Advertisement

MP Yaduveer ಡೆಂಗ್ಯೂಗೆ ರಾಜ್ಯ ಸರಕಾರ ಹೈ ಅಲರ್ಟ್ ಘೋಷಿಸಬೇಕು

08:22 PM Jul 09, 2024 | Team Udayavani |

ಹುಣಸೂರು: ಮೈಸೂರು ನಂತರದಲ್ಲಿ ಹುಣಸೂರು ತಾಲೂಕಿನಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಿರುವ, ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಡೆಂಗ್ಯೂ ರೋಗ ತಗುಲಿರುವವರ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕಿದೆ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದರು.

Advertisement

ನಗರದ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದ ಸಂಸದರು ರಕ್ತ ತಪಾಸಣೆ ಕೊಠಡಿಯ ಸಿಬ್ಬಂದಿಗಳಿಂದ ಕಳೆದ ವರ್ಷ, ಪ್ರಸಕ್ತ ಸಾಲು, ಜೂನ್ ತಿಂಗಳಲ್ಲಿ ಡೆಂಗ್ಯೂ, ಮತ್ತಿತರ ಜ್ವರದ ತಪಾಸಣೆ ಬಗ್ಗೆ ಮಾಹಿತಿ ಪಡೆದುಕೊಂಡರು.

ಜ್ವರದಿಂದ ಒಳರೋಗಿಗಳಾಗಿ ದಾಖಲಾಗಿರುವ ರೋಗಿಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಣೆ ನಡೆಸಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಡೆಂಗ್ಯೂ ಜ್ವರ ಸೋಂಕು ಶ್ರೀಸಾಮಾನ್ಯರನ್ನು ಕಾಡುತ್ತಿದ್ದು, ಈ ರೋಗದಿಂದ ಮುಕ್ತರಾಗಲು ಎಲ್ಲರೂ ಸ್ವಚ್ಚತೆ ಕಾಪಾಡಬೇಕು. ಆರೋಗ್ಯ ಇಲಾಖೆ ಈ ಸಂಬಂಧ ಜಾಗೃತಿ ಮೂಡಿಸುತ್ತಿದ್ದಾರೆ. ಸೋಂಕಿತರಿಗಾಗಿ ವಿಶೇಷ ಘಟಕ ತೆರೆಯುವ ಪರಿಸ್ಥಿತಿ ನಿರ್ಮಾಣವಾಗಿರುವುದು ಆತಂಕಕಾರಿಯಾಗಿದೆ.

ನೋ ಕಾಮೆಂಟ್, ಮಾಹಿತಿ ಪಡೆಯುವೆ:
ಹುಣಸೂರು ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿ ತೆರೆದು ಡೆಂಗ್ಯೂ ಜ್ವರ ಸೋಂಕು ತಗುಲಿದವರಿಗೆ ಚಿಕಿತ್ಸೆಗೆ ಕ್ರಮವಹಿಸಿದ್ದರು, ಆಸ್ಪತ್ರೆಯ ಸ್ಥಿತಿಗತಿ ನೋಡಿ ವ್ಯಥೆಯಾಗಿದೆ. ಹೈಟೆಕ್ ಆಸ್ಪತ್ರೆ ನಿರ್ಮಾಣವಾಗಿದ್ದು. ಸ್ಥಳಾಂತರಗೊಳಿಸಬೇಕಾಗಿದೆ ಎಂದ ವೇಳೆ 9 ಕೋಟಿ ಬಿಡುಗಡೆಯಾಗಿದೆ ಎಂದು ಡಿಎಚ್‌ಒ ಮಾಹಿತಿ ನೀಡಿದ್ದಾರೆಂಬ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಸಂಸದರು ಸರ್ಕಾರದಿಂದ ಎಷ್ಟು ಅನುದಾನ ಬಿಡುಗಡೆಯಾಗಿದೆ. ಯಾವ ಕೆಲಸ ಬಾಕಿ ಇದೆ ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಪಡೆದ ಬಳಿಕವಷ್ಟೆ ಉತ್ತರಿಸಲು ಸಾಧ್ಯ. ಈ ಬಗ್ಗೆ ನೋ ಕಾಮೆಂಟ್ ಈ ಬಗ್ಗೆ ನಾಳೆ ನಡೆಯುವ ಜಿಲ್ಲಾ ಮಟ್ಟದ ಕೆಡಿಪಿ ಸಭೆಯಲ್ಲಿ ಮಾಹಿತಿ ಪಡೆಯುತ್ತೇನೆಂದರು.

