Advertisement

ಬಂಡವಾಳ ಹೂಡಿಕೆಯಲ್ಲಿ ರಾಜ್ಯ ನಂ.ಒನ್‌

07:33 AM Feb 14, 2017 | |

ಬೆಂಗಳೂರು: ಪರಿಣಾಮಕಾರಿ ಕೈಗಾರಿಕಾ ನೀತಿ ಜಾರಿಯಲ್ಲಿರುವ ಕಾರಣ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಕೈಗಾರಿಕಾ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದ್ದಾರೆ. 

Advertisement

ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಉದ್ದಿಮೆದಾರರನ್ನು ಆಕರ್ಷಿಸುವ “ಮೇಕ್‌ ಇನ್‌ ಇಂಡಿಯಾ’ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹೆಚ್ಚಿನ ಕಂಪನಿಗಳು ಬಂಡವಾಳ ಹೂಡಿಕೆಗೆ ಕರ್ನಾಟಕದತ್ತ ಒಲವು
ತೋರಿಸುತ್ತಿರುವುದರಿಂದ ಯುವ ಪೀಳಿಗೆಗೆ ವಿಪುಲ ಉದ್ಯೋಗಾವಕಾಶ ದೊರೆಯುತ್ತಿದೆ. ಹೀಗಾಗಿ, ದೇಶ-ವಿದೇಶಗಳಿಂದ ಬಂಡವಾಳ ಹೂಡಿಕೆಗೆ ಬರುವ ಕಂಪನಿಗಳಿಗೆ ರಾಜ್ಯದಲ್ಲಿ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. 

ರಾಜ್ಯಕ್ಕೆ ಯಾರೇ ಬಂದರೂ ಕ್ಷಣಮಾತ್ರದಲ್ಲಿ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡು ಕೈಗಾರಿಕಾ ಸ್ಥಾಪನೆಗೆ ಬೇಕಾಗುವ ಅಗತ್ಯ ಮೂಲಸೌಕರ್ಯ ಒದಗಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ನಮ್ಮ ಸರ್ಕಾರ ಇಲ್ಲಿವರೆಗೆ ಒಟ್ಟು 1,77,000 ಕೋಟಿ ರೂ.
ಯೋಜನೆಗಳಿಗೆ ಮಂಜೂರಾತಿ ನೀಡಿದೆ ಎಂದು ತಿಳಿಸಿದರು. ಸಚಿವರಾದ ಡಿ.ಕೆ. ಶಿವಕುಮಾರ್‌, ರಮೇಶ್‌ ಕುಮಾರ್‌, ಪ್ರಿಯಾಂಕ
ಖರ್ಗೆ, ಬಸವರಾಜ ರಾಯರೆಡ್ಡಿ, ಬಯೋಕಾನ್‌ ಲಿಮಿಟೆಡ್‌ನ‌ ಅಧ್ಯಕ್ಷೆ ಕಿರಣ್‌ ಮಜುಂದಾರ್‌ ಶಾ, ಭಾರತೀಯ ಕೈಗಾರಿಕೆಗಳ ಒಕ್ಕೂಟದ ಚಂದ್ರಜಿತ್‌ ಬ್ಯಾನರ್ಜಿ, ಶೋಭನಾ ಕಾಮಿನಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ
ಕುಂಟಿಯಾ, ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.

ರಕ್ಷಣಾ ವಲಯದಿಂದ ಹಿಡಿದು ಸಿದ್ಧ ಉಡುಪು ತಯಾರಿಕೆ ತನಕ ಎಲ್ಲ ಕ್ಷೇತ್ರಗಳಲ್ಲಿ ಸ್ವಾವಲಂಬಿ ರಾಷ್ಟ್ರವನ್ನಾಗಿ ಮಾಡುವುದು ಮೇಕ್‌ ಇನ್‌ ಇಂಡಿಯಾ ಕಾರ್ಯಕ್ರಮದ ಉದ್ದೇಶ. ಬೆಂಗಳೂರು ಹೊರ ವಲಯದಲ್ಲಿ ಈಗಾಗಲೇ ಪ್ರತ್ಯೇಕ ಮೆಡಿಟೆಕ್‌ ಪಾರ್ಕ್‌ ಸ್ಥಾಪನೆಗೆ
ಮಂಜೂರಾತಿ ನೀಡಲಾಗಿದೆ. ಅಲ್ಲದೆ, ಮಂಗಳೂರಿನಲ್ಲಿಯೂ ಎಂಆರ್‌ಪಿಎಲ್‌ ಕಂಪನಿ ಸಹಯೋಗದಲ್ಲಿ ಪ್ರತ್ಯೇಕ ಪ್ಲಾಸ್ಟಿಕ್‌ ಪಾರ್ಕ್‌
ಸ್ಥಾಪಿಸಲಾಗುತ್ತಿದೆ.
ಅನಂತಕುಮಾರ್‌, ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ಸಚಿವ

