ಸುಳ್ಯ : ಲೋಕೋಪಯೋಗಿ ಇಲಾಖೆಯ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ನಾಲ್ಕನೇ ಹಂತದ ಎರಡನೇ ಘಟ್ಟದ ಯೋಜನೆ ಅಡಿಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 22 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ.
ಕಡಬ ಹಾಗೂ ಸುಳ್ಯ ವ್ಯಾಪ್ತಿಯಲ್ಲಿ ಕಾಮಗಾರಿಗಳು ಈಗಾಗಲೇ ಆರಂಭ ಗೊಂಡಿದ್ದು, ಕಾಮಗಾರಿ ಭರದಿಂದ ನಡೆಯುತ್ತಿದೆ. ಕೆಲವು ದಿನಗಳ ಹಿಂದೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಸಚಿವ ಎಸ್. ಅಂಗಾರ ಅವರು ಸುಬ್ರಹ್ಮಣ್ಯ ಸಮೀಪದ ಕುಲ್ಕುಂದದಲ್ಲಿ ಚಾಲನೆ ನೀಡಿದ್ದರು.
ಈ ಯೋಜನೆಯಡಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಸುಬ್ರಹ್ಮಣ್ಯ-ಉಡುಪಿ ರಾಜ್ಯ ಹೆದ್ದಾರಿ 37ರ ಕುಲ್ಕುಂದದಿಂದ ವೆಂಕಟಪುರ ಹಾಗೂ ಕೈಕಂಬದಿಂದ ನೆಟ್ಟಣದವರೆಗೆ 7.08 ಕಿ.ಮೀ. ವರೆಗೆ 5.5 ಮೀಟರ್‌ನಿಂದ 7 ಮೀ.ಗೆ ರಸ್ತೆ ವಿಸ್ತರಣೆಯಾಗಲಿದೆ. ಬೆಂಗಳೂರು-ಜಾಲೂÕರು ರಾಜ್ಯ ಹೆದ್ದಾರಿ 85ರ ಬಿಸ್ಲೆ ಘಾಟ್ 4.5 ಕಿ.ಮೀ. ಹಾಗೂ ನಾರ್ಣಕಜೆಯಿಂದ ಸೋಣಂಗೇರಿ ವರೆಗೆ 4.5 ಕಿ.ಮೀ. ರಸ್ತೆ 3.75ಮೀಟರ್‌ನಿಂದ 5.5 ಮೀ.ಗೆ ವಿಸ್ತರಣೆ ಆಗಿ ಅಭಿವೃದ್ಧಿ ನಡೆಯಲಿದೆ. ಸದ್ರಿ ರಸ್ತೆಯ ವಿಸ್ತರಣೆ ಜತೆ ಅಪಾಯಕಾರಿ ತಿರುವುಗಳನ್ನು ಆದಷ್ಟು ಸಮರ್ಪಕವಾಗಿಸುವ ಕಾಮಗಾರಿಯೂ ನಡೆಯುತ್ತಿದೆ. ಸುಬ್ರಹ್ಮಣ್ಯ ಸಮೀಪದ ಕುಲ್ಕುಂದದಿಂದ ನೆಟ್ಟಣದವರೆಗೆ ಹಾಗೂ ನಾರ್ಣಕಜೆಯಿಂದ ಸೋಣಂಗೇರಿ ವರೆಗೆ ರಸ್ತೆ ಅಗೆತ, ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಈ ಭಾಗದ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು ಎಂದು ಹಲವಾರು ವರ್ಷಗಳಿಂದ ಬೇಡಿಕೆ ವ್ಯಕ್ತವಾಗುತ್ತಲೇ ಇತ್ತು.
ಕುಲ್ಕುಂದದಿಂದ ವೆಂಕಟಪುರ ಹಾಗೂ ಕೈಕಂಬದಿಂದ ನೆಟ್ಟಣದವರೆಗೆ 7.08 ಕಿ.ಮೀ. ವರೆಗೆ 5.5 ಮೀಟರ್‌ನಿಂದ 7 ಮೀಟರ್‌ಗೆ ರಸ್ತೆ ವಿಸ್ತರಣೆ. ಬಿಸ್ಲೆ ಘಾಟ್ 4.5 ಕಿ.ಮೀ. ಹಾಗೂ ನಾರ್ಣಕಜೆಯಿಂದ ಸೋಣಂಗೇರಿ ವರೆಗೆ 4.5 ಕಿ.ಮೀ. ರಸ್ತೆ 3.75ಮೀಟರ್‌ನಿಂದ 5.5 ಮೀಟರ್‌ಗೆ ವಿಸ್ತರಣೆ.