Advertisement

ಪ್ರತಿಯೊಬ್ಬ ಅರ್ಹರಿಗೆ ಲಸಿಕೆ ನೀಡಲು ರಾಜ್ಯ ಸರಕಾರ ಬದ್ಧ: ಅಜಿತ್‌ ಪವಾರ್‌

10:43 AM Jun 01, 2021 | Team Udayavani |

ಪುಣೆ: ಕೋವಿಡ್ ಲಸಿಕೆ ಗರಿಷ್ಠ ಸಂಖ್ಯೆಯಲ್ಲಿ ಲಭ್ಯವಾಗುವಂತೆ ಮಾಡಲು ರಾಜ್ಯ ಸರಕಾರ ಎಲ್ಲ ಹಂತಗಳಲ್ಲಿಯೂ ಪ್ರಯತ್ನಗಳನ್ನು ಮಾಡುತ್ತಿದ್ದು, ರಾಜ್ಯದ ಪ್ರತಿಯೋರ್ವ ಅರ್ಹ ನಾಗರಿಕರಿಗೆ ಲಸಿಕೆ ನೀಡಲು ಸರಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಹೇಳಿದ್ದಾರೆ.

Advertisement

ವ್ಯಾಕ್ಸಿನೇಶನ್‌ ನೀಡುವುದರಲ್ಲಿ ಪುಣೆ ಜಿಲ್ಲೆ ಮುಂಚೂಣಿಯಲ್ಲಿದೆ. ಪುಣೆ ನಗರದಲ್ಲಿನ ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಸುಲಭವಾದ ಪದ್ಧತಿಯಲ್ಲಿ ಲಸಿಕಾ ಸೌಲಭ್ಯ ಒದಗಿಸಲು ಹಡಪ್ಸರ್‌ ಪ್ರದೇಶದಲ್ಲಿ ಡ್ರೈ ಇನ್‌ ವ್ಯಾಕ್ಸಿನೇಶನ್‌ ಸೆಂಟರ್‌ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಅಜಿತ್‌ ಪವಾರ್‌ ಹೇಳಿದ್ದಾರೆ. ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಕಡಿಯಾಗುತ್ತಿದೆ ಎಂಬುದು ತೃಪ್ತಿಯ ವಿಷಯವಾಗಿದ್ದರೂ ಸಂಭವನೀಯ ಮೂರನೇ ಅಲೆಯನ್ನು ಗಮನದಲ್ಲಿಟ್ಟುಕೊಂ ಡು ಎಚ್ಚರಿಕೆ ವಹಿಸಬೇಕಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರು ಸಚಿವಾಲ ಯದ ಉಪ ಮುಖ್ಯಮಂತ್ರಿ ಕಚೇ ರಿಯ ಸಮಿತಿ ಸಭಾಂಗಣದಿಂದ ಆನ್‌ಲೈನ್‌ ಮೂಲಕ ಹಡಪ್ಸರ್‌ನಲ್ಲಿ  ಮೊದಲ ಡ್ರೈವ್‌ ಇನ್‌ ವ್ಯಾಕ್ಸಿನೇಶನ್‌ ಸೆಂಟರ್‌ ಅನ್ನು ಉದ್ಘಾಟಿಸಿದರು.

ರಾಜ ಮಾತೇ ಅಹಲ್ಯ ದೇವಿ ಹೊಲ್ಕರ್‌ ಅವರ ಜನ್ಮ ದಿನಾಚರಣೆ ಸಂದರ್ಭ ಅವರ ಕೆಲಸ ಮತ್ತು ಆಲೋಚ ನೆಗಳನ್ನು ಸ್ಮರಿಸಿದ ಉಪಮುಖ್ಯಮಂತ್ರಿ  ಪವಾರ್‌, ರಾಜ್ಯದ ವೈದ್ಯರು, ದಾದಿಯರು ಸಹಿತ ಆರೋಗ್ಯ ವ್ಯವಸ್ಥೆ ತನ್ನೆಲ್ಲ ಶಕ್ತಿಯನ್ನು ಮೀರಿ ಕೊರೊನಾ ವಿರುದ್ಧ ಹೋರಾಡುತ್ತಿದೆ ಎಂದರು.

