Advertisement
ಪಟ್ಟಣದ ಎಪಿಎಂಸಿ ಎದುರಿನ ಬಯಲು ಜಾಗದಲ್ಲಿ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಪಂ, ಪುರಸಭೆ ಹಾಗೂ ರಾಜ್ಯ ಯುವ ಸಂಘಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಸಂಜೆ ನಡೆದ ರಾಜ್ಯಮಟ್ಟದ ಯುವಜನ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯುವಜನ ಮೇಳ ಎಂಬುದು ಯುವಕರ ಒಗ್ಗೂಡುವಿಕೆಯ ಕಾರ್ಯಕ್ರಮ. ದೇಶದ ಅಖಂಡತೆ, ಸಾಮರಸ್ಯ ಉಳಿಸುವ ಹೊಣೆ ಸಮಾಜಕ್ಕಿದೆ. ಹಿರಿಯರಿಂದ ಮಾತ್ರ ಇದನ್ನು ಮುಂದುವರಿಸುವುದು ಕಷ್ಟಸಾಧ್ಯ. ಯುವಕರ ಮೇಲೆ ದೇಶದ ಜವಾಬ್ದಾರಿಯಿದೆ. ಸಾಂಸ್ಕೃತಿಕವಾಗಿ ನಮ್ಮ ದೇಶ ಬಹಳಷ್ಟು ಮುಂದಿದೆ. ಪ್ರತಿಭೆಗಳು ಪ್ರಕಾಶಿಸುವ ನಿಟ್ಟಿನಲ್ಲಿ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ. ಈ ಶಿಗ್ಗಾವಿಯಲ್ಲಿ ಜನಪದ ವಿವಿ ತೆರೆದಿದೆ. ಅಲ್ಲಿ ಪ್ರತಿ ವರ್ಷ 600ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾರ್ಜನೆ ಪಡೆಯುತ್ತಿದ್ದಾರೆ ಎಂದರು.
Related Articles
Advertisement
ಸಂಸದ ಶಿವಕುಮಾರ ಉದಾಸಿ ಮಾತನಾಡಿ, ದೇಶದ ಶಕ್ತಿಯಾಗಿರುವ ಯುವ ಸಮೂಹವನ್ನು ಸರಿಯಾದ ಮಾರ್ಗದೆಡೆಗೆ ಕೊಂಡೊಯ್ಯುವ ಕೆಲಸ ಸಮಾಜದ್ದಾಗಿದೆ. ಸರ್ಕಾರ ಯುವಕರನ್ನು ಪ್ರೇರೇಪಿಸುವ ಜತೆಗೆ ಅವರಲ್ಲಿನ ನಾಡಾಭಿಮಾನ ಹೊರತರಲು ಹಲವಾರು ಕಾರ್ಯಕ್ರಮ ಜಾರಿಗೆ ತರುತ್ತಿದೆ. ಬಹುಪಾಲು ಯುವ ಸಮೂಹ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುವ ಮೂಲಕ ನಾಡಿನ ಹಿರಿಮೆಯ ಪರಂಪರೆ ಮರೆಯುತ್ತಿರುವುದು ವಿಷಾದನೀಯ. ಜೀವನ ಸಿನಿಮೀಯವಾಗಬಾರದು. ಯುವಕರು ಅವಕಾಶ ವನ್ನು ಸರಿಯಾಗಿ ಸದ್ವಿನಿಯೋಗ ಪಡಿಸಿದಾಗ ಗುರಿ ಮುಟ್ಟಲು ಸಾಧ್ಯ. ಅವಕಾಶಗಳನ್ನು ಉಪಯೋ ಗಿಸಲು ಮತ್ತು ಸೂಕ್ತ ವಿಷಯಗಳಲ್ಲಿ ಆಸಕ್ತಿ ಬೆಳೆಸಲು ಹಿರಿಯರು ಮಾರ್ಗದರ್ಶನ ಮಾಡಬೇಕು. ಆಗ ಸಮಾಜ ಬಲಿಷ್ಠವಾಗುತ್ತದೆ ಎಂದರು.
ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಕಳಕಪ್ಪ ಬಂಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಯುವಜನ ಮೇಳದ ಮಾಹಿತಿ ಕಿರು ಹೊತ್ತಿಗೆಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದರು. ಬಳಿಕ ಸಿಡಿಮದ್ದು ಸಿಡಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ| ಕಲ್ಪನಾ ಜಿ, ವಿಪ ಸದಸ್ಯ ಎಸ್.ವಿ. ಸಂಕನೂರ, ಜಿಪಂ ಅಧ್ಯಕ್ಷ ಸಿದ್ದಲಿಂಗೇಶ್ವರ ಪಾಟೀಲ, ಉಪಾಧ್ಯಕ್ಷೆ ಮಲ್ಲವ್ವ ಬಿಚ್ಚಾರ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಪಂ ಸದಸ್ಯೆ ಮಂಜುಳಾ ಹುಲ್ಲಣ್ಣವರ, ರಾಜ್ಯ ಯುವ ಸಂಘಗಳ ಒಕ್ಕೂಟ ಅಧ್ಯಕ್ಷ ಡಾ| ಎಸ್. ಬಾಲಾಜಿ, ತಾ.ಪಂ ಅಧ್ಯಕ್ಷೆ ಪ್ರೇಮವ್ವ ನಾಯಕ, ಉಪಾಧ್ಯಕ್ಷೆ ಇಂದಿರಾ ತೇಲಿ, ಡಾ| ಬಿ.ವಿ. ಕಂಬಳಾಳ, ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಎನ್., ಯತೀಶ, ಬಿ.ಬಿ. ವಿಶ್ವನಾಥ, ಎನ್. ರುದ್ರೇಶ, ಸಂಯುಕ್ತಾ ಬಂಡಿ, ಬಿ.ಎಂ. ಸಜ್ಜನರ, ರವಿ ಬಿದರೂರ, ಮುತ್ತು ಕಡಗದ, ಭಾಸ್ಕರ ರಾಯಬಾಗಿ ಸೇರಿದಂತೆ ಇತರರು ಇದ್ದರು.