Advertisement

‘ಸಾಹಿತ್ಯ ಅಧ್ಯಯನ ಇಂದಿನ ಸಮಾಜಕ್ಕೆ ಅಗತ್ಯ’

12:05 PM Nov 26, 2018 | |

ಮೂಡುಬಿದಿರೆ: ವಿಜ್ಞಾನ ಬುದ್ಧಿವಂತಿಕೆಯನ್ನು ಹೆಚ್ಚಿಸಿದರೆ, ಸಾಹಿತ್ಯ ಹೃದಯ ವೈಶಾಲ್ಯವನ್ನು ಹೆಚ್ಚಿಸುತ್ತದೆ ಎಂದು ವಿದ್ವಾಂಸ ಡಾ| ವರದರಾಜ ಚಂದ್ರಗಿರಿ ಹೇಳಿದರು. ಕಲ್ಲಬೆಟ್ಟು ಎಕ್ಸಲೆಂಟ್‌ ಪದವಿ ಪೂರ್ವ ಕಾಲೇಜಿನ ವತಿಯಿಂದ ಆಯೋಜಿಸಲಾದ ಕನ್ನಡಹಬ್ಬದ ಪ್ರಯುಕ್ತ ನಡೆದ ರಾಜ್ಯಮಟ್ಟದ ಕವಿಗೋಷ್ಠಿಯ ಸಮನ್ವಯಕಾರರಾಗಿ ಮಾತನಾಡಿದ ಅವರು, ಸಾಹಿತ್ಯ ನಮ್ಮ ಆಂತರಿಕ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ಹಾಗಾಗಿ ಸಾಹಿತ್ಯ ಅಧ್ಯಯನ ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದೆ ಎಂದರು.

Advertisement

ಕವಿಗೋಷ್ಠಿಯಲ್ಲಿ ಪ.ಮಾನು. ಸಗರ ಗುಲ್ಬರ್ಗ, ಶಿವಕುಮಾರ್‌ ಗು. ಶಿವಸಿಂಪಿ ವಿಜಯಪುರ, ಅಭಿನಂದನ್‌ ಎಂ. ಮಂಡ್ಯ, ಲಿಂಗಸಂದ್ರ ತಿಪ್ಪೇಸ್ವಾಮಿ ತುಮಕೂರು, ರಘು ದೊಡ್ಡಬಳ್ಳಾಪುರ, ಎಂ.ಎಸ್‌. ನಾಗರಾಜು ಮೂಡಿಗೆರೆ, ನಾರಾಯಣ ರೈ ಕುಕ್ಕುವಳ್ಳಿ ಪುತ್ತೂರು, ಡಿ.ಎಂ. ಭಟ್‌ ಕುಳವೆ ಶಿರ ಸಿ, ಸುಬ್ರಹ್ಮಣ್ಯ ಭಟ್‌ ತುಂಬೆ ಬಂಟ್ವಾಳ, ಮಾ| ಮಹೇಶ್‌ ಮಲೆಯೂರು ಮೈಸೂರು, ಡಿ.ವಿ.ರಾಜ ಹೆಗ್ಡೆ ನಿಡ್ಡೋಡಿ, ಶರಶ್ಚಂದ್ರ ರಾನಡೆ ಬೆಂಗಳೂರು, ನೀರಜಾ ಓಕುಡ ಉಡುಪಿ, ಡಿ.ಬಿ.ಢಂಗ ಧಾರವಾಡ, ಸದಾನಂದ ನಾರಾವಿ ಕಾರ್ಕಳ, ಮರಿಯನ್‌ ಪಿಯೂಸ್‌ ಡಿ’ಸೋಜಾ ಮಂಗಳೂರು, ಆನಂದ ಜಿ. ಕನಕಪುರ, ಶ್ರೀವಾಣಿ ಕಾಕುಂಜೆ, ವಿಜಯಲಕ್ಷ್ಮೀ ಪ್ರಸಾದ್‌ ರೈ ಕೊಣಾಜೆ, ಅದ್ವೈತ ಕೆ. ಅಡ್ಯನಡ್ಕ, ಸ್ಫೂರ್ತಿ ಮೂಡುಪಡುಕೋಡಿ, ಪ್ರಹ್ಲಾದ ಮೂರ್ತಿ ಭಟ್‌ ಕಡಂದಲೆ, ಶರಣಪ್ಪ ಗದಗ, ಪಿ.ಎಸ್‌. ನಾರಾಯಣ ಭಟ್‌ ಕೊಯಿಲ ಪಾಲ್ಗೊಂಡಿದ್ದರು.

ವರ್ಣವಿನ್ಯಾಸ
ಕಲಾ ಶಿಕ್ಷಕ ಪ್ರವೀಣ್‌ ಕಕ್ಕಿಂಜೆ ಅವರ ಮಾರ್ಗದರ್ಶನದಲ್ಲಿ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳಾದ ಸಂಜನ್‌, ತುಷಾರ್‌, ಸಹನಾ ಕಲಾ ಶಿಕ್ಷಕ ಪ್ರವೀಣ್‌ ಕಕ್ಕಿಂಜೆ ಅವರ ಮಾರ್ಗದರ್ಶನದಲ್ಲಿ ಸೂಕ್ತ ವರ್ಣವಿನ್ಯಾಸ ಮಾಡಿದರು. ಸಂಸ್ಥೆಯ ಅಧ್ಯಕ್ಷ ಯುವರಾಜ್‌ ಜೈನ್‌ ಕವಿಗಳನ್ನು ಸ್ಮರಣಿಕೆ, ಗ್ರಂಥ, ಪ್ರಮಾಣ ಪತ್ರ ನೀಡಿ ಗೌರವಿಸಿದರು. ಕನ್ನಡ ವಿಭಾಗದ ರಾಮಕೃಷ್ಣ ಹೆಗಡೆ ಕಾರ್ಯ ಕ್ರಮ ನಿರೂಪಿಸಿ, ವಂದಿಸಿದರು.

ಗಾಯನ ಕಾರ್ಯಕ್ರಮ
ಕವಿಗಳ ಕವನಗಳಿಗೆ ಎಕ್ಸಲೆಂಟ್‌ ಪ್ರೌಢಶಾಲಾ ವಿದ್ಯಾರ್ಥಿನಿಯರಾದ ಪ್ರಕೃತಿ ಮಾರೂರು, ಮೌಲ್ಯಾ ವೈ .ಆರ್‌. ಜೈನ್‌, ಚಂದನಾ, ಸಾನ್ವಿ, ಪ್ರತೀಕ್ಷಾ ಅವರು ಬಾಬಣ್ಣ ಪುತ್ತೂರು, ಜಗದೀಶ, ಜನಾರ್ದನ ಅವರ ಸಂಗೀತ ಸಂಯೋಜನೆಯಲ್ಲಿ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next