Advertisement

ರಾಜ್ಯ ಮಟ್ಟದ ಆ್ಯತ್ಲೆಟಿಕ್ಸ್‌ ಕ್ರೀಡಾಕೂಟ : ದಕ್ಷಿಣ ಕನ್ನಡ ಆ್ಯತ್ಲೀಟ್‌ಗಳ ಮೇಲುಗೈ

12:56 AM Dec 18, 2022 | Team Udayavani |

ಮಂಗಳೂರು : ಜಿಲ್ಲಾಡಳಿತ, ದ.ಕ. ಜಿ. ಪಂ., ಪ. ಪೂ. ಶಿಕ್ಷಣ ಇಲಾಖೆ ಹಾಗೂ ರಥಬೀದಿ ಸರಕಾರಿ ಬಾಲಕಿಯರ ಪ. ಪೂ.ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಮಂಗಳ ಕ್ರೀಡಾಂಗಣದಲ್ಲಿ ಶನಿವಾರದಿಂದ 3 ದಿನಗಳ ಕಾಲ ರಾಜ್ಯ ಮಟ್ಟದ ಆ್ಯತ್ಲೆಟಿಕ್ಸ್‌ ಕ್ರೀಡಾಕೂಟ ಆರಂಭವಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಆ್ಯತ್ಲೀಟ್‌ಗಳು ಮೇಲುಗೈ ಸಾಧಿಸಿದ್ದಾರೆ.

Advertisement

ಕೂಟದ ಮೊದಲ ದಿನ ಬಾಲಕಿಯರ ವಿಭಾಗದ 100 ಮೀ.ನಲ್ಲಿ ಬೆಂಗಳೂರು ಉತ್ತರ ಜಿಲ್ಲೆಯ ನಿಯೋಲ್‌ ಅನ್ನ ಕೊರ್ನೆಲ್ಲೋ ಪ್ರಥಮ, ಉಡುಪಿಯ ಅಂಕಿತಾ ದೇವಾಡಿಗ ದ್ವಿತೀಯ, ಮೈಸೂರಿನ ಹರ್ಷಿತಾ ಎಚ್‌.ಎಸ್‌. ತೃತೀಯ ಸ್ಥಾನ ಪಡೆದಿದ್ದಾರೆ. 800 ಮೀ.ನಲ್ಲಿ ಬೆಂಗಳೂರು ಉತ್ತರದ ಪ್ರಿಯಾಂಕಾ ಮಡಿವಾಳಪ್ಪ ಪ್ರಥಮ, ದ.ಕ.ದ ರಿತುಶ್ರೀ ದ್ವಿತೀಯ, ಕೊಡಗಿನ ಶ್ರೀರಕ್ಷಾ ತೃತೀಯ ಸ್ಥಾನ ಪಡೆದಿದ್ದಾರೆ. 3000 ಮೀ.ನಲ್ಲಿ ದ.ಕ.ದ ಪ್ರತಿಭಾ ಪ್ರಥಮ, ಉಡುಪಿಯ ನಂದಿನಿ ಜಿ. ದ್ವಿತೀಯ ಮತ್ತು ಬಾಗಲಕೋಟೆಯ ಮಹಾಲಕ್ಷ್ಮೀ ಬಸಕಳಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

