Advertisement

State Olympics ಮಂಗಳೂರು, ಉಡುಪಿಯಲ್ಲಿ: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

12:41 AM Dec 31, 2024 | Team Udayavani |

ಮಂಗಳೂರು: ರಾಜ್ಯ ಒಲಿಂಪಿಕ್ಸ್‌ ಸಂಸ್ಥೆ ವತಿಯಿಂದ ಮಂಗಳೂರು ಮತ್ತು ಉಡುಪಿಯಲ್ಲಿ ಜ. 17ರಿಂದ 23ರ ವರೆಗೆ “ರಾಜ್ಯ ಒಲಿಂಪಿಕ್ಸ್‌’ ಹಮ್ಮಿಕೊಳ್ಳಲಾಗಿದ್ದು, ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆ.

Advertisement

ಧಾರವಾಡದಲ್ಲಿ 8 ವರ್ಷ ಹಿಂದೆ ರಾಜ್ಯ ಒಲಿಂಪಿಕ್ಸ್‌ ನಡೆದಿದ್ದು, ಆ ಬಳಿಕ ನಡೆದಿರಲಿಲ್ಲ. ಈಗ ಮಂಗಳೂರು, ಉಡುಪಿಯಲ್ಲಿ ಆಯೋಜಿಸ ಲಾಗುತ್ತಿದೆ, ಮಂಗಳೂರಿನಲ್ಲಿ ಜ. 17ರಂದು ಉದ್ಘಾಟನ ಸಮಾರಂಭ ನಡೆಯಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

11 ಉಡುಪಿ, 12 ಮಂಗಳೂರು
11 ಕ್ರೀಡೆಗಳು ಉಡುಪಿಯಲ್ಲಿ ನಡೆಯಲಿದ್ದು, 12 ಕ್ರೀಡೆ ಮಂಗಳೂರಿನ ವಿವಿಧೆಡೆ ನಡೆಯಲಿವೆ. ಇದು ಮುಕ್ತ ವಿಭಾಗದಲ್ಲಿ ನಡೆಯುವ ಕ್ರೀಡಾಕೂಟವಾಗಿರಲಿದೆ.

ರಾಜ್ಯದ ಅತ್ಯುತ್ತಮ ಕ್ರೀಡಾ ಪಟುಗಳು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಡಿಸಿ ತಿಳಿಸಿದರು.
ಮಂಗಳೂರಿನ ಯು.ಎಸ್‌. ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಬಾಸ್ಕೆಟ್‌ಬಾಲ್‌, ಫೆನ್ಸಿಂಗ್‌, ನೆಹರೂ ಮೈದಾನದಲ್ಲಿ ಫುಟ್‌ಬಾಲ್‌ ಹಾಗೂ ಖೊಖೋ, ಎಮ್ಮೆಕರೆ ಈಜುಕೊಳದಲ್ಲಿ ಈಜು, ಸರಕಾರಿ ನೌಕರರ ಸಭಾಭವನದಲ್ಲಿ ಟೇಕ್ವಾಂಡೊ, ಅಂಬೇಡ್ಕರ್‌ ಭವನದಲ್ಲಿ ವೇಟ್‌ಲಿಫ್ಟಿಂಗ್‌ ಸಹಿತ ಹಲವು ಕ್ರೀಡೆಗಳು ವಿವಿಧೆಡೆ ನಡೆಯಲಿವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next