Advertisement
ಜಯಂತಿ ಅವರು ಅತ್ಯಂತ ಕ್ರಿಯಾಶೀಲ ಶಿಕ್ಷಕಿಯಾಗಿದ್ದು ನಾಲೂರು ಶಾಲೆಯ ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಕರ್ತವ್ಯ ನಿರ್ವಹಿಸುತ್ತ ಶಾಲೆಯ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ್ದಾರೆ. ಅವರು ಶಾಲೆಗೆ ಶಾಲಾ ಕಾಂಪೌಂಡ್ ನಿರ್ಮಿಸುವಲ್ಲಿ, ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ, ಕ್ರೀಡಾಂಗಣ ವ್ಯವಸ್ಥೆ, ಸುಸಜ್ಜಿತವಾದ ರಂಗಮಂದಿರ ನಿರ್ಮಾಣ, ಅಚ್ಚುಕಟ್ಟಾದ ಕೊಠಡಿ ನಿರ್ಮಾಣ, ಸುಸಜ್ಜಿತವಾದ ಧ್ವಜ ಸ್ತಂಭ, ಕಾಂಪೌಂಡ್ ಹಾಗೂ ಶಾಲೆಯ ಗೋಡೆಗಳ ಮೇಲೆ ಅಚ್ಚುಕಟ್ಟಾಗಿ ಗೋಡೆಬರಹ, ಅಚ್ಚುಕಟ್ಟಾದ ಮುಖ್ಯ ಶಿಕ್ಷಕರ ಕೊಠಡಿ, ವ್ಯವಸ್ಥಿತವಾದ ನಲಿ-ಕಲಿ ಕೊಠಡಿ, ತಮ್ಮ ಶಾಲಾ ಮಕ್ಕಳನ್ನು ಸರಿಗಮಪ ಜೀ ಟಿವಿ ಕಾರ್ಯಕ್ರಮಕ್ಕೆ ಕೊಂಡೊಯ್ದಿರುವುದು,ಶಿಕ್ಷಣ ಇಲಾಖೆಯ ಅನೇಕ ಕಾರ್ಯಕ್ರಮಗಳನ್ನು ತಮ್ಮ ಶಾಲೆಯಲ್ಲಿ ಹಮ್ಮಿಕೊಂಡಿರುವುದು ಮತ್ತು ಯಶಸ್ವಿಯಾಗಿ ನಿರ್ವಹಣೆ ಮಾಡಿರುವುದು, ಅನೇಕ ದಾನಿಗಳಿಂದ ಸುಮಾರು ಇಪ್ಪತ್ತು ಲಕ್ಷದಷ್ಟು ಹೆಚ್ಚು ಮೊತ್ತದ ಹಣವನ್ನು ದಾನವಾಗಿ ಪಡೆದು ಶಾಲೆಗೆ ಬೇಕಾದಂತಹ ಎಲ್ಲಾ ಅಭಿವೃದ್ಧಿ ಕೆಲಸಗಳಿಗೆ ವಿನಿಯೋಗಿಸಿ ಅಭಿವೃದ್ಧಿ ಪಡಿಸಿ ಅನೇಕ ಸಾಧನೆಯನ್ನು ಮಾಡುತ್ತಾ ಶಾಲೆಯ ಕ್ರಿಯಾಶೀಲ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿರುವುದರಿಂದ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Advertisement
ಶಿಕ್ಷಕಿ ಜಯಂತಿಗೆ ರಾಜ್ಯಮಟ್ಟದ ಪ್ರಶಸ್ತಿ
08:09 PM Sep 11, 2020 | Suhan S |
Advertisement
Udayavani is now on Telegram. Click here to join our channel and stay updated with the latest news.