Advertisement

Yadagiri; ರಾಜ್ಯ ಸರ್ಕಾರದ ಜಾತಿಗಣತಿ ಅವೈಜ್ಞಾನಿಕ: ಜಯ ಮೃತ್ಯುಂಜಯ ಸ್ವಾಮೀಜಿ

02:16 PM Mar 01, 2024 | |

ಯಾದಗಿರಿ: ಜಾತಿ-ಜಾತಿಗಳ ನಡುವೆ ಗೊಂದಲ ಮೂಡಿಸಿ, ಒಗ್ಗಟ್ಟನ್ನು ದುರ್ಬಲಗೊಳಿಸುವ ಹುನ್ನಾರ ರಾಜ್ಯ ಸರ್ಕಾರದ್ದಾಗಿದ್ದು, ಇದನ್ನು ಪಂಚಮಸಾಲಿ‌ಪೀಠ ಹಾಗೂ ವೈಯಕ್ತಿಕವಾಗಿ ನಾನು ಸಹ ವಿರೋಧಿಸುತ್ತೇನೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮಿಗಳು ಹೇಳಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಅವೈಜ್ಞಾನಿಕ ಸಮೀಕ್ಷೆಯ ತಳಹದಿಯಲ್ಲಿ ವರದಿ ಸಲ್ಲಿಕೆ ಮಾಡಿರುವುದು ಸೂಕ್ತ ಅಲ್ಲ, ಈಗಿರುವ ಮುಖ್ಯಮಂತ್ರಿಗಳು ತಿಳಿದವರು, ಸಾಕಷ್ಟು ಜ್ಞಾನ ಉಳ್ಳವರಾಗಿದ್ದಾರೆ. ದಯವಿಟ್ಟು ಜಾತಿಗಣತಿ ಮೂಲಕ ಸಮಾಜದಲ್ಲಿ ಗೊಂದಲ ಸೃಷ್ಟಿ ಮಾಡಬೇಡಿ‌ ಎಂದು ಮನವಿ ಮಾಡಿಕೊಂಡರು.

ಲಿಂಗಾಯತ ಸಮಾಜವನ್ನು ನಾಲ್ಕನೇ ಸ್ಥಾನದಲ್ಲಿರಿಸಿ, ಅವಮಾನ ಮಾಡುವ ಹುನ್ನಾರ ಯಾವ ಮಠಾಧೀಶರು ಸಹಿಸಿಕೊಳ್ಳುವುದಿಲ್ಲ, ಎಲ್ಲಾ ಜಾತಿ-ಜನಾಂಗದವರನ್ನು ಅಣ್ಣ ತಮ್ಮಂದಿರ ರೀತಿ ಕಂಡ ಸಮುದಾಯವನ್ನು ಈ ವರದಿ ಮೂಲಕ ಅವಮಾನಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

2015 ರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ರೂಪದಲ್ಲಿ ರಾಜ್ಯ ಸರ್ಕಾರ ರಚಿಸಿದ ತಂಡವು ಜಾತಿ ಗಣತಿ ವರದಿ ನೀಡುವ ಮೂಲಕ ಸಮುದಾಯಗಳ ನಡುವೆ ವೈಷಮ್ಯ ಹುಟ್ಟಿಸುವ ಕೆಲಸ ಮಾಡುತ್ತಿದೆ. ಸಮೀಕ್ಷೆಯು, ಸಮೀಕ್ಷೆಯಾಗಿದ್ದರೆ ಅಷ್ಟೇ ಚಂದ, ಆದರೆ ಸಮೀಕ್ಷೆ ಜಾತಿ ಗಣತಿ ವರದಿಯಾಗಿ ಪರಿವರ್ತನೆಗೊಂಡು ಗೊಂದಲಕ್ಕೆ ಆಸ್ಪದ ಕೊಡಬಾರದು. ರಾಜ್ಯ ಸರ್ಕಾರದಲ್ಲಿರುವ ಏಳು ಮಂತ್ರಿಗಳು ಹಾಗೂ ಶಾಸಕರು ಧ್ವನಿ ಎತ್ತು ಸಮಾಜಕ್ಕಾದ ಅನ್ಯಾಯ ಸರಿಪಡಿಸಬೇಕೆಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next