Advertisement

ರಾಜ್ಯ ಯುವ ಕಾಂಗ್ರೆಸ್‌ ಚುನಾವಣೆ; ರಾಜಕಾರಣಿ ಮಕ್ಕಳೇ ಮುಂದೆ

03:45 AM Apr 21, 2017 | |

ಬೆಂಗಳೂರು:ರಾಜ್ಯ ಯುವ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಸೇರಿದಂತೆ ಪದಾಧಿಕಾರಿಗಳ ಚುನಾವಣೆಗೆ ಸ್ಪರ್ಧಿಸಲು 14 ಜನರ ಪಟ್ಟಿಯನ್ನು ರಾಷ್ಟ್ರೀಯ ಯುವ ಕಾಂಗ್ರೆಸ್‌ ಘಟಕ ಬಿಡುಗಡೆ ಮಾಡಿದೆ. ರಾಜ್ಯ ಮಟ್ಟದಲ್ಲಿ ಪಕ್ಷದ ಬಲವರ್ಧನೆಗೆ ಶ್ರಮಿಸಿರುವ ಯುವ ಕಾರ್ಯಕರ್ತರನ್ನು ಗುರುತಿಸಿ ವಿವಿಧ ಸ್ಥಾನಗಳಿಗೆ ಸ್ಪರ್ಧಿಸುವಂತೆ ಸೂಚಿಸಲಾಗಿದೆ.

Advertisement

ಅಧ್ಯಕ್ಷ ಸ್ಥಾನಕ್ಕೆ ಹಿರಿಯ ರಾಜಕಾರಣಿಗಳ ಮಕ್ಕಳೇ ಮುಂಚೂಣಿಯಲ್ಲಿದ್ದು, ಶಾಸಕರಾದ ಹಂಪನಗೌಡ ಬಾದರ್ಲಿ ಮಗ ಬಸನಗೌಡ, ಕೆ.ಎನ್‌.ರಾಜಣ್ಣ  ಅವರ ಮಗ ರಾಜೇಂದ್ರ, ಪಶು ಸಂಗೋಪನಾ ಸಚಿವ ಎ. ಮಂಜು ಅವರ ಮಗ ಮಂಥರ್‌ ಗೌಡ, ಕೆ.ಕೆಂಪರಾಜು, ಗೌತಮ್‌, ಪಿ ವಿಶ್ವನಾಥ ಹಾಗೂ ಷಹೀದ್‌ ಷಹಜಾದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅರ್ಹತೆ ಪಡೆದಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ ಎಂ. ಅಮೃತ್‌ರಾಜ್‌ ಮತ್ತು ಕೆ. ಶಿವಕುಮಾರ್‌ ಅಭ್ಯರ್ಥಿಗಳಾಗಿದ್ದಾರೆ. ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಪ್ರಸನ್ನಕುಮಾರ್‌, ಕಾರ್ಯದರ್ಶಿ ಹುದ್ದೆಗೆ ಆನಂದ ಬೇಗೂರು, ಪುಷ್ಪಲತಾ, ಸುಮಯ್ಯ ತಬ್ರೇಜ್‌ ಹಾಗೂ ಉಮೇಶ್‌ ಬೋರೇಗೌಡ ಸ್ಪರ್ಧೆ ನಡೆಸಲಿದ್ದಾರೆ. ಬೆಂಗಳೂರು ನಗರ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಮಗಳು ಸೌಮ್ಯ ರಾಮಲಿಂಗಾ ರೆಡ್ಡಿ ಹಾಗೂ ಕಾಂಗ್ರೆಸ್‌ ಮುಖಂಡ ಬಿ.ಕೆ. ಶಿವರಾಮ್‌ ಮಗ ರಕ್ಷಿತ್‌ ಸ್ಪರ್ಧಿಸುವ ಸಾಧ್ಯತೆ ಇದೆ. ಮೇ 1 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಮೇ 9 ರಿಂದ 13 ರ ವರೆಗೆ ವಿಭಾಗವಾರು ಚುನಾವಣೆ ನಡೆಯಲಿದ್ದು, ಮೇ 16 ಕ್ಕೆ ಫ‌ಲಿತಾಂಶ ಪ್ರಕಟವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next