ಕೆಲವು ದಿನಗಳ ಹಿಂದೆಯೇ ಸಭೆ ನಡೆಸಿದ್ದ ಎಸಿಎ, ಹನುಮ ವಿಹಾರಿಗೆ ನೋಟಿಸ್ ನೀಡಿದೆ. ಇದಕ್ಕೆ ವಿಹಾರಿ ಪ್ರತಿಕ್ರಿಯಿಸಿದ್ದಾರೆ.
Advertisement
ನಾನು ಬೇರೊಂದು ಕ್ರಿಕೆಟ್ ತಂಡದ ಪರ ಆಡಲು ಬಯಸಿದ್ದೇನೆ. ಹೀಗಾಗಿ ನಾನು ಎಸಿಎಯಿಂದ ನಿರಾಕ್ಷೇಪಣ ಪ್ರಮಾಣಪತ್ರಕ್ಕಾಗಿ ಕೋರಿದ್ದು, ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ ಎಂದಿರುವುದಾಗಿ ವರದಿ ಹೇಳಿದೆ. ಈ ಬಾರಿಯ ರಣಜಿ ಆವೃತ್ತಿಯಲ್ಲಿ ಪ.ಬಂಗಾಳ ವಿರುದ್ಧದ ಆರಂಭಿಕ ಪಂದ್ಯದಲ್ಲಿ 30 ವರ್ಷದ ವಿಹಾರಿ, ಆಂಧ್ರಪ್ರದೇಶ ತಂಡದ ನಾಯಕತ್ವ ವಹಿಸಿದ್ದರು. ಅವರನ್ನು ಇದ್ದಕ್ಕಿದ್ದಂತೆ ನಾಯಕತ್ವದಿಂದ ಕೆಳಕ್ಕಿಳಿಸಿ, ರಿಕ್ಕಿ ಭುಯಿಗೆ ಜವಾಬ್ದಾರಿ ನೀಡಲಾಗಿತ್ತು. ಈ ಬಗ್ಗೆ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ವಿಹಾರಿ, ಎಸಿಎ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಇನ್ನೆಂದೂ ನಾನು ಆಂಧ್ರಪ್ರದೇಶದ ಪರ ಆಡಲಾರೆ ಎಂದೂ ಹೇಳಿದ್ದರು. ಇದೇ ವಿಚಾರವಾಗಿ ವಿಹಾರಿ ವಿರುದ್ಧ ಎಸಿಎ ನೋಟಿಸ್ ಜಾರಿ ಮಾಡಿದೆ.