Advertisement

Statue Of Unity: ದೇಶ ವಿಭಜಿಸಲು ಕೆಲವು ಶಕ್ತಿಗಳ ಯತ್ನ: ಪ್ರಧಾನಿ ನರೇಂದ್ರ ಮೋದಿ

02:00 AM Nov 01, 2024 | Team Udayavani |

ಏಕ್ತಾ ನಗರ: ಜಗತ್ತಿನ ಕಣ್ಣಿನಲ್ಲಿ ದೇಶವನ್ನು ನಕಾರಾತ್ಮಕವಾಗಿ ಚಿತ್ರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಆರೋಪಿಸಿದ್ದಾರೆ.

Advertisement

ಸರ್ದಾರ್‌ ವಲ್ಲಭ ಭಾಯಿ ಪಟೇಲ್‌ ಅವರ 149ನೇ ಜನ್ಮ ದಿನಾಚರಣೆ ಪ್ರಯುಕ್ತ ಗುರುವಾರ ಗುಜರಾತ್‌ನ ಏಕತಾ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಮೋದಿ, ದೇಶದ ಒಳಗೆ ಮತ್ತು ಹೊರಗೆ ದೇಶವನ್ನು ವಿಭಜಿಸಲು ಇಂಥ ಶಕ್ತಿಗಳು ಕೆಲಸ ಮಾಡುತ್ತಿವೆ. ಅಂಥ ನಗರ ನಕ್ಸಲರ ವಿರುದ್ಧ ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ದೇಶದ ಪ್ರಭಾವ, ವರ್ಚಸ್ಸು ಹೆಚ್ಚಾಗುತ್ತಿದೆ. ಅದನ್ನು ಸಹಿಸಲು ಕೆಲವು ಶಕ್ತಿಗಳಿಗೆ ಸಾಧ್ಯವಾಗುತ್ತಿಲ್ಲ ಎಂದೂ ಪ್ರಧಾನಿ ಮೋದಿ ಹೇಳಿದ್ದಾರೆ.

ವಿಪಕ್ಷಗಳ ವಿರುದ್ಧವೂ ಹೆಸರೆತ್ತದೆ ಟೀಕಿಸಿದ ಪ್ರಧಾನಿ ಮೋದಿ “ಕೆಲವರು ದೇಶದ ವಿರುದ್ಧ ಸುಳ್ಳು ಮಾಹಿತಿ ನೀಡುವ ಮೂಲಕ ಅಪಪ್ರಚಾರ ನಡೆಸುತ್ತಿ ದ್ದಾರೆ. ನಮ್ಮ ಸರಕಾರದ 10 ವರ್ಷಗಳ ಶ್ರಮದ ಫ‌ಲವಾಗಿ ಅರಣ್ಯ ಪ್ರದೇಶದಲ್ಲಿ ನಕ್ಸಲ್‌ ಪಿಡುಗನ್ನು ಮಟ್ಟ ಹಾಕಿದ್ದೇವೆ. ಆದರೆ ಹೊಸ ಮಾದರಿಯ ನಗರ ನಕ್ಸಲರು (ಅರ್ಬನ್‌ ನಕ್ಸಲ್‌) ಹುಟ್ಟಿಕೊಂಡಿದ್ದು, ದೇಶ ಇಬ್ಭಾಗ ಮಾಡಲು ಯತ್ನಿಸುತ್ತಿದ್ದಾರೆ ಎಂದರು.

ಸುಳ್ಳು ಪ್ರಚಾರದ ಮೂಲಕ ದೇಶದ ಅರ್ಥ ವ್ಯವಸ್ಥೆ ಹದಗೆಡಿಸಲು ಅವರು ಮುಂದಾಗಿದ್ದಾರೆ. ಈ ಮೂಲಕ ವಿದೇಶಿ ಬಂಡವಾಳ ಹರಿದು ಬರುವುದನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಮೋದಿ ಟೀಕಿಸಿದ್ದಾರೆ. ಜಾತಿ ಹೆಸರಲ್ಲಿ ದೇಶ ವಿಭಜಿಸಲು ಮುಂದಾಗಿದ್ದಾರೆ. 5 ದಶಕದಿಂದ ಅವರು ಇದನ್ನೇ ಮಾಡಿದ್ದಾರೆ ಎಂದಿದ್ದಾರೆ.

Advertisement

 ಏಕ ಚುನಾವಣೆ ಶೀಘ್ರ ನನಸು:
“ಒಂದು ರಾಷ್ಟ್ರ, ಒಂದು ಚುನಾವಣೆ’ ಪರಿಕಲ್ಪನೆ ಶೀಘ್ರ ನನಸಾಗಲಿದೆ ಅದಕ್ಕೆ ಸಂಬಂಧಿಸಿದ ಮಸೂದೆಯನ್ನು ಸಂಸತ್‌ನಲ್ಲಿ ಮಂಡಿಸಲಾಗುತ್ತದೆ. ನಾಗರಿಕ ಸಂಹಿತೆಯೂ ಅನುಷ್ಠಾನಗೊಳ್ಳಲಿದೆ ಎಂದು ಮೋದಿ ಹೇಳಿದ್ದಾರೆ. ಜತೆಗೆ ಜಮ್ಮು ಕಾಶ್ಮೀರದ ಅಭಿ ವೃದ್ಧಿಗೆ ಮಾರಕವಾಗಿದ್ದ 370ನೇ ವಿಧಿಯನ್ನು ಮುಂದೆ ಎಂದಿಗೂ ಜಾರಿ ಮಾಡಲು ಸಾಧ್ಯವೇ ಆಗದಂತೆ ಶಾಶ್ವತ ಸಮಾಧಿ ಮಾಡಿದ್ದೇವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next