Advertisement

ಜ. 11-13: ರಾಜ್ಯಾದ್ಯಂತ ಬಿಜೆಪಿ ಜನಸೇವಕ ಸಮಾವೇಶ

02:02 AM Jan 10, 2021 | Team Udayavani |

ಮಂಗಳೂರು: ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಗೆದ್ದಿರುವ ಬಿಜೆಪಿ ಬೆಂಬಲಿತ ಜನಪ್ರತಿನಿಧಿಗಳಿಗೆ ಅಭಿನಂದನೆ ಹಾಗೂ ಮುಂದಿನ ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯತ್‌ ಚುನಾವಣೆ ತಯಾರಿ ದೃಷ್ಟಿಯಿಂದ ಜ. 11ರಿಂದ 13ರ ವರೆಗೆ ರಾಜ್ಯಾದ್ಯಂತ “ಜನಸೇವಕ ಸಮಾವೇಶ’ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಕ್ಯಾ| ಗಣೇಶ್‌ ಕಾರ್ಣಿಕ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಜ. 11ರಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಉದ್ಘಾಟಿಸುವರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಉದ್ಘಾಟನಾ ಸಮಾರಂಭದ ನೇತೃತ್ವ ವಹಿಸಲಿದ್ದಾರೆ. ಪ್ರತೀ ಸಮಾವೇಶದಲ್ಲಿ 1ರಿಂದ 3 ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ರೈತ ಪ್ರತಿಭಟನೆ ವ್ಯವಸ್ಥಿತ ಸಂಚು :

ಕೇಂದ್ರ ಸರಕಾರ ಜಾರಿಗೊಳಿಸಿರುವ ಕೃಷಿ ಮಸೂದೆ ವಿರುದ್ಧ ದಿಲ್ಲಿ, ಹರಿಯಾಣ, ಪಂಜಾಬ್‌ಗಳನ್ನು ಹೊರತು ಬೇರೆ ಯಾವುದೇ ರಾಜ್ಯಗಳಲ್ಲಿ ಪ್ರತಿಭಟನೆ ನಡೆಯುತ್ತಿಲ್ಲ. ಈ ಪ್ರತಿಭಟನೆಯ ಹಿಂದೆ ವ್ಯವಸ್ಥಿತ ಸಂಚು ಇದೆ ಎಂದು ಕ್ಯಾ| ಕಾರ್ಣಿಕ್‌ ಆರೋಪಿಸಿದರು.

ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಮುಡಾ ಅಧ್ಯಕ್ಷ ರವಿಶಂಕರ ಮಿಜಾರು, ಜಿಲ್ಲಾ ವಕ್ತಾರರಾದ ಜಗದೀಶ್‌ ಶೇಣವ, ರಾಧಾಕೃಷ್ಣ ಉಪಸ್ಥಿತರಿದ್ದರು.

Advertisement

3,142 ಗ್ರಾ.ಪಂ.ಗಳಲ್ಲಿ ಅಧಿಕಾರ :

ಚುನಾವಣೆಯಲ್ಲಿ ಒಟ್ಟು 5,670 ಗ್ರಾ.ಪಂ.ಗಳ ಪೈಕಿ 3,142 ಗ್ರಾ.ಪಂ.ಗಳಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರ ಗಳಿಸಿದ್ದು, ಶೇ. 55.4 ಸಾಧನೆ ಮಾಡಿದೆ. ಒಟ್ಟು 86,183 ಸದಸ್ಯರ ಪೈಕಿ 45,246 ಸದಸ್ಯರು (ಶೇ. 52.4) ಬಿಜೆಪಿ ಬೆಂಬಲಿತರು. 2015ರಲ್ಲಿ ಬಿಜೆಪಿ ಬೆಂಬಲಿತರು 1,934 ಗ್ರಾ.ಪಂಗಳಲ್ಲಿ ಅಧಿಕಾರ ಪಡೆದುಕೊಂಡಿದ್ದರು. ಈ ಬಾರಿ 1,208 ಗ್ರಾ.ಪಂ.ಗಳನ್ನು ಅಧಿಕವಾಗಿ ಪಡೆದುಕೊಳ್ಳಲಾಗಿದೆ ಎಂದು ಕ್ಯಾ| ಕಾರ್ಣಿಕ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next