Advertisement

ರಾಜ್ಯ ಹಿರಿಯರ ಈಜು ಕೂಟ: ಮೊದಲ ದಿನ 4 ಕೂಟ ದಾಖಲೆ

11:05 AM Aug 17, 2017 | Team Udayavani |

ಬೆಂಗಳೂರು: ಉದ್ಯಾನನಗರಿಯ ರಾಮಕೃಷ್ಣ ಹೆಗಡೆ ಈಜು ಕೇಂದ್ರದಲ್ಲಿ ಬುಧವಾರ ರಾಜ್ಯ ಹಿರಿಯರ ಈಜು ಕೂಟಕ್ಕೆ ಚಾಲನೆ ನೀಡಲಾಗಿದೆ. ಮೊದಲ ದಿನದ ಸ್ಪರ್ಧೆಯಲ್ಲಿ 4 ಕೂಟ ದಾಖಲೆ ನಿರ್ಮಾಣವಾಗಿದೆ. ಪುರುಷರ 200 ಮೀ. ಬ್ಯಾಕ್‌ಸ್ಟ್ರೋಕ್‌ನ ಹೀಟ್ಸ್‌ 1ರಲ್ಲಿ ಶ್ರೀಹರಿ ನಟರಾಜನ್‌ 2 ನಿಮಿಷ 7.14 ಸೆಕೆಂಡ್ಸ್‌ ನಲ್ಲಿ ಗುರಿ ತಲುಪಿದರು. ಮಹಿಳಾ ವಿಭಾಗದ 200 ಮೀ. ಫ್ರಿಸ್ಟೈಲ್‌ನ ಹೀಟ್ಸ್‌ 2ರಲ್ಲಿ ವಿ.ಮಾಳವಿಕಾ 2 ನಿಮಿಷ 8.9 ಸೆಕೆಂಡ್ಸ್‌ಗಳಲ್ಲಿ ಗುರಿ ಸೇರಿದರು. ಇನ್ನು ಮಹಿಳಾ 100 ಮೀ. ಬ್ರೆಸ್ಟ್‌ ಸ್ಟ್ರೋಕ್‌ನಲ್ಲಿ ಹರ್ಷಿತಾ ಜಯರಾಮ್‌ 1 ನಿಮಿಷ 16.73 ಸೆಕೆಂಡ್ಸ್‌ಗಳಲ್ಲಿ ಗುರಿ ತಲುಪಿದರು. ಇದೇ ವಿಭಾಗದ ಹೀಟ್‌ 2ರಲ್ಲಿ ಸಲೋನಿ ದಲಾಲ್‌ ಕೂಡ 1ನಿಮಿಷ 16.73 ಸೆಕೆಂಡ್ಸ್‌ಗಳಲ್ಲಿ ಗುರಿ ಸೇರಿ ಕೂಟ ದಾಖಲೆ ನಿರ್ಮಿಸಿದರು. 

Advertisement

ಒಟ್ಟು ಮೂರು ದಿನ ಕೂಟ ನಡೆಯಲಿದೆ. ಬಸವನಗುಡಿ ಈಜು ಕೇಂದ್ರ, ಪೂಜಾ ಅಕ್ವೆಟಿಕ್‌ ಸೆಂಟರ್‌, ಗ್ಲೋಬಲ್‌ ಸ್ವಿಮ್ಮಿಂಗ್‌ ಸೆಂಟರ್‌, ಡಾಲ್ಫಿನ್‌ ಅಕ್ವೇಟಿಕ್‌ ಸೆಂಟರ್‌, ಯಂಗ್‌ ಚಾಲೆಂಜರ್ ಸ್ವಿಮ್ಮಿಂಗ್‌ ಕ್ಲಬ್‌ ಸೇರಿದಂತೆ ಹಲವು ತಂಡಗಳು ಭಾಗವಹಿಸಿವೆ. ಇಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಕ್ರೀಡಾಪಟುಗಳು ಮಧ್ಯಪ್ರದೇಶದ ಇಂದೋರ್‌ನಲ್ಲಿ ಅ.7ರಿಂದ 11ರವರೆಗೆ ನಡೆಯಲಿರುವ ರಾಷ್ಟ್ರೀಯ ಹಿರಿಯರ ಈಜು ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next