ಕಲಬುರಗಿ: ಭಾರತದ ರಾಷ್ಟ್ರೀಯತೆ ಮತ್ತು ರಾಷ್ಟ್ರೀಯ ಐಕ್ಯತೆ; ಸಮಸ್ಯೆಗಳು ಮತ್ತು ಸವಾಲುಗಳು ಎನ್ನುವ ವಿಷಯ ಕುರಿತು ಆ. 25 ಮತ್ತು 26ರಂದು ವಿವಿಯ ರಾಜ್ಯ ಮಟ್ಟದ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಗುಲ್ಬರ್ಗ ವಿವಿ ಕುಲಪತಿ ಪ್ರೊ| ದಯಾನಂದ ಅಗಸರ್ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಮುಖ ಭಾಷಣ ಕಾರರಾಗಿ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಶಾಂತಿಶ್ರೀ ಪಂಡಿತ್ ಆಗಮಿಸುವರು. “ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಕರ್ನಾಟಕ ರಾಜ್ಯ ರಾಜ್ಯಶಾಸ್ತ್ರ ಅಧ್ಯಾಪಕರ ಸಂಘ ಹಾಗೂ ಸುರಪುರದ ಎಸ್.ಪಿ ಮತ್ತು ಜೆ.ಎಂ. ಬೊಹರಾ ಪದವಿ ಕಾಲೇಜಿನ ಸಹಯೋಗದಲ್ಲಿ ಎರಡು ದಿನ ನಡೆಯುವ ಈ ಸಮ್ಮೇಳನದಲ್ಲಿ 400ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವರು ಎಂದು ವಿವರಿಸಿದರು.
ಕೋವಿಡ್ ಹಾಗೂ ಇತರೆ ಕೆಲವು ಸಣ್ಣ ತಾಂತ್ರಿಕ ಕಾರಣಗಳಿಂದಾಗಿ ಸಮ್ಮಳನ ಈಗ ಏರ್ಪಡಿಸಲಾಗಿದೆ. ಈ ಹಿಂದೆಯೇ ಕಾರ್ಯಕ್ರಮ ನಡೆಯಬೇಕಿತ್ತು ಎಂದ ಅವರು, ಸಾಕಷ್ಟು ವಿಷಯಗಳ ಕುರಿತು ಚರ್ಚೆ ನಡೆಯಲಿದೆ ಎಂದು ತಿಳಿಸಿದರು.
ರಾಜ್ಯಶಾಸ್ತ್ರ ಅಧ್ಯಾಪಕರ ಸಂಘದ ಸಂಘಟನಾ ಕಾರ್ಯದರ್ಶಿ ಪ್ರೊ| ಚಂದ್ರಕಾಂತ ಎಂ. ಯಾತನೂರ ಮಾತನಾಡಿ, ಸಮ್ಮೇಳನದಲ್ಲಿ ರಾಜ್ಯದ ಎಲ್ಲ ವಿವಿಗಳು, ಪದವಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರು, ಪ್ರೋಫೆಸರ್‌ಗಳು ಹಾಗೂ ವಿದ್ಯಾರ್ಥಿಗಳು ಕೂಡ ಭಾಗವಹಿಸುವರು. ಅಲ್ಲದೆ, ಪ್ರಬಂಧ ಮಂಡಿಸುವರು ಎಂದು ಹೇಳಿದರು.
ಮಧ್ಯಪ್ರದೇಶದ ಭೋಪಾಲ್‌ನ ಜಾಗರಣ ಲೇಕ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ|ಸಂದೀಪ ಶಾಸ್ತ್ರೀ, ಬೆಂಗಳೂರು ವಿಶ್ವವಿದ್ಯಾಲಯದ ಪ್ರೊ|ಆರ್.ಎಲ್.ಎಂ. ಪಾಟೀಲ, ಮೈಸೂರು ವಿಶ್ವವಿದ್ಯಾಲಯದ ಪ್ರೊ| ಮುಜಾಫರ್ ಅಸ್ಸಾದಿ, ಪ್ರೊ|ಮಿಡತಲಾ ರಾಣಿ ಗೋಷ್ಠಿಗಳಲ್ಲಿ ಮಾತನಾಡುವರು ಎಂದರು. ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಪ್ರೊ|ವಿ.ಟಿ. ಕಾಂಬಳೆ, ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ|ಜಿ. ಶ್ರೀರಾಮುಲು ಇದ್ದರು.
ಉಪನ್ಯಾಸಕರ ಕೊರತೆ ಮತ್ತು ಶೈಕ್ಷಣಿಕ ಚಟುವಟಿಕೆಗಳ ಒತ್ತಡದ ಹಿನ್ನೆಲೆಯಲ್ಲಿ ಮೌಲ್ಯಮಾಪನ ತ್ವರಿತವಾಗಿ ಮುಗಿಸುವ ಧಾವಂತದಲ್ಲಿ ಮೌಲ್ಯಮಾಪನದಲ್ಲಿ
ಲೋಪವಾಗಿದೆ. ನಕಲಿ ನಡೆದಿದೆ. ಕೂಡಲೇ ಮೌಲ್ಯಮಾಪಕರನ್ನು ಅಮಾನತು ಮಾಡಲಾಗಿದೆ. ಅರ್ಥಶಾಸ್ತ್ರ ವಿಭಾಗದ ಡಾ| ಶರಣಪ್ಪ ಡಿ. ನಾಯಕ್, ಡಾ|ಶರಣಪ್ಪ ನಾಯಕ ಅವರು ಬೇರೆ ಬೇರೆ ಕಾಲೇಜಿನವರು. ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುತ್ತಿದೆ.
ಪ್ರೊ| ದಯಾನಂದ ಅಗಸರ್ ಗುವಿವಿ ಕುಲಪತಿ