Advertisement

ರಾಜ್ಯದಲ್ಲಿರುವುದು ಕೋಮಾ ಸರ್ಕಾರ: ಅರುಣ್‌ ಶಹಾಪುರ್‌

08:10 AM Jun 05, 2018 | Team Udayavani |

ಮಂಡ್ಯ:  ಈಗ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವುದು ಕೋಮಾ ಸರ್ಕಾರ ಎಂದು ವಿಧಾನಪರಿಷತ್‌ ಸದಸ್ಯ ಅರುಣ್‌ ಶಹಾಪುರ್‌ ಲೇವಡಿ ಮಾಡಿದರು. 

Advertisement

ಸರ್ಕಾರ ರಚನೆಯಾಗಿ ಹದಿನೈದು ದಿನಗಳಾಗಿದ್ದರೂ ಈಗ ಖಾತೆ ಹಂಚಿಕೆಯಾಗಿದೆ. ಆ ಖಾತೆಗಳಿಗೆ ಸಚಿವರನ್ನು ನೇಮಿಸಬೇಕಿದೆ. ಕಾಂಗ್ರೆಸ್‌-ಜೆಡಿಎಸ್‌ ಅಕ್ರಮ ಕೂಟದಿಂದ ಸರ್ಕಾರ ರಚನೆಯಾಗಿದ್ದು, ಹೊಸ ಸರ್ಕಾರದಿಂದ ಅಭಿವೃದ್ಧಿ ಕಾಣಬಹುದೆಂಬ ಜನರ ನಿರೀಕ್ಷೆ ಹುಸಿಯಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕುಮಾರಸ್ವಾಮಿ ಅವರು ಹೊಸ ಪಿಂಚಣಿ ಯೋಜನೆ ತೆಗೆದು ಹಳೇ ಮಾದರಿಯ ಪಿಂಚಣಿ ವ್ಯವಸ್ಥೆಯನ್ನೇ ಜಾರಿಗೊಳಿಸುವುದಾಗಿ ಹೇಳುತ್ತಿದ್ದಾರೆ. ಶಿಕ್ಷಕರ ವೇತನ ಬಡ್ತಿ, ವೇತನ ಆಯೋಗದ ಶಿಫಾರಸುಗಳ ಬಗ್ಗೆ ಮೊದಲು ತಮ್ಮ ನಿಲುವನ್ನು ಪ್ರಕಟಿಸಲಿ ಎಂದು ಸವಾಲು ಹಾಕಿದರು.

ಅಧಿಕಾರಿಗಳ ವರ್ಗಾವಣೆಗೆ ಕಾಂಗ್ರೆಸ್‌ ಸರ್ಕಾರ ತೋರಿದ ಆಸಕ್ತಿಯನ್ನು ಶಿಕ್ಷಕರ ವರ್ಗಾವಣೆಯತ್ತ ತೋರಿಸಲಿಲ್ಲ. ಎರಡು ವರ್ಷಗಳಿಂದ ಶಿಕ್ಷಕರ ವರ್ಗಾವಣೆ ಮಾಡಿಲ್ಲ. ಶಿಕ್ಷಕರಿಗೆ ನೆಮ್ಮದಿಯ ವಾತಾವರಣ ಕಲ್ಪಿಸಿಲ್ಲ. ದಂಪತಿಗಳು ಬೇರೆ ಬೇರೆ ಕಡೆ ಕೆಲಸ ನಿರ್ವಹಿಸುತ್ತಿದ್ದು ವರ್ಗಾವಣೆಯಾಗದೆ ಸಾಕಷ್ಟು ತೊಂದರೆ ಎದುರಿಸುತ್ತಿದ್ದಾರೆ. ಪ್ರತಿ ತಿಂಗಳ 5ನೇ ತಾರೀಖೀನೊಳಗೆ ಸಂಬಳ ಪಾವತಿಯಾಗುತ್ತಿಲ್ಲ. ವೇತನಕ್ಕಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿದ ಕೀರ್ತಿ ಕಾಂಗ್ರೆಸ್‌ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next