Advertisement
ಪಾಲಿಕೆ ವ್ಯಾಪ್ತಿಯ ಕಸ್ತೂರಿ ನಗರ ಚನ್ನಸಂದ್ರ ಡಾಕ್ಟರ್ಸ್ ಲೇಔಟ್ 2ನೇ ಕ್ರಾಸ್‌ನಲ್ಲಿ ಈ ಕಟ್ಟಡವಿದ್ದು, ಕೇವಲ ಏಳು ವರ್ಷಗಳ (2013) 40/60 ವಿಸ್ತೀರ್ಣದಲ್ಲಿ ನಿರ್ಮಿಸಲಾಗಿತ್ತು. ಆಯಿಷಾ ಬೇಗ್, ಮೊಹಮ್ಮದ್ ಆಸೀಫ್ ಹಾಗೂ ಮೊಹಮದ್ ಇಯಾಸುದ್ದೀನ್ ಎಂಬುವವರು ಜಂಟಿಯಾಗಿ ಈ ಕಟ್ಟಡ ನಿರ್ಮಿಸಿದ್ದು, ಒಟ್ಟು ಎಂಟು ಪ್ಲಾಟ್‌ಗಳು (ಮನೆಗಳು) ಇದ್ದವು. ಈ ಪೈಕಿ ನಾಲ್ಕು ಮನೆಗಳಲ್ಲಿ ಐದು ಮಂದಿ ವಾಸವಿದ್ದರು.
Related Articles
Advertisement
ಆಯಿಷಾ ಬೇಗ್ ಸೇರಿದಂತೆ ಮೂವರು ಮಾಲೀಕರಿದ್ದಾರೆ. ಜಂಟಿಯಾಗಿ ಮನೆ ನಿರ್ಮಿಸಿದ್ದು, ನಾಲ್ಕು ಆಯಿಷಾ ಸೇರಿದ್ದು, ಉಳಿದ ನಾಲ್ಕು ಮನೆಗಳು ಮತ್ತೂಬ್ಬ ಪಾಲುದಾರರಿಗೆ ಸೇರಿವೆ. ಘಟನೆಯಿಂದ ಯಾರಿಗೂ ಪ್ರಾಣಹಾನಿಯಾಗಿಲ್ಲ ಎಂದು ತಿಳಿಸಿದರು. ವಲಯ ಜಂಟಿ ಆಯುಕ್ತರು ಪಲ್ಲವಿ, ಮುಖ್ಯ ಎಂಜಿನಿಯರ್ ಮೋಹನ್ ಕೃಷ್ಣ, ಕಾರ್ಯಪಾಲಕ ಎಂಜಿನಿಯರ್ ಪ್ರಭಾಕರ್, ಬಿಬಿಎಂಪಿ ಅಧಿಕಾರಿಗಳು ಇದ್ದರು.
ತಡರಾತ್ರಿಯೇ ನೆಲಸಮ: ಕಟ್ಟಡವನ್ನು ಪೂರ್ಣ ನೆಲಸಮ ಮಾಡುವ ಕಾರ್ಯ ರಾತ್ರಿ 9ಕ್ಕೆ ಆರಂಭವಾಗಿದ್ದು, ರಾತ್ರಿ ಪೂರ್ತಿ ನಡೆದಿದೆ. ಮುಂಜಾಗ್ರತಾ ದೃಷ್ಟಿಯಿಂದ ಅಕ್ಕಪಕ್ಕದ ಎರಡು ಕಟ್ಟಡಗಳ ನಿವಾಸಿಗಳನ್ನು ತೆರವು ಮಾಡಿ ಸುರಕ್ಷಿತ ಸ್ಥಳದಲ್ಲಿರಿಸಲಾಗಿದೆ.
ಮೂರನೇ ಘಟನೆ!: ಬೆಂಗಳೂರು ನಗರದಲ್ಲಿ ಇತ್ತೀಚೆಗಷ್ಟೇ ಕಟ್ಟಡ ಕುಸಿತ ಎರಡು ಘಟನೆಗಳು ನಡೆದಿದ್ದವು. ಲಕ್ಕಸಂದ್ರ ಹಾಗೂ ಡೇರಿ ಸರ್ಕಲ್ ಭಾಗದಲ್ಲಿ ಎರಡು ಕಟ್ಟಡಗಳು ಕುಸಿತವಾಗಿದ್ದವು. ಈ ಘಟನೆಗಳ ಬಳಿಕ, ಸರ್ಕಾರ ಮತ್ತು ಬಿಬಿಎಂಪಿ ಎಚ್ಚೆತ್ತುಕೊಂಡಿತ್ತು. ಶಿಥಿಲಗೊಂಡ ಕಟ್ಟಡಗಳ ತೆರವಿಗೆ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಸೂಚನೆ ಕೊಟ್ಟಿದ್ದರು.
