Advertisement
ಹೋಬಳಿಯ ಮೂಲಕ ಆಂಧ್ರ ಗಡಿವರೆಗೂ ಕೈಗೊಂಡಿರುವ ಈ ಕಾಮಗಾರಿಯನ್ನು ಶಾಸಕಿಎಂ.ರೂಪಕಲಾ ವೀಕ್ಷಣೆಗೆ ಆಗಮಿಸಿದ್ದ ವೇಳೆ ರಸ್ತೆಅಭಿವೃದ್ಧಿಯ ಬಗ್ಗೆ ವಿವರಣೆ ನೀಡಿದರು. ಬಿಲ್ ಬಾಕಿಇದ್ದ ಕಾರಣ ಕಾಮಗಾರಿಯನ್ನು ಗುತ್ತಿಗೆದಾರರು ನಿಲ್ಲಿಸಿದ್ದರು. ಶಾಸಕಿ ಎಂ.ರೂಪಕಲಾ ಮತ್ತು ಹಿಂದಿನ ಸಂಸದ ಕೆ.ಎಚ್.ಮುನಿಯಪ್ಪ ಈ ಬಗ್ಗೆ ಅನೇಕ ಬಾರಿ ಚರ್ಚಿಸಿದ್ದ ಪರಿಣಾಮ ಕಾಮಗಾರಿ ಪ್ರಾರಂಭಿಸಲಾಗಿದೆ. ಈಗಾಗಲೇ ಕಾಮಗಾರಿ ಪ್ರಾರಂಭಿಸಿದ್ದು, 15 ದಿನಗಳಲ್ಲಿ ಡಾಂಬರೀಕರಣಗೊಳಿಸಿ ಪೂರ್ಣಗೊಳಿಸಲಾಗುತ್ತದೆ ಎಂದು ಭರವಸೆ ನೀಡಿದರು.
Related Articles
Advertisement
ಈ ಕೂಡಲೇ ಆಂಧ್ರದ ಗಡಿಭಾಗವಾದ ವೆಂಗಸಂದ್ರ ಕ್ರಾಸ್ ಮತ್ತು ಎನ್.ಜಿ ಹುಲ್ಕೂರುಮಾರ್ಗ ಮಧ್ಯೆ ರಸ್ತೆಯನ್ನು ಮೊದಲು ಡಾಂಬರೀಕರಣಗೊಳಿಸಿ ಈ 1 ಕಿ.ಮೀ. ರಸ್ತೆ ತೀರ ಹದಗಟ್ಟಿದ್ದು, ಸವಾರರಿಗೆ ತೀವ್ರ ಸಮಸ್ಯೆಯಾಗಿದೆ ಎಂದು ಅಧಿಕಾರಿಗಳು ಶಾಸಕಿ ಎಂ.ರೂಪಕಲಾ ಸೂಚಿಸಿದರು. ನಾಳೆಯಿಂದಲೇ ಈ ರಸ್ತೆ ದುರಸ್ತಿ ಮಾಡಿ ಡಾಂಬರು ಹಾಕುವುದಾಗಿ ಎಇಇ ಮಲ್ಲಿಕಾರ್ಜುನ್ ತಿಳಿಸಿದರು.
ಹಳೇ ಮದ್ರಾಸ್ ರಸ್ತೆ, ರಾಜ್ಯ ಹೆದ್ದಾರಿ: ಬೇತಮಂಗಲ ಬಸ್ ನಿಲ್ದಾಣದಿಂದ ಆಂಧ್ರಗಡಿಗೆ ಹಾದು ಹೋಗುವ ಹಳೇ ಮದ್ರಾಸ್ ರಸ್ತೆಯನ್ನು ಈ ಹಿಂದೆ ಬಳಸಲಾಗುತ್ತಿತ್ತು. ಆದರೆ, ಕಾಲಕ್ರಮೇಣ ಈ ರಸ್ತೆ ಬಿಟ್ಟು ಬದಲಿ ರಸ್ತೆ ಕೈಗೊಂಡಿದ್ದು, ಈ ಹಳೇಮದ್ರಾಸ್ ರಸ್ತೆ ಸಂಪೂರ್ಣವಾಗಿ ಒತ್ತುವರಿಯಾಗಿದೆಎಂದು ಹಲವರು ಆರೋಪಿಸಿದರು. ನಕಾಶೆಯಲ್ಲಿ ಇದೇ ರಸ್ತೆಯಲ್ಲೇ ರಾಜ್ಯ ಹೆದ್ದಾರಿ ಇದ್ದು, ಈ 300 ಮೀಟರ್ ರಸ್ತೆಯ ಮೂಲಕವೇ ಅಭಿವೃದ್ಧಿಪಡಿಸುವುದಾಗಿ ಅಧಿಕಾರಿಗಳು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಅ.ಮು.ಲಕ್ಷ್ಮೀನಾರಾಯಣ್, ತಾಪಂ ಮಾಜಿ ಸದಸ್ಯ ವೆಂಕಟರಾಮ್,ಮುಖಂಡರಾದ ಬಲಿಜಪಲ್ಲಿ ಕೃಷ್ಣಮೂರ್ತಿ, ರಾಯಸಂದ್ರ ಮುನಿರಾಮ್, ಇತರೆ ಮುಖಂಡರು ಉಪಸ್ಥಿತರಿದ್ದರು.