Advertisement

ನೀಟ್‌ನಿಂದ ರಾಜ್ಯ ಹೊರಕ್ಕೆ: ಡಿಕೆಶಿ ಸುಳಿವು

01:09 AM Jun 19, 2024 | Team Udayavani |

ಬೆಂಗಳೂರು: “ನೀಟ್‌ ವಿಚಾರದಲ್ಲಿ ನೆರೆಯ ತಮಿಳುನಾಡು ಮಾದರಿಯನ್ನು ಅನುಸರಿಸುವ ಬಗ್ಗೆ ಗಂಭೀರ ಚಿಂತನೆ ಇದೆ’ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

Advertisement

ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, “ಈ ಹಿಂದೆ ಹೇಳಿದಂತೆ ನಮ್ಮವರೇ ಕಾಲೇಜು ಗಳನ್ನು ನಿರ್ಮಿಸಿದ್ದಾರೆ. ಆದರೆ ಅವರ ಮಕ್ಕಳು, ಅವರ ಸಮುದಾಯದ ಮಕ್ಕಳಿಗೇ ಸೀಟು ಕೊಡಲು ಸಾಧ್ಯ ವಾಗುತ್ತಿಲ್ಲ.

ಈ ಮಧ್ಯೆ ನೀಟ್‌ ಪರೀಕ್ಷೆಯಲ್ಲಿ ಅಕ್ರಮದಿಂದ ಮತ್ತಷ್ಟು ಅನ್ಯಾಯ ಆಗಿದೆ. ಇವೆಲ್ಲವನ್ನೂ ಗಮನದಲ್ಲಿ ಇರಿಸಿಕೊಂಡು ತಮಿಳುನಾಡು ಮಾದರಿಯನ್ನು ಅನುಸರಿಸುವ ಬಗ್ಗೆ ಚರ್ಚೆ ನಡೆದಿದೆ’ ಎಂದರು.

ಸರಕಾರದ ಭಾಗವಾಗಿ ನಾನು ಈ ರೀತಿ ಹೇಳುತ್ತಿಲ್ಲ. ನಮ್ಮ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಗಮನದಲ್ಲಿ ಇರಿಸಿಕೊಂಡು ಈ ಬಗ್ಗೆ ಬಹಳ ದೊಡ್ಡ ಚರ್ಚೆ ನಡೆಯಬೇಕಿದೆ. ಮೀಸಲಾತಿ ಇರಬೇಕು. ಅದರ ಬಗ್ಗೆ ನಮ್ಮ ತಕರಾರು ಇಲ್ಲ ಹಾಗೂ ಅದು ಬೇರೆಯೇ ವಿಷಯ ಎಂದು ಸ್ಪಷ್ಟಪಡಿಸಿದರು.

ಏನಿದು ತಮಿಳುನಾಡು ಮಾದರಿ?
ನೀಟ್‌ ಪರೀಕ್ಷೆಯಿಂದ ತಮಿಳು ಭಾಷಿಕ ವಿದ್ಯಾರ್ಥಿ ಗಳಿಗೆ, ಬಡ ಮಕ್ಕಳಿಗೆ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಸಿಗುವ ಪ್ರಮಾಣ ಕಡಿಮೆಯಾಗಿದೆ ಎಂಬುದು ತಮಿಳುನಾಡು ಸರಕಾರದ ಆರೋಪ. ಹೀಗಾಗಿ ತಮಿಳುನಾಡಿನಲ್ಲಿ ವಿದ್ಯಾರ್ಥಿಗಳಿಗೆ ದ್ವಿತೀಯ ಪರೀಕ್ಷೆಯ ಅಂಕಗಳ ಆಧಾರದಲ್ಲಿ ವೈದ್ಯಕೀಯ ಪದವಿ ಕಾಲೇಜುಗಳಿಗೆ ಪ್ರವೇಶ ನೀಡಲು ಶಾಸನಾತ್ಮಕವಾಗಿ ನಿರ್ಧರಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next