ಬಿಬಿಎಂಪಿ ದೂರು: ಕಟ್ಟಡ ಕುಸಿತ ಘಟನೆಗೆ ಸಂಬಂಧಿಸಿದಂತೆ ಕಟ್ಟಡ ಮಾಲೀಕರಾದ ಆಯಿಷಾ ಬೇಗ್, ಮೊಹಮ್ಮದ್ ಆಸೀಫ್ ಹಾಗೂ ಮೊಹಮದ್ ಇಯಾಸುದ್ದೀನ್ ಎಂಬುವವರ ವಿರುದ್ಧ ರಾಮೂರ್ತಿನಗರ ಪೊಲೀಸ್ ಠಾಣೆಗೆ ಬಿಬಿಎಂಪಿ ದೂರು ನೀಡಿದೆ. ಕಟ್ಟಡ ಮಾಲೀಕರು ಆರಂಭದಲ್ಲಿ ನಾಪತ್ತೆಯಾಗಿದ್ದು, ಬಳಿಕ ಸ್ಥಳಕ್ಕೆ ಬಂದಾಗ ಅಧಿಕಾರಿಗಳು ಹೆಚ್ಚಿನ ವಿಚಾರಣೆ ನಡೆದಿದ್ದಾರೆ.
ಕೆರೆ ಒತ್ತುವರಿ ಕಾರಣವೇ?: ಕುಸಿದಿರುವ ಕಟ್ಟಡದ ಸುತ್ತಮುತ್ತ ದಶಕಗಳ ಹಿಂದೆ ಕೆರೆ ಇದ್ದು, ಅದನ್ನು ಒತ್ತುವರಿ ಮಾಡಿಕೊಂಡು ಫ್ಲ್ಯಾಟ್ ನಿರ್ಮಿಸಲಾಗಿದೆ. ಹೀಗಾಗಿಯೇ, ಇಲ್ಲಿನ ಮಣ್ಣು ಸಾಮರ್ಥ್ಯ ಕಡಿಮೆ ಇದ್ದು, ಕಟ್ಟಡ ಕುಸಿದಿದೆ ಎಂಬ ಆರೋಪಗಳು ಸ್ಥಳೀಯ ನಿವಾಸಿಗಳಿಂದ ಕೇಳಿಬಂದಿವೆ. ಸುತ್ತಮುತ್ತಲಿನ ಕಟ್ಟಡಗಳ, ಮಣ್ಣಿನ ಸಾಮರ್ಥ್ಯ ಪರೀಕ್ಷೆ: ಕಟ್ಟಡ ಕುಸಿತ ಘಟನೆಯಿಂದ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಆ ಬೀದಿಯಲ್ಲಿರುವ ಇತರೆ ಎಲ್ಲಾ ಕಟ್ಟಡಗಳ ಹಾಗೂ ಮಣ್ಣಿನ ಸಾಮರ್ಥ್ಯ ಪರೀಕ್ಷೆ ನಡೆಸಲು ಮುಂದಾಗಿದೆ. ಕುಸಿದ ಕಟ್ಟಡ ನೆಲಸಮ ಬಳಿಕ ಇನ್ನೆರಡು ದಿನಗಳಲ್ಲಿ ಆ ರಸ್ತೆಯ ಇತರೆ ಕಟ್ಟಡಗಳನ್ನು ತಪಾಸಣೆ ನಡೆಸಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಮಾಲೀಕರಿಂದಲೇ ಪರಿಹಾರ ಕೊಡಿಸಲಾಗುವುದು: ಕಟ್ಟಡದಲ್ಲಿದ್ದ ಎಂಟು ಮನೆಗಳ ಪೈಕಿ ನಾಲ್ಕು ಮನೆಗಳನ್ನು ಖರೀದಿಸಿದ್ದಾರೆ. ಘಟನೆಯಿಂದ ಇವರುಗಳು ಬೀದಿಗೆ ಬಂದಿದ್ದು, ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿದೆ. ತನಿಖೆ ಬಳಿಕ ಮಾಲೀಕರಿಂದಲೇ ನಷ್ಟ ಭರಿಸಲಾಗುತ್ತದೆ. ಜತೆಗೆ ಬಿಬಿಎಂಪಿಯಿಂದಲು ಅನುಕಂಪ ಆಧಾರವಾಗಿ ಅಗತ್ಯ ನೆರವು ನೀಡಲಾಗುತ್ತದೆ ಎಂದು ಮುಖ್ಯ ಆಯುಕ್ತ ಗೌರವ ಗುಪ್ತ ತಿಳಿಸಿದರು.
ಕುಸಿತಕ್ಕೆ ಕಾರಣ? (ಬಿಬಿಎಂಪಿ ಪ್ರಾಥಮಿಕ ತನಿಖೆ)
ಅನುಮತಿಗಿಂತ ಹೆಚ್ಚು ಅಂತಸ್ತು ಕಟ್ಟಿರುವುದು
ಕಳಪೆ ಕಾಮಗಾರಿ
ಕೆರೆ ಒತ್ತುವರಿ ಸ್ಥಳದಲ್ಲಿ ಕಟ್ಟಡ ನಿರ್ಮಾಣ?
