Advertisement

ಕೋವಿಡ್ ವಿರುದ್ಧದ ಹೋರಾಟದಲ್ಲಿ ಲಸಿಕೆ ಅತ್ಯಂತ ದೊಡ್ಡ ಅಸ್ತ್ರ : ಸುಧಾಕರ್

05:59 PM Apr 21, 2021 | Team Udayavani |

ಬೆಂಗಳೂರು : ದೇಶದಲದಲಿ ಕೋವಿಡ್ ಸೋಂಕಿನ ವೇಗ ಹೆಚ್ಚಳವಾಗಿದ್ದು, ದೇಶದಾದ್ಯಂತ ಲಸಿಕೆ ಅಭಿಯಾನವೂ ಕೂಡ ಆಗುತ್ತಿದೆ.

Advertisement

ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೂ ಕೂಡ ಲಸಿಕೆಯನ್ನು ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ಎಲ್ಲಾ ವಿಚಾರಗಳ ನಡುವೆ ಲಸಿಕೆಯನ್ನು ಸ್ವೀಕರಿಸದ ಕೆಲವು ಮಂದಿ ಮೃತರಾಗಿದ್ದು ಮತ್ತು ಲಸಿಕೆ ಸ್ವೀಕರಿಸದ ನಂತರೂ ಕೋವಿಡ್ ಸೋಂಕು ಕಾಣಿಸಿಕೊಂಡಿರುವ ಕಾರಣದಿಂದಾಗಿ ಲಸಿಕೆಯ ಬಗ್ಗೆ ದೇಶದಾದ್ಯಂತ ಭಿನ್ನ ಧ್ವನಿ ಕೇಳಿ ಬರುತ್ತಿದೆ.

ಇದಕ್ಕೆ ಪೂರಕ ಎನ್ನುವಂತೆ ಆರೋಗ್ಯ ಮಂತ್ರಿ ಡಾ. ಕೆ. ಸುಧಾಕರ್ ಕೋವಿಡ್ ಲಸಿಕೆ ನಮ್ಮಲ್ಲಿರುವ ದೊಡ್ಡ ಅಸ್ತ್ರ  ಎಂದು ಹೇಳಿದ್ದಾರೆ.

ಓದಿ : ಕೋವಿಡ್ 2ನೇ ಅಲೆ ಭೀತಿ : ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಕೆಲವು ಟಿಪ್ಸ್

Advertisement

ತಮ್ಮ  ಅಧಿಕೃತ ಟ್ವೀಟರ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಸುಧಾಕರ್,  ದೇಶದಲ್ಲಿ ಈವರೆಗೂ ಸುಮಾರು 12.7 ಕೋಟಿ ಡೋಸ್ ಕೋವಿಡ್ ಲಸಿಕೆ ವಿತರಿಸಲಾಗಿದ್ದು, ಒಂದು ಅಥವಾ ಎರಡು ಡೋಸ್ ಲಸಿಕೆ ಪಡೆದ 99.96% ವ್ಯಕ್ತಿಗಳಲ್ಲಿ ಕೋವಿಡ್ ಸೋಂಕು ಕಂಡುಬಂದಿಲ್ಲ. ಕೋವಿಡ್ ವಿರುದ್ಧದ ಈ ಹೋರಾಟದಲ್ಲಿ ಲಸಿಕೆ ನಮಗಿರುವ ಅತ್ಯಂತ ದೊಡ್ಡ ಅಸ್ತ್ರವಾಗಿದ್ದು ಎಲ್ಲ ಅರ್ಹ ವ್ಯಕ್ತಿಗಳೂ ಕೂಡಲೇ ಲಸಿಕೆ ಪಡೆಯಬೇಕೆಂದು ಮನವಿ ಮಾಡುತ್ತೇನೆ. ಎಂದು ಅವರು ಬರೆದುಕೊಂಡಿದ್ದಾರೆ.

ಇನ್ನು, ಇಂದು(ಏ. 21) ದೇಶಿ ನಿರ್ಮಿತ ಕೋವ್ಯಾಕ್ಸಿನ್ ಲಸಿಕೆ ದೇಶದಲ್ಲಿ ಹಠಾತ್ ಏರಿಕೆಯಾಗುತ್ತಿರುವ ‘ಡಬಲ್ ರೂಪಾಂತರಿ ಕೊರೋನಾ ವೈರಸ್’ ನನ್ನೂ ಮಣಿಸುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.

ಓದಿ : ‘ಡಬಲ್ ರೂಪಾಂತರಿ ಕೋವಿಡ್ ವೈರಸ್’ ನನ್ನು ಮಣಿಸಲಿದೆ ಕೋವ್ಯಾಕ್ಸಿನ್ ಲಸಿಕೆ : ಐಸಿಎಂಆರ್

Advertisement

Udayavani is now on Telegram. Click here to join our channel and stay updated with the latest news.

Next