Advertisement

ಚಿಕ್ಕಬಳ್ಳಾಪುರದಲ್ಲಿ ರಾಜ್ಯ ಮಟ್ಟದ ವಿಜ್ಞಾನ ಸಾಹಿತ್ಯ ಸಮಾವೇಶ

03:35 PM Sep 15, 2019 | Team Udayavani |

ಚಿಕ್ಕಬಳ್ಳಾಪುರ; ಜಿಲ್ಲೆಯ ವಿಶ್ವ ವಿಖ್ಯಾತ ಎಂಜಿನಿಯರ್, ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ನವರ 159ನೇ ಜಯಂತಿ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಕಸಾಪ ಘಟಕದಿಂದ ರಾಜ್ಯ ಮಟ್ಟದ ವಿಜ್ಞಾನ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ.

Advertisement

ಸರ್ .ಎಂ.ವಿ.ಹುಟ್ಟೂರಾದ ಮುದ್ದೇನಹಳ್ಳಿಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಡಾ.ಕೈವಾರ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ವಿಜ್ಞಾನ ಸಾಹಿತ್ಯ ಸಮಾವೇಶಗೊಂಡಿದ್ದು ಸ್ಥಳೀಯ ವಿಟಿಯು ತಾಂತ್ರಿಕ ಶಿಕ್ಷಣ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.

ಸಮ್ಮೇಳನದಲ್ಲಿ ವಿಶೇಷವಾಗಿ ರಾಷ್ಟ್ರಕ್ಕೆ ಸರ್.ಎಂ.ವಿಶ್ವೇಶ್ವರಯ್ಯ ನವರ ಕೊಡುಗೆ, ಅದರಲ್ಲೂ ಕೃಷಿ, ಸಾಹಿತ್ಯ, ತಂತ್ರಜ್ಞಾನ, ನೀರಾವರಿ, ಕೈಗಾರಿಗಳ ಅಭಿವೃದ್ಧಿಗೆ ಅವರು ನೀಡಿರುವ ಕೊಡುಗೆಗಳ ಬಗ್ಗೆ ರಾಜ್ಯದ ಪ್ರಖ್ಯಾತ ತಂತ್ರಜ್ಞರು, ಚಿಂತಕರು, ಸಾಹಿತಿಗಳು ಪಾಲ್ಗೊಂಡ ಚಿಂತನ, ಮಂಥನ ನಡೆಸುವುದರ ಜೊತೆಗೆ ರಾಷ್ಟ್ರದ ಭವಿಷ್ಯದ ಸಮಸ್ಯೆ, ಸವಾಲುಗಳ ಬಗ್ಗೆಯು ಚರ್ಚೆ, ಸಂವಾದ ಕಾರ್ಯಕ್ರಮಗಳನ್ನು ಇಡೀ ದಿನ ಕಸಾಪ ಹಮ್ಮಿಕೊಂಡಿದೆ.

ಸಮಾವೇಶದಲ್ಲಿ ಸರ್ವಧರ್ಮ ಪೀಠದ ಶ್ರೀ ನಿರಂಜನ ದೇಶಿಕೇಂದ್ರ ಸ್ವಾಮೀಜಿ, ಬೆಂಗಳೂರಿನ ಎಂ.ಎಸ್.ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ. ಮಲ್ಲಿಕಾರ್ಜುನಯ್ಯ ಪಾಲ್ಗೊಂಡಿದ್ದು ಜಿಪಂ ಸಿಇಒ ಬಿ.ಫೌಜಿಯಾ ತರುನ್ನುಮ್, ಅಪರ ಜಿಲ್ಲಾಧಿಕಾರಿ ಆರತಿ, ಕಾಲೇಜು ಪ್ರಾಧ್ಯಾಪಕ ಮೋಹನ್ ಕುಮಾರ್ ಭಾಗವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next