಎಂಬ ಅನುಮಾನಪೋಷಕರನ್ನು ಕಾಡಲಿದೆ. –ಎಸ್.ಎನ್. ರುದ್ರಪ್ಪ, ಪ್ರಾಚಾರ್ಯರು, ಶ್ರೀಗುರು ತಿಪ್ಪೇರುದ್ರ ಕಾಲೇಜು, ಬಳ್ಳಾರಿ.
–ವೆಂಕೋಬಿ ಸಂಗನಕಲ್ಲು