Advertisement
ಬುಧವಾರ ಇಲ್ಲಿನ ಕುಸುಗಲ್ಲ ರಸ್ತೆಯ ಶ್ರೀನಿವಾಸ ಗಾರ್ಡನ್‌ನಲ್ಲಿ ಬಿಜೆಪಿ ಮಹಾನಗರ ಜಿಲ್ಲೆ ಹಾಗೂ ಗ್ರಾಮಾಂತರ ಜಿಲ್ಲೆ ವತಿಯಿಂದ ಏರ್ಪಡಿಸಿದ್ದ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
Related Articles
Advertisement
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತನಾಡಿದರು. ಮಾಜಿ ಶಾಸಕ ಅಶೋಕ ಕಾಟವೆ, ಮುಖಂಡರಾದ ಬಸವರಾಜ ಕುಂದಗೋಳಮಠ, ಸಂಜಯ ಕಪಟಕರ, ನಾಗೇಶ ಕಲಬುರ್ಗಿ, ಉಮಾ ಮುಕುಂದ, ತಿಪ್ಪಣ್ಣ ಮಜ್ಜಗಿ, ಸಂತೋಷ ಚವ್ಹಾಣ, ಪ್ರಭು ನವಲಗುಂದಮಠ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿ.ಆರ್.ಭಟ್ಟ, ಶ್ಯಾಮ ಮಲ್ಲನಗೌಡರ ಇನ್ನಿತರರಿದ್ದರು.
ಹೋರಾಟದಿಂದ ಬಂದ ಹೊರಟ್ಟಿ ಗೆಲುವು ನಿಶ್ಚಿತ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮಾತನಾಡಿ, ಸಂಘಟಿತವಾದ ಚುನಾವಣೆಯನ್ನು ಪಕ್ಷ ಮಾಡುತ್ತಿದೆ. ಹೋರಾಟದಿಂದ ಬಂದಿರುವ ಹೊರಟ್ಟಿ ಅವರ ಗೆಲುವು ನಿಶ್ಚಿತವಾಗಿದೆ. ಗೆಲುವು ಅವರ ಪರವಾಗಿದೆ. ಅವರ ಮತಗಳು ಹಾಗೂ ಬಿಜೆಪಿಯ ಮತಗಳು ಒಂದೆಡೆಯಾಗಿವೆ. ಹೀಗಾಗಿ ಅವರ ಗೆಲುವು ನೂರಕ್ಕೆ ನೂರರಷ್ಟು ನಿಶ್ಚಿತ. ಆದರೆ ಶೇ.80 ಮೊದಲ ಪ್ರಾಶಸ್ತ್ಯ ಮತಗಳು ಇವರ ಪರವಾಗಿ ಬರಬೇಕು. ದೊಡ್ಡ ಅಂತರದ ಗೆಲುವಿಗೆ ಶ್ರಮಿಸಬೇಕು. ಶಿಕ್ಷಕರ ಸಮಸ್ಯೆಗೆ ಡಬಲ್ ಇಂಜಿನ್ ಸರಕಾರ ಸ್ಪಂದಿಸಲಿದೆ. ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಪಕ್ಷದ ನಮ್ಮದು ಎಂದರು.
