Advertisement

ರಾಜ್ಯಕ್ಕೆ ಬೇಕಿದೆ ಯೋಗಿ ಆಡಳಿತ ಮಾದರಿ ಸರಕಾರ: ಮುತಾಲಿಕ್

08:07 PM Jul 14, 2022 | Team Udayavani |

ಹೊಸಪೇಟೆ: ಹಿಂದೂ ಸಮಾಜ ರಕ್ಷಣೆ ಮತ್ತು ದೇಶದ ಸುರಕ್ಷತೆಗಾಗಿ ರಾಜ್ಯದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆಧಿತ್ಯನಾಥ ಆಡಳಿತ ಮಾದರಿ ಸರ್ಕಾರ ಅಗತ್ಯವಿದೆ. ಇದಕ್ಕಾಗಿ 25 ಹಿಂದೂ ಮಠಾಧೀಶರು ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ ಎಂದು ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಗುರುವಾರ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷವನ್ನು ಹಿಂದುಪರ ಸಂಘಟನೆಗಳು ಬೆಂಬಲಿಸಿ ತಪ್ಪು ಮಾಡಿವೆ. ಬಿಜೆಪಿ ಸರಕಾರದ ನಡೆಗಳಿಂದ ರಾಜ್ಯದ ಹಲವು ಮಠಾಧೀಶರು ಬೇಸರವಾಗಿದ್ದಾರೆ. ಮುಂದಿನ ದಿನಗಳಲ್ಲಿ 25 ಕ್ಕೂ ಹೆಚ್ಚು ಮಠಾಧೀಶರೇ ಚುನಾವಣೆಗೆ ಸ್ಪರ್ಧಿಸಿದರೂ ಅಚ್ಚರಿ ಪಡುವಂತಿಲ್ಲ ಎಂದರು.

ದೇಶದಲ್ಲಿಯೇ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ದನಗಳ ಸಂತೆಗೆ ಹೆಸರುವಾಸಿಯಾಗಿದೆ. ಸಾಕಷ್ಟು ಪ್ರಮಾಣದಲ್ಲಿ ದನಗಳು ಕಸಾಯಿ ಖಾನೆಗೆ ಹೋಗುತ್ತಿವೆ. ದನದ ಮಾಂಸ ರಫ್ತು ಆಗುತ್ತಿದೆ. ಜೊತೆಗೆ ರಾಜ್ಯದಲ್ಲಿಯೂ ಹಲವು ಭಾಗಗಳಲ್ಲಿ ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿದೆ. ದನಗಳನ್ನು ಪ್ರಯಾಣಿಕರು ತೆರಳುವ ವಾಹನದಲ್ಲಿ ಸಾಗಿಸಲಾಗುತ್ತಿವೆ ಎಂದು ರಾಜ್ಯ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಹಿಂದೂಗಳ ಭಾವನೆ ಜೊತೆಗೆ ಆಟವಾಡುತ್ತಿದೆ. ರಾಜ್ಯದಲ್ಲಿ ಅನಧಿಕೃತವಾಗಿ 3 ಸಾವಿರಕ್ಕೂ ಅಧಿಕ ಕಸಾಯಿ ಖಾನೆಗಳಿವೆ. ಅವುಗಳನ್ನು ಬುಲ್ಡೋಜರ್‌ನಿಂದ ತೆರವುಗೊಳಿಸಬೇಕು, ಇಲ್ಲದಿದ್ದರೆ ಆ ಕೆಲಸ ನಾವು ಮಾಡಬೇಕಾಗುತ್ತದೆ ಎಂದು ಹರಿಹಾಯ್ದರು.

ಶ್ರೀರಾಮಸೇನೆ ಮುಖಂಡರಾದ ಸಂಜೀವ ಮರಡಿ, ಜಗದೀಶ್ ಕಮತಗಿ, ರವಿ ಬಡಿಗೇರ್, ಸೂರು ಬಂಗಾರು, ಅನೂಪ್ ಕುಮಾರ್ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next