ಡೆಂಗ್ಯೂಗೆ ಹೈ ಅಲರ್ಟ್ ಘೋಷಿಸಲಿ:
ಡೆಂಗ್ಯೂ ಜ್ವರ ಚಿಕಿತ್ಸೆ ತುರ್ತು ಎಂದು ಪರಿಗಣಿಸಿ ಗ್ರಾಮೀಣ ಭಾಗದಲ್ಲಿ ಲಾರ್ವ ನಿಯಂತ್ರಿಸಲು ಇಲಾಖೆ ಕ್ರಮವಹಿಸಬೇಕು. ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಸಾರ್ವಜನಿಕರಿಗೆ ಚಿಕಿತ್ಸೆ ಗ್ರಾಮೀಣ ಭಾಗದಲ್ಲೇ ದೊರಕುವ ಕೆಲಸ ಆಗಬೇಕಿದೆ. ಇದಕ್ಕಾಗಿ ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿ ತೊಡಗಬೇಕು ಎಂದರು.

Advertisement

ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಲವರ್ಧನೆಗೂ ಆದ್ಯತೆ ನೀಡಿ ಗ್ರಾಮೀಣ ಜನರಿಗೆ ಹೆಚ್ಚಿನ ಆರೋಗ್ಯ ಸೌಕರ್ಯ ಸಿಗುವ ಕ್ರಮ ಆಗಬೇಕಿದೆ. ಈ ಸಂಬಂಧ ಕೇಂದ್ರ ಸರ್ಕಾರದಿಂದ ಯಾವ ರೀತಿ ಸಹಕಾರ ನೀಡಬಹುದು ಅದನ್ನು ಪರಿಶೀಲಿಸಿ ನೀಡಲು ಬದ್ಧ ಎಂದರು.

ಹೆಚ್ಚಿನ ವೈದ್ಯರ ನಿಯೋಜನೆಗೆ ಮನವಿ:
ಈ ವೇಳೆ ಡಾ.ಉಮೇಶ್ ಇಲ್ಲಿ ನಿತ್ಯ ಒಂದು ಸಾವಿರ ಹೊರರೋಗಿಗಳು ಬರುತ್ತಿದ್ದಾರೆ. ತಜ್ಞ ವೈದ್ಯರ ಸಂಖ್ಯೆ ಹೆಚ್ಚಿಸಬೇಕು. ಕಿಷ್ಕಿಂದೆ ಜಾಗದಲ್ಲೇ ಇರುವಷ್ಟೇ ವೈದ್ಯರು ಎಲ್ಲವನ್ನೂ ನಿಭಾಯಿಸುವಂತಾಗಿದೆ. ಇತ್ತೀಚೆಗೆ ತರಬೇತಿ ವೈದ್ಯರನ್ನು ನಿಯೋಜಿಸಲಾಗಿದ್ದರೂ, ತಜ್ಞ ವೈದ್ಯರ ಕೊರತೆಯಿಂದ ಸಮಸ್ಯೆಯಾಗಿದೆ. ಹೊಸ ಆಸ್ಪತ್ರೆ ಆರಂಭ, ಹೆಚ್ಚಿನ ವೈದ್ಯರ ನೇಮಕವಾದಲ್ಲಿ ಮಾತ್ರ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ನೆರವಾಗಲಿದೆ. ಈ ಬಗ್ಗೆ ಸರಕಾರದ ಗಮನಕ್ಕೆ ತರಬೇಕೆಂದು ಮನವಿ ಮಾಡಿದರು.

ಈ ವೇಳೆ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಮಹದೇವಸ್ವಾಮಿ, ಡಾ.ಉಮೇಶ್, ಡಾ.ವೆಂಕಟರಮಣ, ಬಿಜೆಪಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಮಹದೇವಸ್ವಾಮಿ, ನಗರಸಭೆ ಸದಸ್ಯರಾದ ಗಣೇಶ್‌ಕುಮಾರಸ್ವಾಮಿ, ವಿವೇಕಾನಂದ, ಬಿಜೆಪಿ ನಗರ ಘಟಕದ ಅಧ್ಯಕ್ಷ ನಾರಾಯಣ್, ತಾಲೂಕು ಅಧ್ಯಕ್ಷ ಕಾಂತರಾಜ್, ಮುಖಂಡರಾದ ಹನಗೋಡು ಮಂಜುನಾಥ್, ಮಹದೇವ್, ಸುಜಿತ್, ಮಹದೇವ್, ರವಿಶಂಕರ್ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next