ಬನಹಟ್ಟಿ: ರಬಕವಿ-ಬನಹಟ್ಟಿ ತಾಲೂಕಿನಹೊಸೂರ ಪಟ್ಟಣದ ಮಹಾದೇವ ಕರವೀರಪ್ಪಚೋಳಿ ಅವರಿಗೆ ರಾಜ್ಯ ಸರಕಾರ ಕೊಡಮಾಡುವ ರಾಜ್ಯಮಟ್ಟದ ಉದಯೋನ್ಮುಖ ಕೃಷಿ ಪಂಡಿತಪ್ರಶಸ್ತಿ ಲಭಿಸಿದೆ.
40ಎಕರೆ ಜಮೀನು ಹೊಂದಿರುವ ಮಹಾದೇವ ಕರವೀರಪ್ಪ ಚೋಳಿ ಬಾಲ್ಯದಿಂದಲೇ ಕೃಷಿ ಬಗ್ಗೆ ಆಸಕ್ತಿಹೊಂದಿದ್ದಾರೆ. ತಮ್ಮ ಭೂಮಿಯ ಶೇ.60ರಷ್ಟುಸಾವಯವ, ಶೇ. 40ರಷ್ಟು ರಾಸಾಯನಿಕ ಕೃಷಿ ಮಾಡುತ್ತಿದ್ದಾರೆ.
ಕಬ್ಬು, ಅರಿಷಿಣ ಬೆಳೆಗಳಲ್ಲಿ ಮಿಶ್ರ ಬೆಳೆಗಳಾಗಿ ಚಂಡು ಹೂ, ಹೂಕೋಸು (ಗೋಬಿ),ಎಲೆಕೋಸು (ಗೋಬಿ ಗಡ್ಡೆ), ಪಾಲಕ, ಮೆಂತೆ,ಕೋತಂಬರಿ, ಮೆಣಸಿನಕಾಯಿ, ಸಬಸಗಿಪಲ್ಲೆ, ಶೇಂಗಾ, ಉಳ್ಳಾಗಡಿ, ರಾಜಗಿರಿ ಪಲ್ಲೆ,ಸವತೆಕಾಯಿ ಜತೆಗೆ ಬಾಳೆ, ಪಪ್ಪಾಯಿ, ಚಿಕ್ಕು,ಸೀತಾಫಲ, ಮಾವು, ಪೇರಲ, ನೆಲ್ಲಿ, ತೆಂಗು, ಕಲ್ಲಂಗಡಿ, ನುಗ್ಗೆಕಾಯಿ, ಗಜ್ಜರಿ ಬೆಳೆಸಿದ್ದಾರೆ.ಸಾವಯವ ಕೃಷಿಯ ಮೂಲ ಅಡಗಿರುವುದೇ ಹೈನುಗಾರಿಕೆಯಲ್ಲಿ. ಅದನ್ನರಿತಿರುವ ಇವರು 5 ಎಮ್ಮೆ, 20 ಎಚ್‌ಎಫ್ ತಳಿ ಆಕಳು,2-ಗೀರ್ ತಳಿ ಆಕಳು, 8 ಆಡುಗಳನ್ನುಸಾಕುತ್ತಿದ್ದಾರೆ. ಇದರಿಂದ ಹಾಲು ಉತ್ಪಾದನೆ,ಆಕಳ ಸಗಣಿ, ಮೂತ್ರ (ಗಂಜಲು)ಸಾವಯವ ಗೊಬ್ಬರಕ್ಕೆ ಬಳಸುತ್ತಿದ್ದಾರೆ.
ಅಲ್ಲದೇ ಹಸುಗಳಿಗಾಗಿ ಹಸಿರು ಪಾಚಿ(ಅಜೋಲ್)ಯನ್ನು ಬೆಳೆಸಿ ಅವುಗಳಿಗೆ ನೀಡುತ್ತಿರುವುದರಿಂದ ಹಾಲಿನ ಪ್ರಮಾಣಹೆಚ್ಚಿಗೆ ದೊರಕುತ್ತದೆ ಎನ್ನುತ್ತಾರೆ ಮಹಾದೇವ ಚೋಳಿ. ಸ್ವತಃ ಹಾಲು ಒಕ್ಕೂಟದ ಸಹಕಾರಿ ಸಂಘ ಸ್ಥಾಪಿಸಿರುವ ಅವರು ಅದರ ಮೂಲಕ ಹಾಲು ಸರಬರಾಜು ಮಾಡುತ್ತಾರೆ. ತೋಟದಲ್ಲಿ ಬೆಳೆದ ಬೆಳೆಗಳಿಗೆ ಸ್ಥಳೀಯಮಾರುಕಟ್ಟೆ ಜತೆಗೆ ಆಯಾ ಬೆಳೆಗಳಿಗೆತಕ್ಕಂತೆ ಮಾರುಕಟ್ಟೆಗೆ ಕಳುಹಿಸುತ್ತಾರೆ. 40 ಎಕರೆ ಜಮೀನಿನಲ್ಲಿ ಹನಿ ನೀರಾವರಿ ಪದ್ಧªತಿಅಳವಡಿಸಿರುವ ಇವರು ಕೋಳಿ, ಎರೆಹುಳು ಗೊಬ್ಬರ, ತಿಪ್ಪೆ ಗೊಬ್ಬರ ಮಾತ್ರ ಹಾಕಿದ್ದಾರೆ.
ಇನ್ನೊಂದು ವಿಶೇಷ ಎಂದರೆ ಪ್ರತಿವಾರ ಜೀವಸಾರ ಘಟಕದಿಂದ ಹನಿ ನೀರಾವರಿಮೂಲಕ ಸಾವಯವ ಗೊಬ್ಬರ ನೀಡುತ್ತಾರೆ. 15 ಗುಂಟೆ ಜಮೀನಿನಲ್ಲಿ ಬಳ್ಳೊಳ್ಳಿ, ಕೊತ್ತಂಬರಿ, ಉಳ್ಳಾಗಡ್ಡಿ, ಮೆಂತೆ, ಸಬ್ಬಸಗಿ,ಗಜ್ಜರಿ ಸೇರಿದಂತೆ 15ಕ್ಕೂ ಹೆಚ್ಚು ತರಹದಬೆಳೆ ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ.15 ಜನರ ತುಂಬು ಕುಟುಂಬದಲ್ಲಿಸಹೋದರರಾದ ಭೀಮಸಿ ಚೋಳಿ ಮತ್ತುಸುಭಾಸ ಚೋಳಿ ಅವರ ಹೆಗಲಿಗೆ ಹೆಗಲು ಕೊಟ್ಟು ಕೃಷಿಯಲ್ಲಿ ಜತೆಯಾಗಿದ್ದಾರೆ.
ಕೃಷಿಯಲ್ಲಿ ಆಧುನಿಕತೆ ಅಳವಡಿಸಿಕೊಂಡು ಕೃಷಿ ಕೈಗೊಂಡರೆ ಯಶಸ್ಸು ಸಿಗುತ್ತದೆ. ಅದಕ್ಕೆ ಶ್ರಮ-ತಾಳ್ಮೆ ಮುಖ್ಯ. ಸರಕಾರ ಸಾಧನೆ ಗಮನಿಸಿ ಪ್ರಶಸ್ತಿ ನೀಡಿರುವುದು ಹೆಮ್ಮೆಯ ಸಂಗತಿ.
-ಮಹಾದೇವ ಕರವೀರಪ್ಪ ಚೋಳಿ, ಪ್ರಗತಿಪರ ರೈತರು ಹೊಸೂರ