Advertisement

ಏಕತಾ ಪ್ರತಿಮೆ: ನಿಮಗೆ ನಮ್ಮ ಬಹಿಷ್ಕಾರ: ಮೋದಿಗೆ ಗ್ರಾಮಸ್ಥರ ಪತ್ರ

03:50 PM Oct 30, 2018 | udayavani editorial |

ಕೇವಾಡಿಯಾ, ಗುಜರಾತ್‌ : ದೇಶದ ಮೊದಲ ಗೃಹ ಸಚಿವರಾಗಿ ದೇಶದ ಏಕತೆ ಮತ್ತು ಸಮಗ್ರತೆಯನ್ನು ಸಾಧಿಸುವ ಮೂಲಕ ಉಕ್ಕಿನ ಮನುಷ್ಯ ಎಂದೇ ಕರೆಯಲ್ಪಡುತ್ತಿದ್ದ  ಸರ್ದಾರ್‌ ವಲ್ಲಭ ಭಾಯಿ ಪಟೇಲ್‌ ಅವರ “ಏಕತೆಯ ಪ್ರತಿಮೆ’ಯನ್ನು ಅನಾವರಣಗೊಳಿಸುವ ಕಾರ್ಯಕ್ರಮ ನಾಳೆ ಅ.31ರಂದು ನಡೆಯಲಿದೆ. 

Advertisement

ಇದಕ್ಕಾಗಿ ಇಲ್ಲಿಗೆ ಬರಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿರುವ ಕೇವಾಡಿಯಾ ಸಹಿತ ಸುಮಾರು 22 ಗ್ರಾಮಗಳ ಮುಖಂಡರು, “ನಿಮ್ಮನ್ನು ನಾವು ಸ್ವಾಗತಿಸುವುದಿಲ್ಲ; ನೀವು ನಮಗೆ ಬೇಡದ ಅತಿಥಿಯಾಗಿದ್ದೀರಿ’ ಎಂದು ತಮ್ಮ ಆಕ್ರೋಶ, ಅಸಮಾಧಾನವನ್ನು ಬಹಿರಂಗಪಡಿಸಿದ್ದಾರೆ.

‘ಸ್ಮಾರಕ ನಿರ್ಮಾಣಕ್ಕಾಗಿ ವ್ಯಾಪಕ ಪ್ರಕೃತಿ ನಾಶ ನಡೆದಿರವ ಕಾರಣಕ್ಕೆ ನಾವು ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಬಹಿಷ್ಕರಿಸುತ್ತೇವೆ’ ಎಂದು ಗ್ರಾಮ ಮುಖಂಡರು ಪತ್ರದಲ್ಲಿ ಹೇಳಿದ್ದಾರೆ.

ಸರ್ದಾರ್‌ ಸರೋವರ್‌ ಅಣೆಕಟ್ಟು ಸಮೀಪ 22 ಗ್ರಾಮಗಳ ಮುಖಂಡರು ತಮ್ಮ ಪತ್ರದಲ್ಲಿ “ಸರ್ದಾರ್‌ ಸ್ಮಾರಕ ನಿರ್ಮಾಣಕ್ಕಾಗಿ ಅರಣ್ಯ, ನದಿ, ಜಲಪಾತ, ಭೂಮಿ ಮತ್ತು ಕೃಷಿ ಪ್ರದೇಶಗಳನ್ನು ವ್ಯಾಪಕವಾಗಿ ನಾಶಮಾಡಲಾಗಿದೆ. ನಾವು ತಲೆತಲಾಂತರಗಳಿಂದ ಇವನ್ನೇ ನೆಚ್ಚಿಕೊಂಡು ಬದುಕು ನಡೆಸುತ್ತಾ ಬಂದಿದ್ದೇವೆ. ಸ್ಮಾರಕ ಉದ್ಘಾಟನೆಯ ಕಾರ್ಯಕ್ರಮ ನಿಜಕ್ಕೂ ಸಾವಿನ ಸಂಭ್ರಮಾಚರಣೆ ಅಲ್ಲವೇ ? ಹಾಗೆಂದು ನಿಮಗೆ ಅನ್ನಿಸುವುದಿಲ್ಲವೇ ?’ ಎಂದು  ಪ್ರಶ್ನಿಸಿದ್ದಾರೆ. 

ಕೇವಾಡಿಯಾ ಗ್ರಾಮಕ್ಕೆ ಸಮೀಪದ ಕಿರು ದ್ವೀಪವೊಂದರಲ್ಲಿ ನಿರ್ಮಿಸಲಾಗಿರುವ 182 ಮೀಟರ್‌ ಎತ್ತರದ ಸರ್ದಾರ್‌ ವಲ್ಲಭ ಭಾಯಿ ಪಟೇಲ್‌ ಪ್ರತಿಮೆ ವಿಶ್ವದಲ್ಲೇ ಅತೀ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. 

Advertisement

ಏಕತಾ ಪ್ರತಿಮೆ ಯೋಜನೆಯನ್ನು ಕಾಂಗ್ರೆಸ್‌ ಮಾತ್ರವಲ್ಲದೆ ಹಿರಿಯ ಗುಜರಾತ್‌ ರಾಜಕಾರಣಿ ಶಂಕರ್‌ ಸಿಂಗ್‌ ವಘೇಲಾ ಕೂಡ ತೀವ್ರವಾಗಿ ಟೀಕಿಸಿದ್ದಾರೆ. 

“ಈ ಸ್ಮಾರಕ ರಚನೆಗಾಗಿ ಜನರ ಹಣವನ್ನು ಅಪವ್ಯಯ ಮಾಡಲಾಗಿದೆ. ನಿಜಕ್ಕಾದರೆ ಗುಜರಾತ್‌ ನಲ್ಲಿ ಅದೆಷ್ಟೋ ಹಳ್ಳಿಗಳಲ್ಲಿ ಶಾಲೆ, ಆಸ್ಪತ್ರೆ, ಕುಡಿಯುವ ನೀರು ಮೊದಲಾದ ಮೂಲ ಸೌಕರ್ಯಗಳೇ ಇಲ್ಲ. ಜನರ ಈ ಹಣವನ್ನು ಜನರಿಗಾಗಿ ಉಪಯೋಗಿಸಬೇಕಾಗಿತ್ತು. ಸರ್ದಾರ್‌ ಪಟೇಲ್‌ ಜೀವಿತದಲ್ಲಿದ್ದರೆ ಅವರು ಕೂಡ ಈ ಯೋಜನೆಗೆ ಅವಕಾಶ ನೀಡುತ್ತಿರಲಿಲ್ಲ’ ಎಂದು ಗ್ರಾಮ ಮುಖಂಡರು ಪತ್ರದಲ್ಲಿ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next