ಎಚ್.ಆಂಜನೇಯ ಸೇರಿ ಮೂರ್‍ನಾಲ್ಕು ಸಚಿವರು ವಿಧಾನಸೌಧದಲ್ಲಿ ಕಾಣಿಸಿಕೊಳ್ಳುತ್ತಿರುವುದು ಬಿಟ್ಟರೆ 2 ಡಜನ್‌ಗೂ ಅಧಿಕ ಸಚಿವರು ಇತ್ತ ತಲೆ ಹಾಕುತ್ತಿಲ್ಲ. ವಿಧಾನಸೌಧ-ವಿಕಾಸಸೌಧಕ್ಕೆ ಸಚಿವರನ್ನು ಹುಡುಕಿಕೊಂಡು ಬಂದವರಿಗೆ “ಸಾಹೇಬ್ರು ಕ್ಷೇತ್ರ ಪ್ರವಾಸ’ದಲ್ಲಿದ್ದಾರೆ. “ಸಾಹೇಬ್ರು ಸಿಎಂ ಅವರ ಪ್ರೋಗ್ರಾಂ’ನಲ್ಲಿದ್ದಾರೆ ಎಂಬ ಸಿದ್ಧ ಉತ್ತರ ದೊರೆಯುತ್ತಿದೆ.
Advertisement
ಮುಖ್ಯಮಂತ್ರಿಯವರು ಸಾಧನಾ ಸಂಭ್ರಮ ಯಾತ್ರೆಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯೂ ನಡೆಯುತ್ತಿರುವುದರಿಂದ ಆಯಾ ಜಿಲ್ಲಾ ಉಸ್ತುವಾರಿ ಸಚಿವರು, ಉಸ್ತುವಾರಿ ಕಾರ್ಯದರ್ಶಿಗಳು ಯಾತ್ರೆಯಲ್ಲೇ ಇರಬೇಕಾಗಿದೆ.ಜತೆಗೆ ಆಯಾ ಜಿಲ್ಲಾಡಳಿತ ಯಾತ್ರೆಯಲ್ಲೇ ಮಗ್ನವಾಗಿದೆ. ಬೀದರ್‌ನಲ್ಲಿ ಸಾಧನಾ ಸಂಭ್ರಮ ಉದ್ಘಾಟನಾ ಕಾರ್ಯಕ್ರಮದಲ್ಲಿ ಆರು ಸಚಿವರು ಉಪಸ್ಥಿತರಿದ್ದರು. ನಂತರ 2ನೇ ಹಾಗೂ 3ನೇ ದಿನದ ಪ್ರತಿ ಕಾರ್ಯಕ್ರಮದಲ್ಲಿ ಒಬ್ಬರು ಅಥವಾ ಇಬ್ಬರು ಸಚಿವರು ಹಾಜರಾಗುತ್ತಿದ್ದಾರೆ.
ಅಹವಾಲು ಸ್ವೀಕರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಉಸ್ತುವಾರಿ ಕಾರ್ಯದರ್ಶಿ ಹೊರತುಪಡಿ ಸಿದರೆ ಉಳಿದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರು ವಂತೆ ಸೂಚಿಸಲಾಗಿದೆ ಎಂದು ಸಮಜಾಯಿಷಿ ನೀಡುತ್ತಾರೆ. ಚುನಾವಣಾ “ಮೂಡ್’
ಡಿ.13 ರಂದು ಸಿಎಂ ಸಿದ್ದರಾಮಯ್ಯ ಆರಂಭಿಸಿರುವ ಸಾಧನಾ ಸಂಭ್ರಮ ಯಾತ್ರೆ ಒಂದು ತಿಂಗಳ ಕಾಲ ಸಂಚರಿಸಲಿದೆ. ಮತ್ತೂಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಪರಿವರ್ತನಾ ಯಾತ್ರೆ ನ.2 ರಂದು ಪ್ರಾರಂಭಗೊಂಡಿದ್ದು ಜ.28 ರವರೆಗೆ ನಡೆಯಲಿದೆ. ಈ ಮಧ್ಯೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರ ಕರ್ನಾಟಕ ವಿಕಾಸ ವಾಹಿನಿ ಯಾತ್ರೆಯೂ ನಡೆಯುತ್ತಿದೆ. ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕರ ಸಹಿತ ಮೂರೂ ಪಕ್ಷಗಳ ನಾಯಕರು, ಶಾಸಕರು, ಕಾರ್ಯಕರ್ತರು, ಮುಖಂಡರು ಚುನಾವಣಾ “ಮೂಡ್’ನಲ್ಲಿರುವುದರಿಂದ ಅಧಿಕಾರಿ ವಲಯವೂ ಸಹಜವಾಗಿ ಚುನಾವಣೆ
ನಡೆದು ಹೊಸ ಸರ್ಕಾರ ಬಂದ ಮೇಲೆ ನೋಡೋಣ ಎಂಬ ಮನಸ್ಥಿತಿಗೆ ತಲುಪಿದಂತಾಗಿದೆ.
Related Articles
Advertisement