Advertisement

ರಾಜ್ಯದ ಆರಕ್ಷಕರು ದೇಶಕ್ಕೆ ಮಾದರಿ

04:08 PM Jul 14, 2021 | Team Udayavani |

ಬೆಂಗಳೂರು: ನಾಲ್ಕೈದು ವರ್ಷಗಳಿಂದ ಕೋವಿಡ್‌ ಸೇರಿ ಹಲವು ಕಾರಣಗಳಿಂದ ತಡೆಹಿಡಿಯಲಾಗಿದ್ದ 236 ಅಗ್ನಿಶಾಮಕ, ಗೃಹರಕ್ಷಕ ಮತ್ತಿತರ ಸಿಬ್ಬಂದಿಗೆ ಮಂಗಳವಾರ “ಮುಖ್ಯಮಂತ್ರಿಗಳ ಪದಕ’ ಪ್ರದಾನ ಮಾಡಲಾಯಿತು.

Advertisement

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಹಮ್ಮಿ ಕೊಂಡಿದ್ದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ,2015-2020ನೇ ಸಾಲಿನಅವಧಿಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಗೆ ಪದಕ ಪ್ರದಾನ ಮಾಡಿ ಸನ್ಮಾನಿಸಿದರು.

ಪದಕ ಪ್ರದಾನ ಮಾಡಿ ಮಾತನಾಡಿದ ಬಿ.ಎಸ್‌. ಯಡಿಯೂರಪ್ಪ, ರಾಷ್ಟ್ರಮಟ್ಟದಲ್ಲಿ ಪೊಲೀಸ್‌ ಮತ್ತು ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಕಾರ್ಯ ವೈಖರಿ ಮಾದರಿಯಾಗಿದೆ. ಕೊರೊನಾ ಸಂದರ್ಭದಲ್ಲಿ ವಿಪತ್ತು ನಿರ್ವಹಣಾ ಪಡೆಗಳ ಸೇವೆ ಸ್ಮರಣೀಯ ವಾಗಿದೆ. ಮುಂದಿನ ದಿನಗಳಲ್ಲಿ ತಂತ್ರಜ್ಞಾನಕ್ಕೆ ಅನುಗುಣವಾಗಿ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಇದಕ್ಕೆ ಎಲ್ಲ ರೀತಿಯ ಸಹಕಾರನೀಡಲುಸರ್ಕಾರ ಬದ್ಧ ಎಂದು ಹೇಳಿದರು.

ತಾಲೂಕಿಗೊಂದು ಅಗ್ನಿ ಶಾಮಕ ಠಾಣೆ: ಅತ್ಯಾಧುನಿಕ ಉಪ‌ಕರಣಗಳ‌ನ್ನು ಪೂರೈಸುವುದರ ಜತೆಗೆ ರಾತ್ರಿ ಗ ‌ಸ್ತು ಹೆಚ್ಚಿಸಲಾಗಿದೆ. ನಗರದಲ್ಲಿ 7,500 ಸಿಸಿ ಕ್ಯಾಮೆರಾಗಳನ್ನು ‌ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ತಾಲೂಕುಗಳಲ್ಲಲಿ ಅಗ್ನಿಶಾಮಕ ಠಾಣೆ ತೆರೆಯಲಾಗುತ್ತಿದೆ. ಪ್ರಸ್ತುತ  ‌214 ಅಗ್ನಿಶಾಮಕ ಠಾಣೆಗಳಿವೆ ಎಂದು ಮಾಹಿತಿ ನೀಡಿದರು.

ಬಸವ‌ರಾಜ ಬೊಮ್ಮಾಯಿ ಮಾತನಾಡಿ, ಆರ್ಥಿಕ ಅಪರಾಧಗಳು, ಸೈಬರ್‌ ಕ್ರೈಂ, ಡ್ರಗ್‌ ಮಾಫಿಯಾ ಮತ್ತಿತರ ಅಪ‌ರಾಧಗಳು ಹೆಚ್ಚುತ್ತಿವೆ. ಇದಕ್ಕೆ ‌ಕಡಿವಾಣ ಹಾಕಲು ನಾವೂ ಸದೃಢರಾಗಬೇಕು. ಇದಕ್ಕಾಗಿ ತಂತ್ರಜ್ಞಾನದ ಜತೆಗೆ ಸಾಗುವ ಅವ‌ಶ್ಯಕತೆ ಇದೆ ಎಂದು ಕಿವಿಮಾತು ಹೇಳಿದರು.

Advertisement

ಕಾರ್ಯಕ್ರಮದಲ್ಲಿ ಗೃಹ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಜನೀಶ್‌ ಗೋಯಲ್‌, ರಾಜ್ಯ ಪೊಲೀಸ್‌ ಮಹಾನಿರ್ದೇಶ‌ಕ ‌ ಪ್ರವೀಣ್‌ ಸೂದ್‌, ಗೃಹ ‌ ರಕ್ಷಕ ದಳದ ಡಿಜಿಪಿ ಡಾ.ಅಮರ್‌ ಕುಮಾರ್‌ ಪಾಂಡೆ, ಎಡಿಜಿಪಿ ಸುನೀಲ್‌ ಅಗರ್‌ ವಾಲ್‌, ಎಡಿಜಿಪಿ ಮಾಲಿನಿ ಕೃಷ್ಣ ‌ಮೂರ್ತಿ ಮತ್ತಿತ‌ರರು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next