Advertisement

8ಕ್ಕೆ 9ನೇ ರಾಜ್ಯಮಟ್ಟದ ವಿಶ್ವಕರ್ಮ ಜಯಂತ್ಯುತ್ಸವ 

01:18 PM Oct 07, 2017 | Team Udayavani |

ಎಚ್‌.ಡಿ.ಕೋಟೆ: ಅಖೀಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ವತಿಯಿಂದ ರಾಜ್ಯಾಧ್ಯಕ್ಷರಾದ ಕೆ.ಪಿ.ನಂಜುಂಡಿ ಅವರ ನೇತೃತ್ವದಲ್ಲಿ ಅ.8ರಂದು ಬೆಂಗಳೂರಿನ ಕೃಷ್ಣ ವಿಹಾರ ಅರಮನೆ ಮೈದಾನದಲ್ಲಿ ನಡೆಯುವ 9ನೇ ವಿಶ್ವಕರ್ಮ ಜಯಂತ್ಯುತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಅಖೀಲ ಕರ್ನಾಟಕ ಮಹಾಸಭಾದ ಅಖೀಲ ಕರ್ನಾಟಕ ಮಹಾಸಭಾದ ಯುವ ಘಟಕದ ಅಧ್ಯಕ್ಷ ಕುಲುಮೆ ನಾಗೇಶ್‌ ಮನವಿ ಮಾಡಿದ್ದಾರೆ.

Advertisement

ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಖೀಲ ಕರ್ನಾಟಕ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಅವರು  ಸುಮಾರು 45 ಲಕ್ಷ ವಿಶ್ವಕರ್ಮರನ್ನು ಸಂಘಟಿಸಿ ಇದುವರೆಗೆ 8 ಬಾರಿ ರಾಜ್ಯ ಮಟ್ಟದ ಸಮಾವೇಶ ಮಾಡಿ ಸಮಾಜದ ಜನರ ಅಭಿವೃದ್ಧಿಗೆ ಹೋರಾಟ ಮಾಡಿದ್ದಾರೆ. ಹೀಗಾಗಿ ಸರ್ಕಾರ ಗುರುತಿಸಿ ವಿಶ್ವಕರ್ಮ ಅಭಿವೃದ್ಧಿ ನಿಗಮ ತೆರೆದಿದೆ ಎಂದು ಹೇಳಿದರು.

ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಆಗಮನ: ಈ ಬಾರಿ ರಾಜ್ಯಾಧ್ಯಕ್ಷರಾದ ಕೆ.ಪಿ.ನಂಜುಂಡಿ ಅವರು 3 ಲಕ್ಷ ಜನರು ಬರುವ ನಿರೀಕ್ಷೆ ಹೊಂದಿದ್ದಾರೆ. ಕೇಂದ್ರ ಗೃಹ ಸಚಿವರಾದ ರಾಜನಾಥ್‌ ಸಿಂಗ್‌ ಸೇರಿದಂತೆ ಅನೇಕ ನಾಯಕರು ಸೇರಿದಂತೆ 67 ಮಠಗಳ ಸ್ವಾಮಿಜೀಗಳು ಉಪಸ್ಥಿತಿ ಇರುವರು. ಅಲ್ಲದೆ, ವಿಶೇಷ ಆಹ್ವಾನಿತರಾಗಿ ಮೈಸೂರಿನ ರಾಣಿ ಪ್ರಮೋದಾದೇವಿ ಭಾಗವಹಿಸಲಿದ್ದಾರೆರಂದರು.

ತಾಲೂಕಿನ ವಿಶ್ವಕರ್ಮ ಸಮಾಜದ ಬಂಧುಗಳು ಸೇರಿದಂತೆ ವಿವಿಧ ಸಮಾಜ ಜನರು ಹಾಗೂ ಸಂಘ ಸಂಸ್ಥೆಗಳ ಮುಖಂಡರು ಸದಸ್ಯರು, ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಅಖೀಲ ಕರ್ನಾಟಕ ಮಹಾಸಭಾದ ತಾಲೂಕು ಅಧ್ಯಕ್ಷ ಹೊಸಹೊಳಲು ಸಿದ್ದಪ್ಪಾಜಿ, ಕಾರ್ಯದರ್ಶಿ ಹೈರಿಗೆ ಸಿದ್ದಪ್ಪಾಜಿ, ಖಜಾಂಚಿ ವಡ್ಡರಗುಡಿ ಗೋಪಾಲ್‌, ನಾಗೇಶ್‌, ಮಂಜು, ಅಂತರಸಂತೆ ಪುಟ್ಟ, ಬೆಳಗನಹಳ್ಳಿ ಸಿದ್ದಪ್ಪಾಜಿ, ಕುಮಾರ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next