400 ಮೀ. ಹರ್ಡಲ್ಸ್‌ನಲ್ಲಿ ದ.ಕ. ಜಿಲ್ಲೆಯ ಅಮೂಲ್ಯ ಬಿ.ಎಂ. ಪ್ರಥಮ, ಕೊಡಗಿನ ಸಹನಾ ಜಿ.ಎಸ್‌. ದ್ವಿತೀಯ, ಬೆಳಗಾವಿಯ ವೈಭವಿ ತೃತೀಯ ಸ್ಥಾನ ಪಡೆದಿದ್ದಾರೆ. ಹೈಜಂಪ್‌ನಲ್ಲಿ ಬೆಂಗಳೂರು ಉತ್ತರದ ಪಾವನ ಎನ್‌. ಪ್ರಥಮ, ಸಂಜನಾ ಯು.ಜೆ. ದ್ವಿತೀಯ ಮತ್ತು ಮೈಸೂರಿನ ಲಿನ್ಯಮೇರಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಡಿಸ್ಕಸ್‌ನಲ್ಲಿ ದ.ಕ. ಜಿಲ್ಲೆಯ ಪ್ರಾಂಜಲಿ ಎ. ಪ್ರಥಮ, ಮೈಸೂರಿನ ರೇಯ ಎಸ್‌.ಕೆ. ದ್ವಿತೀಯ ಮತ್ತು ದಕ್ಷಿಣ ಕನ್ನಡದ ರೋಶ್ನಿ ಪಿ. ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಪುರುಷರ ವಿಭಾಗದ 100 ಮೀ. ಓಟದಲ್ಲಿ ದ.ಕ.ದ ಆಯುಷ್‌ ಆರ್‌. ದೇವಾಡಿಗ ಪ್ರಥಮ, ಉಡುಪಿಯ ಸುನಲ್‌ಎಲ್‌. ಸುವರ್ಣ ದ್ವಿತೀಯ, ಉಡುಪಿಯ ಯತಿನ್‌ ನಾೖಕ್‌ ತೃತೀಯ ಸ್ಥಾನ ಪಡೆದಿದ್ದಾರೆ. 800 ಮೀ. ಓಟದಲ್ಲಿ ಕೊಡಗಿನ ರಮೇಶ್‌ ಪ್ರಥಮ, ಬೆಳಗಾವಿಯ ಭುವನ್‌ ಪೂಜಾರಿ ದ್ವಿತೀಯ ಮತ್ತು ಬೆಂಗಳೂರು ದಕ್ಷಿಣದ ಲೋಕೇಶ್‌ ಕೆ. ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. 3000 ಮೀ. ಓಟದಲ್ಲಿ ಬೆಂಗಳೂರು ದಕ್ಷಿಣದ ರೋಹನ್‌ ಬೇಕಲ್‌ ಪ್ರಥಮ, ಬಾಗಲಕೋಟೆಯ ಹನುಮಂತ ದ್ವಿತೀಯ, ದ.ಕ. ಜಿಲ್ಲೆಯ ಗಣಪತಿ ಎಲ್ಲಪ್ಪ ತೃತೀಯ ಸ್ಥಾನ ಪಡೆದಿದ್ದಾರೆ. 400 ಮಿ. ಹರ್ಡಸ್‌ನಲ್ಲಿ ಉಡುಪಿಯ ದರ್ಶನ್‌ ಪ್ರಥಮ, ಬೆಂಗಳೂರು ಉತ್ತರದ ಧ್ರುವಸೂರ್ಯ ದ್ವಿತೀಯ, ಉಡುಪಿಯ ತೇಜಸ್‌ ತೃತೀಯ ಸ್ಥಾನ ಪಡೆದಿದ್ದಾರೆ.

ಹೈಜಂಪ್‌ನಲ್ಲಿ ಉಡುಪಿಯ ಶಶಾಂಕ್‌ ಬಿ. ಪ್ರಥಮ, ಬೆಂಗಳೂರು ದಕ್ಷಿಣದ ಜಾಗೃತ್‌ ದ್ವಿತೀಯ, ದ.ಕ.ದ ಆದರ್ಶ್‌ ಶೆಟ್ಟಿ ತೃತೀಯ, ತ್ರಿಪಲ್‌ ಜಂಪ್‌ನಲ್ಲಿ ಕೊಡಗಿನ ಪುನೀತ್‌ ಪ್ರಥಮ, ಕೋಲಾ ರದ ಶಿವಲರ್‌ ದ್ವಿತೀಯ ಮತ್ತು ದ.ಕ.ದ ಮಂಜುನಾಥ್‌ ತೃತೀಯ ಸ್ಥಾನ ಪಡೆದಿದ್ದಾರೆ, ಶಾಟ್‌ಪುಟ್‌ನಲ್ಲಿ ದ.ಕ.ದ ಗಣೇಶ್‌ ನಾಗಪ್ಪ ಗೌಡ ಪ್ರಥಮ, ದ.ಕ.ದ ಗಣೇಶ್‌ ಹನುಮಂತ ದ್ವಿತೀಯ ಮತ್ತು ಧಾರವಾಡದ ಅಜಿಯನ್‌ ಎ. ವಾರೆಮಣಿ ತೃತೀಯ, ಜಾವಲಿನ್‌ನಲ್ಲಿ ಬೆಳಗಾವಿಯ ಶಶಾಂಕ್‌ ಪಾಟೀಲ್‌ ಪ್ರಥಮ, ದ.ಕ.ದ ಸ್ವರೂಪ್‌ ಎಚ್‌.ಎ. ದ್ವಿತೀಯ ಮತ್ತು ಉಡುಪಿಯ ಕುಲದೀಪ್‌ ಕುಮಾರ್‌ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next