Advertisement
ನಾನು ತುಂಬು ಗರ್ಭಿಣಿಯಾಗಿದ್ದ ದಿನಗಳ ಒಂದು ನೆನಪು. ಅಡುಗೆ ಮಾಡಲು ಒಬ್ಬರನ್ನು ನೇಮಿಸಿಕೊಂಡಿದ್ದೆ. ನನಗೆ ಆರು ತಿಂಗಳು ಇದ್ದಾಗಿನಿಂದಲೇ ಅವರು ಅಡುಗೆಗೆ ಬರುತ್ತಿದ್ದರು. ಆ ಹೆಂಗಸಿಗೆ ಅರವತ್ತರ ಪ್ರಾಯ. ತುಂಬಾ ಶೃಂಗಾರಪ್ರಿಯರು. ನಾನು ಅಷ್ಟೇ ಸರಳಜೀವಿ. ಅವರು ಯಾವಾಗಲೂ ನನಗೆ, “ಹಾಗೆ ಮೇಕಪ್ ಮಾಡಿಕೋ, ಹೀಗೆ ತಲೆ ಬಾಚಿಕೋ’ ಅಂತೆಲ್ಲ ಹೇಳುತ್ತಿದ್ದರು. ಇದನ್ನು ಕೇಳಿ ನನಗೆ ಕಿರಿಕಿರಿಯಾಗುತ್ತಿತ್ತು. ಇನ್ನೇನು ಡೆಲಿವರಿ ದಿನ ಹತ್ತಿರ ಬರುವಾಗ ಅವರು ನನ್ನಲ್ಲಿ “ಮೇಡಂ, ನೀವು ನೋಡಲು ಎಷ್ಟೊಂದು ಚೆನ್ನಾಗಿದ್ದೀರಾ. ನಿಮ್ಮ ಬಿಳಿಕೂದಲಿಗೆ ಕಪ್ಪು ಬಣ್ಣ ಹಚ್ಚಿಕೊಂಡರೆ, ಇನ್ನಷ್ಟು ಚೆನ್ನಾಗಿ ಕಾಣಿ¤àರ’ ಎಂದು ತಮ್ಮ ಇಂಗಿತವನ್ನು ನನ್ನ ಮುಂದಿಟ್ಟರು. ಅದಕ್ಕೆ ನಾನು, “ಅಂಟಿ… ನನಗೆ ಹೇರ್ ಕಲರ್ ಹಚ್ಚಿದ್ರೆ, ಅಲರ್ಜಿ ಆಗುತ್ತೆ. ಅದಕ್ಕಾಗಿ ಹಚ್ಚಿಕೊಳ್ಳುವುದಿಲ್ಲ. ನನಗೆ ಅದು ಇಷ್ಟವೂ ಇಲ್ಲ. ಕಲರ್ ಹಚ್ಚುವುದರಿಂದ ಕೂದಲು ಉದುರುತ್ತೆ’ ಅಂತ ವಾದ ಮಂಡಿಸಿದ್ದೆ. “ನಿಮಗೆ ಡೆಲಿವರಿಯಾದ ನಂತರ ನಿಮ್ಮನ್ನು, ಮಗುವನ್ನು ನೋಡಲು ಜನರು ಬರ್ತಾರೆ. ಆಗ ನಿಮಗೆ ಮುಜುಗರ ಆಗುವುದಿಲ್ಲವೇ?’, ಮತ್ತೆ ತಲೆಗೆ ಹುಳಬಿಟ್ಟರು. “ನನಗಿಂತ ನಿಮಗೇ ನನ್ನ ಕೂದಲ ಬಗ್ಗೆ ಕಾಳಜಿ ಇದೆಯಲ್ಲ’ ಎಂದು ಅವರ ಮಾತಿಗೆ ಉತ್ತರಿಸದೆ, ಅಲ್ಲಿಂದ ಎದ್ದು ಆಚೆ ಹೋದೆ. ನಂತರ ಬಂದ ಇನ್ನೊಬ್ಬಳು ಕೆಲಸದವಳು, “ಅಕ್ಕಾ, ನೀನು ನನಗಿಂತ ಚಿಕ್ಕವಳು. ಕೂದಲಿಗೆ ಬಣ್ಣ ಹಾಕ್ಕೋ ಅಕ್ಕ’ ಎಂದು ಟಿಪ್ಸ್ ನೀಡಿದ್ದಳು. ಅದಕ್ಕೂ ಗರಂ ಆಗಿದ್ದೆ.
Related Articles
Advertisement
ಆಗೊಮ್ಮೆ ಈಗೊಮ್ಮೆ ಬ್ಯೂಟಿಪಾರ್ಲರಿಗೆ ಹೋದಾಗ, ಅಲ್ಲೂ ನನಗೆ ಪುಕ್ಕಟೆ ಸಲಹೆಗಳು ಕಿವಿಗೆ ಬೀಳುತ್ತವೆ… “ಮೇಡಂ, ಈ ಬ್ರಾಂಡ್ ಹೇರ್ ಕಲರ್ ಇದೆ. ಒಮ್ಮೆ ಟ್ರೈ ಮಾಡಿ’ ಅಂತಾರೆ. “ಈ ಬಣ್ಣ ಬಣ್ಣದ ಹೇರ್ ಕಲರ್ ಕಂಪನಿಗಳು ದಿನಕ್ಕೊಂದು ಹುಟ್ಟಿಕೊಳ್ಳದಿದ್ದರೆ, ನೀವೂ ನನ್ನಂತೆ ಇರುತ್ತಿದ್ದಿರಿ’ ಎಂದು ಮನಸ್ಸಿನಲ್ಲೇ ಅಂದುಕೊಂಡು ಸುಮ್ಮನಾಗುವುದನ್ನು ಇತ್ತೀಚಿನ ದಿನಗಳಲ್ಲಿ ಕಲಿತಿದ್ದೇನೆ.
ವೇದಾವತಿ ಎಚ್.ಎಸ್.