ಕೊರೊನಾ ಬಿಕ್ಕಟ್ಟು ನಿವಾರಿಸಲು ಪ್ರತಿ ಯೊಬ್ಬ ನಾಗರಿಕರಿಗೆ ಲಸಿಕೆ ನೀಡಲು ಸರಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ. ವಿದೇಶ ದಿಂದ ಲಸಿಕೆಗಳನ್ನು ಖರೀದಿಸಲು ಸರಕಾರ ಸಿದ್ಧ ವಾಗಿದೆ. ಲಸಿಕೆ ತಯಾರಕ ಭಾರತ್‌ ಬಯೋ ಟೆಕ್‌ನ ತಾಣವನ್ನು ಪುಣೆಯಲ್ಲಿ ತತ್‌ಕ್ಷಣ ಲಭ್ಯ ಗೊಳಿ ಸಲಾಗಿದ್ದು, ಶೀಘ್ರದÇÉೇ ಇಲ್ಲಿ ಲಸಿಕೆ ಉತ್ಪಾದನೆ ಪ್ರಾರಂಭವಾಗಲಿದೆ. ಆ ಮೂಲಕ ರಾಜ್ಯ ಸರಕಾರ ಕೊರೊನಾ ಲಸಿಕೆ ಚುರುಕುಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.

Advertisement

ಪುಣೆ ನಗರದ ಹಡಪ್ಸರ್‌ನಲ್ಲಿ ಪ್ರಾರಂಭವಾದ ಡ್ರೈವ್‌ ಇನ್‌ ವ್ಯಾಕ್ಸಿನೇಶನ್‌ ಸೆಂಟರ್‌ ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸಲಿದೆ. ಕೊರೊನಾ ಎರಡನೇ ಅಲೆಯ ಆತಂಕವನ್ನು ನಾವು ಯಶಸ್ವಿಯಾಗಿ ನಿಭಾಯಿಸುತ್ತಿದ್ದೇವೆ. ಸಂಭ ವನೀಯ ಮೂರನೇ ಅಲೆ ಭೀತಿಯನ್ನು ಪರಿಗಣಿಸಿ ರಾಜ್ಯ ಸರಕಾರವು ಮಕ್ಕಳ ವೈದ್ಯರ ಕಾರ್ಯ ಪಡೆ ಯನ್ನೂ ರಚಿಸಿದೆ ಎಂದು ತಿಳಿಸಿದ ಉಪ ಮುಖ್ಯ ಮಂತ್ರಿ ಅಜಿತ್‌ ಪವಾರ್‌, ಮಳೆಗಾಲ ದಲ್ಲಿ ಕೊರೊನಾದೊಂದಿಗೆ ಇತರ ಸಾಂಕ್ರಾ ಮಿಕ ಕಾಯಿಲೆಗಳ ಲಕ್ಷಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನಾಗರಿಕರು ಆರೋ ಗ್ಯದ ಬಗ್ಗೆ ಕಾಳಜಿ ವಹಿಸುವುದರ ಜತೆಗೆ ಸಮಯ ದಲ್ಲಿ ಚಿಕಿತ್ಸೆ ಪಡೆಯಬೇಕು. ಇದರ ಜತೆಗೆ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು  ನಾಗರಿಕರಲ್ಲಿ  ಮನವಿ ಮಾಡಿದರು.

ಈ ಸಂದರ್ಭ ಸಂಸದೆ ವಂದನಾ ಚವಾಣ್‌, ಸಂಸದ ಡಾ| ಅಮೋಲ್‌ ಕೊಲ್ಹೆ, ಶಾಸಕ ಚೇತನ್‌ ತುಪೆ, ಪುಣೆ ಮನಪಾ ಆಯುಕ್ತ ವಿಕ್ರಮ್‌ ಕುಮಾರ್‌, ಹೆಚ್ಚುವರಿ ಆಯುಕ್ತ ರುಬೆಲ್‌ ಅಗರ್ವಾಲ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next