ಏಳು ವರ್ಷವಾದರೂ ಓಸಿಯೇ ಇಲ್ಲ; ಆದರೂ ನೀರು, ಕರೆಂಟ್ ಕಟ್ಟಡ 2013ರಲ್ಲಿಯೇ ನಿರ್ಮಾಣವಾಗಿದ್ದರೂ, ಇಂದಿಗೂ ಮಾಲೀಕರು ಸ್ವಾಧೀನಾನುಭವ ಪತ್ರವನ್ನು (ಓಸಿ) ಪಡೆದಿಲ್ಲ. ಈ ಬಗ್ಗೆ ಬಿಬಿಎಂಪಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಓಸಿ ಇಲ್ಲದಿದ್ದರೂ ವಿದ್ಯುತ್ ಮತ್ತು ನೀರಿನ ಸಂಪರ್ಕ ಸಿಕ್ಕಿದ್ದು, ಬಿಬಿಎಂಪಿ ಸ್ಥಳೀಯ ಅಧಿಕಾರಿಗಳ ವಿರುದ್ಧ ಆರೋಪ ಕೇಳಿಬಂದಿದೆ. ಈ ಕುರಿತು ಪ್ರತಿಕ್ರಿಯಿಸಿದ ಪಾಲಿಕೆ ಮುಖ್ಯ ಆಯುಕ್ತರು ಈ ಬಗ್ಗೆ ತನಿಖೆ ನಡೆಸಿ ಸ್ಥಳೀಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗು ವುದು ಎಂದು ತಿಳಿಸಿದರು.
ಇನ್ನು ಶಿಥಿಲಾವಸ್ಥೆಯಲ್ಲಿವೆ 175 ಕಟ್ಟಡಗಳು-
ನಗರದಲ್ಲಿ 2019ರಲ್ಲಿ ಮಾಡಿದ್ದ ಸಮೀಕ್ಷೆಯಲ್ಲಿ ಗುರುತಿಸಿದ್ದ 185 ಶಿಥಿಲಾವಸ್ಥೆಯ ಕಟ್ಟಡಗಳ ಪೈಕಿ ಈಗಾಗಲೇ 10 ಕಟ್ಟಡಗಳನ್ನು ನೆಲಸಮ ಮಾಡಿದೆ. ಆ ಬಳಿಕ ಕೊರೊನಾ ಕಾರಣಕ್ಕೆ ನೆಲಸಮ/ ಅಗತ್ಯ ಕ್ರಮ ಸಾಧ್ಯವಾಗಿರಲಿಲ್ಲ. ಇನ್ನು ಸಮೀಕ್ಷೆ ಎರಡು ವರ್ಷದ ಹಿಂದೆ ನಡೆದಿದ್ದು, ಕಳೆದ ವಾರ ಪುನಃ ಹೊಸ ಸಮೀಕ್ಷೆ ನಡೆಸಿ ಮತ್ತಷ್ಟು ಶಿಥಿಲಗೊಂಡ ಕಟ್ಟಡಗಳನ್ನು ಪತ್ತೆ ಮಾಡಲಾಗುತ್ತಿದೆ. ಇದಕ್ಕಾಗಿ ವಿವಿಧ ವಲಯಗಳ ಜಂಟಿ ಆಯುಕ್ತರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗುತ್ತದೆ.
ಎಲ್ಲಾ ವಲಯಗಳಲ್ಲೂ 2019ರ ಸಮೀಕ್ಷೆಯ ಬಗ್ಗೆ ಕ್ರಮ ಮತ್ತು ಹೊಸ ಸಮೀಕ್ಷೆ ಶೀಘ್ರದಲ್ಲಿಯೇ ಆರಂಭವಾಗಲಿದೆ. ಮುಂದಿನ 30 ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸಿ ವರದಿ ನೀಡುವಂತೆ ಜಂಟಿ ಆಯುಕ್ತರುಗಳಿಗೆ ತಿಳಿಸಲಾಗಿದೆ. ಆ ವರದಿ ಆಧರಸಿ ಅಗತ್ಯ ಕ್ರಮಕೈಗೊಳ್ಳಲಾಗುತ್ತದೆ ಎಂದು ಪಾಲಿಕೆ ಮುಖ್ಯ ಆಯುಕ್ತರು ತಿಳಿಸಿದ್ದರು. ಕಟ್ಟಡ ಕುಸಿತ ಪ್ರಕಣಗಳು ಹೆಚ್ಚುತ್ತಿರುವ ಹಿನ್ನೆಲೆ ಸಮೀಕ್ಷೆ ಬೇಗಪೂರ್ಣಗೊಳಿಸಿ ತುರ್ತು ಕ್ರಮ ಅಗತ್ಯವಿದೆ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.