ಹೊಸದಿಲ್ಲಿ: ಗ್ರಾಮೀಣ, ಗುಡ್ಡಗಾಡು ಮತ್ತು ದುರ್ಗಮ ಪ್ರಾಂತಗಳಲ್ಲಿ ಸೇವೆ ಸಲ್ಲಿಸಿದ ಎಂಬಿಬಿಎಸ್ ವೈದ್ಯರಿಗೆ ವೈದ್ಯಕೀಯ ಸ್ನಾತಕೋತ್ತರ ಪ್ರವೇಶದಲ್ಲಿ ಮೀಸಲಾತಿ ಕಲ್ಪಿಸಲು ಸು. ಕೋರ್ಟ್ ಸಮ್ಮತಿಸಿದೆ.
ಕೋಟಾ ಕುರಿತಂತೆ ಹಲವಾರು ವೈದ್ಯರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ, ಈ ರೀತಿ ಕೋಟಾ ನಿಗದಿ ಕಾನೂನು ಬಾಹಿರವಲ್ಲ. ಹಾಗಾಗಿ ರಾಜ್ಯ ಸರಕಾರಗಳು ಈ ಕೋಟಾ ನಿರ್ಧರಿಸಬಹುದು.
ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ)ಗೆ ಈ ಕೋಟಾ ನಿಗದಿಪಡಿಸಲು ಸಾಂವಿಧಾನಿಕ ಅಧಿಕಾರ ಇಲ್ಲವಾದರೆ ರಾಜ್ಯ ಸರಕಾರಗಳು ತಮ್ಮ ಸ್ವ ವಿವೇಚನೆಯ ಮೇರೆಗೆ ನಿಗದಿಪಡಿಸಬಹುದು.
ಈ ತೀರ್ಪು ಈಗಾಗಲೇ ಸ್ನಾತಕೋತ್ತರ ವೈದ್ಯಕೀಯ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಅನ್ವಯಿಸುವುದಿಲ್ಲ, ಮುಂದೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಅನ್ವಯಿಸಲಿದೆ ಎಂದಿದೆ.
ಕೆಲವು ರಾಜ್ಯಗಳು ಇಂಥ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಉಚಿತ ಅಂಕ ನೀಡುತ್ತಿರುವುದು ಔಚಿತ್ಯಪೂರ್ಣ ಎಂದೂ ನ್ಯಾಯಪೀಠ ಹೇಳಿದೆ.