Advertisement

ರಾಜ್ಯ ಮಟ್ಟದ ಮಾಸ್ಟರ್ ಪವರ್‌ ಲಿಫ್ಟಿಂಗ್ ಚಾಂಪಿಯನ್‌ಶಿಪ್‌

12:54 PM Jul 07, 2018 | |

ಮಹಾನಗರ: ಜಿಲ್ಲೆಯಲ್ಲಿ ಅನೇಕ ಮಂದಿ ಪವರ್‌ಲಿಫ್ಟಿಂಗ್ ಸ್ಪರ್ಧಾಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿರುವುದು ಹೆಮ್ಮೆಯ ಸಂಗತಿ ಎಂದು ಶ್ರೀ ದೇವಿ ಎಜುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಹೇಳಿದರು.

Advertisement

ಮಾರ್ಗನ್ಸ್‌ಗೇಟ್‌ ನ್ಯೂ ಬಾಲ ಮಾರುತಿ ಜಿಮ್ಮಾಶಿಯಂ ಆಶ್ರಯದಲ್ಲಿ ನಗರ ಮಂಗಳಾ ಸ್ಟೇಡಿಯಂ ಬಳಿಯ ಭಾರತ್‌ ಸ್ಕೌಟ್‌ ಆ್ಯಂಡ್‌ ಗೈಡ್ಸ್‌ ಭವನದಲ್ಲಿ ಶುಕ್ರವಾರ ಆಯೋಜಿಸಿದ 44ನೇ ಪುರುಷ ಮತ್ತು 36ನೇ ಮಹಿಳಾ ರಾಜ್ಯ ಮಟ್ಟದ ಸೀನಿಯರ್‌ ಆ್ಯಂಡ್‌ ಮಾಸ್ಟರ್ ಪವರ್‌ ಲಿಫ್ಟಿಂಗ್ ಚಾಂಪಿಯನ್‌ಶಿಪ್‌-2018 ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ಪವರ್‌ಲಿಫ್ಟಿಂಗ್  ಅಸೋಸಿಯೇಶನ್‌ ಕಾರ್ಯದರ್ಶಿ ಸತೀಶ್‌ ಕುಮಾರ್‌ ಕುದ್ರೋಳಿ ಮಾತನಾಡಿ,
ಈ ಸ್ಪರ್ಧೆಯಲ್ಲಿ ವಿಜೇತರಾದ ಮಂದಿ ಇದೇ ವರ್ಷ ಗುಂಟೂರಿನಲ್ಲಿ ನಡೆಯುವ ಪವರ್‌ಲಿಫ್ಟಿಂಗ್  ಸೀನಿಯರ್‌ ಸ್ಪರ್ಧೆಯಲ್ಲಿ ಭಾಗವಹಿಸುವ ಅರ್ಹತೆ ಪಡೆಯುತ್ತಾರೆ ಎಂದು ಹೇಳಿದರು.

ಇತ್ತೀಚೆಗೆ ಭಾರತೀಯ ಪವರ್‌ಲಿಫ್ಟಿಂಗ್ ಸಂಸ್ಥೆಯು ಪವರ್‌ಲಿಫ್ಟಿಂಗ್ ಇಂಡಿಯಾ ಎಂದು ಮರು ನಾಮಕರಣವಾಯಿತು. ಇದಾದ ಬಳಿಕ ಕ್ರೀಡಾಪಟುಗಳಿಗೆ ಉಪಯೋಗವಾಗುವಂತಹ ಅನೇಕ ಯೋಜನೆಗಳನ್ನು ಹುಟ್ಟು ಹಾಕುತ್ತಿದೆ. ಪವರ್‌ ಲಿಫ್ಟಿಂಗ್ ಕ್ರೀಡೆಯಲ್ಲಿ ರಾಜ್ಯದಲ್ಲಿ ಅನೇಕ ಮಂದಿ ಸಾಧನೆಗೈದಿದ್ದಾರೆ. ಅನೇಕ ಮಂದಿ ಏಕಲವ್ಯ ಪ್ರಶಸ್ತಿ, ಅರ್ಜುನ ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದು ತಿಳಿಸಿದರು.

ಕಾರ್ಪೊರೇಟರ್‌ ಪ್ರೇಮಾನಂದ ಶೆಟ್ಟಿ ಮಾತನಾಡಿ, ಸರಕಾರ ಕ್ರೀಡೆಗಳಿಗೆ ಉತ್ತೇಜನ ನೀಡಬೇಕಿದೆ. ನಗರ ಪಾಲಿಕೆಯ ಆದಾಯದ ಶೇ.2ರಷ್ಟು ಹಣವನ್ನು ಕ್ರೀಡೆಗೆ ಮೀಸಲಿಡಬೇಕು ಎಂದಿದೆ. ಆದರೆ ಈ ನಿಯಮ ಸಾಕಾರವಾಗುತ್ತಿಲ್ಲ ಎಂದು ಹೇಳಿದರು. ಸಂಘಟನ ಅಧ್ಯಕ್ಷ ಕೆ. ಹರೀಶ್‌ ಕುಮಾರ್‌, ಭಾಸ್ಕರ ರಾವ್‌ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

200ಕ್ಕೂ ಮಿಕ್ಕಿ ಸ್ಪರ್ಧಿಗಳು ಭಾಗಿ
ಜು. 6ರಿಂದ 8ರ ವರೆಗೆ ನಡೆಯುವ ಸ್ಪರ್ಧೆಯಲ್ಲಿ ಮಂಗಳೂರು, ಬೆಂಗಳೂರು, ದಾವಣಗೆರೆ, ಶಿವಮೊಗ್ಗ, ಸಾಲಿಗ್ರಾಮ, ಬೀರೇಶ್ವರ ಸೇರಿದಂತೆ ಇನ್ನಿತರ ಪ್ರದೇಶದ 200ಕ್ಕೂ ಮಿಕ್ಕಿ ಸ್ಪರ್ಧಿಗಳು ಭಾಗವಹಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next