ಶಿಕ್ಷಕ ಸಮುದಾಯಕ್ಕೆ ಒಳಿತು ಮಾಡಿದ ನಾಯಕ: ವಿಧಾನ ಪರಿಷತ್ತು ಸದಸ್ಯ ಎಸ್.ವಿ.ಸಂಕನೂರು ಮಾತನಾಡಿ, ಹೊರಟ್ಟಿ ಅವರು ನಿರಂತರವಾಗಿ ಶಿಕ್ಷಕರ ಪರವಾಗಿ ಹೋರಾಟ ಮಾಡಿಕೊಂಡು ಬಂದವರು. ಹಲವು ಜ್ವಲಂತ ಸಮಸ್ಯೆಗಳ ವಿರುದ್ಧ ಹೋರಾಡಿ ಶಿಕ್ಷಕ ಸಮುದಾಯಕ್ಕೆ ಒಳಿತು ಮಾಡಿದ್ದಾರೆ. ಶಿಕ್ಷಣ ಸಚಿವರಾಗಿ ಹಲವು ಸುಧಾರಣೆಗಳನ್ನು ಶಿಕ್ಷಕರು ಮರೆಯುವಂತಿಲ್ಲ. ಅವರು ಇರದಿದ್ದರೆ ಕಾನೂನು ವಿವಿ ಇಲ್ಲಿಗೆ ಬರುತ್ತಿರಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಪ್ರಾಥಮಿಕ ಶಾಲಾ ಶಿಕ್ಷಕರ ಪರವಾಗಿ ಹೋರಾಟ ಮಾಡಿದ್ದಾರೆ. ಉಳಿದವರಿಗೆ ಅವರ ಕೊಡುಗೆ ಏನು. ಇನ್ನೂ ಈ ಭಾಗದಲ್ಲಿ ಹೆಸರು ಇಲ್ಲದ ಜೆಡಿಎಸ್ ಅಭ್ಯರ್ಥಿಯ ಹೋರಾಟವೇನು ಎಂದು ಶಿಕ್ಷಕರು ಪ್ರಶ್ನಿಸಬೇಕೆಂದರು.
ಇತಿಹಾಸ ಸೃಷ್ಟಿಸುವ ಅವಕಾಶ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಹೊಸ ಇತಿಹಾಸ ಸೃಷ್ಟಿಸುವ ಅವಕಾಶ ಶಿಕ್ಷಕರಿಗೆ ದೊರೆತಿದೆ. ಹೊರಟ್ಟಿಯವರ ಆಗಮನದಿಂದ ಮೊದಲ ಬಾರಿಗೆ ಈ ಕ್ಷೇತ್ರ ಬಿಜೆಪಿಗೆ ಒಲಿಯುತ್ತಿದೆ. ಇನ್ನೂ ಪಕ್ಷದಿಂದಲೇ ಇತಿಹಾಸ ಸೃಷ್ಟಿಸುತ್ತಿದ್ದಾರೆ. ದೊರೆತ ಅಲ್ಪಾವಧಿಯಲ್ಲಿ ವಹಿಸಿಕೊಂಡ ಇಲಾಖೆಗಳಲ್ಲಿ ದೊಡ್ಡ ಬದಲಾವಣೆ ತಂದಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಯಾರೂ ಮಾಡದ ಕೆಲಸಗಳನ್ನು ಮಾಡಿದ್ದಾರೆ. ಪ್ರಮುಖವಾಗಿ ಇಲಾಖೆ ಹಾಗೂ ಶಿಕ್ಷಕರ ಪ್ರಗತಿಗೆ ಹಲವು ಸುಧಾರಣೆಗಳನ್ನು ತಂದಿದ್ದಾರೆ ಎಂದರು.
ಎಂಟನೇ ಗೆಲುವು ಖಚಿತ: ಜಿಲ್ಲಾ ಉಸ್ತುವಾರಿ ಸಚಿವ ಆಚಾರ ಹಾಲಪ್ಪ ಶಿಕ್ಷಕರ ನಾಯಕರಾಗಿ ಆಯ್ಕೆಯಾಗುವುದರಲ್ಲಿ ಎರಡು ಮಾತಿಲ್ಲ. ಸುದೀರ್ಘ ರಾಜಕಾರಣದಲ್ಲಿ ಮತದಾರರ ಮನಸ್ಸು ಗೆಲ್ಲುವುದು ಸುಲಭವಲ್ಲ. ಪ್ರಾಮಾಣಿಕ ಸೇವೆ ಇದ್ದರೆ ಮಾತ್ರ ಇದು ಸಾಧ್ಯ. ತಮ್ಮ ಸಂಘಟನೆ ಮೂಲಕ ಚುನಾವಣೆ ಎದುರಿಸಿದವರು ಈ ಚುನಾವಣೆಯಲ್ಲಿ ಬಿಜೆಪಿಯ ಶಕ್ತಿ ಅವರೊಂದಿಗೆ ಕೈ ಜೋಡಿಸಿದೆ. ಇತರೆ ಅಭ್ಯರ್ಥಿಗಳ ಬಗ್ಗೆ ಚರ್ಚೆ ಮಾಡುವುದು ವ್ಯರ್ಥ ಎಂದರು.