ಬೆಂಗಳೂರಿನಲ್ಲಿ ಬಂಡವಾಳ ಹೂಡಿಕೆಗೆ ಬರುವ ಕಂಪನಿಗಳಿಗೆ ಇಲ್ಲಿನ ಟ್ರಾμಕ್‌ ಜಾಮ್‌ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಈ
ಹಿನ್ನೆಲೆಯಲ್ಲಿ ಮೊದಲ ಹಂತದ ನಮ್ಮ ಮೆಟ್ರೊ ರೈಲು ಸಂಚಾರ ಏಪ್ರಿಲ್‌ ಅಂತ್ಯದೊಳಗೆ ಪೂರ್ಣ ಪ್ರಮಾಣದಲ್ಲಿ 
ಕಾರ್ಯಾರಂಭವಾಗಲಿದೆ. ಅಲ್ಲದೆ, 2ನೇ ಹಂತದ ಮೆಟ್ರೊ ಯೋಜನೆ ಕಾಮಗಾರಿಯನ್ನು ಕೂಡ 2020ರೊಳಗೆ ಪೂರ್ಣಗೊಳಿಸಲು ಉದ್ದೇಶಿಸಿದೆ.
ವೆಂಕಯ್ಯ ನಾಯ್ಡು, ಕೇಂದ್ರ ನಗರಾಭಿವೃದ್ಧಿ

Advertisement

ಬ್ರಿಟನ್‌ನಲ್ಲಿ ಭಾರತವು ಮೂರನೇ ಅತಿದೊಡ್ಡ ಹೂಡಿಕೆಯಾಗಿದೆ. ಭಾರತದಲ್ಲಿಯೂ ಬ್ರಿಟನ್‌ ಸಾಕಷ್ಟು ಹೂಡಿಕೆ ಮಾಡಿದೆ.
ಭಾರತದ ಸಹಭಾಗಿತ್ವದಲ್ಲಿ ರಕ್ಷಣಾ ವಲಯಕ್ಕೆ  ಸಂಬಂಧಪಟ್ಟಂತೆ ಕಾರ್ಯ ನಿರ್ವಹಿಸಲಾಗುವುದು.

ಹ್ಯಾರಿಯೇಟ್‌ ಬಾಲ್ಡ್‌ವಿನ್‌, ಬ್ರಿಟನ್‌ ರಾಷ್ಟ್ರದ ರಕ್ಷಣಾ ಸಚಿವೆ

ವೈಮಾನಿಕ ಮತ್ತು ರಕ್ಷಣಾ ವಲಯ ಸದೃಢಗೊಳ್ಳಲು ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆಯ ಅಗತ್ಯ ಇದೆ. ತಂತ್ರಜ್ಞಾನಗಳ ಅಳವಡಿಕೆಯಲ್ಲಿ ತಡವಾಗಬಾರದು. ಇದಕ್ಕೆ ಯಾವುದೇ ರೀತಿಯಲ್ಲಿಯೂ ವಿನಾಯಿತಿ ನೀಡಲು ಸಾಧ್ಯವಿಲ್ಲ. ನಾವು ತಡ ಮಾಡಿದರೆ ಮತ್ತೂಂದು ರಾಷ್ಟ್ರ ಅದನ್ನು ಅಳವಡಿಸಿ ಕೊಂಡು ಮುನ್ನಡೆಯುತ್ತದೆ. 

ಬಾಬಾ ಕಲ್ಯಾಣಿ, ಭರತ್‌ ಫೋರ್ಜ್‌ ಲಿ.ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ 

ಆರೋಗ್ಯ, ಜೈವಿಕ ತಂತ್ರಜ್ಞಾನ ಮತ್ತು ಔಷಧ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಹಲವು ಸಂಶೋಧನಾ ಸಂಸ್ಥೆಗಳಿದ್ದು,
ಈ ವಲಯದಲ್ಲಿ ಹೂಡಿಕೆಗೆ ಕರ್ನಾಟಕ ಉತ್ತಮ ಸ್ಥಳವಾಗಿದೆ. ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ಮುಂಚೂಣಿಯಲ್ಲಿದ್ದು,
ದೇಶದಲ್ಲಿಯೇ ಹೊಸ ಕ್ರಾಂತಿಯನ್ನುಂಟು ಮಾಡಿದೆ.
ಕಿರಣ್‌ ಮಜುಂದಾರ್‌, ಬಯೋಕಾನ್‌ ಅಧ್ಯಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next