Advertisement
ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ರಾಜ್ಯದಲ್ಲಿ ನೆರೆಯಿಂದ ಲಕ್ಷಾಂತರ ಮಂದಿ ಮನೆ, ಆಸ್ತಿ-ಪಾಸ್ತಿ, ಕೃಷಿ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಅವರ ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯ ರಾಜ್ಯ ಸರಕಾರದಿಂದ ಆಗುತ್ತಿಲ್ಲ. ನೆರವಿಗೆ ಬರಬೇಕಾದ ಕೇಂದ್ರ ಸರಕಾರ ಸ್ಪಂದಿಸುತ್ತಿಲ್ಲ. ಮೋದಿ ಜತೆ ಮಾತನಾಡುವ ಧೈರ್ಯವಿಲ್ಲದ ಯಡಿಯೂರಪ್ಪ ಅವರ ಅಸಹಾಯಕ ಸ್ಥಿತಿ ನೋಡಿ ನಮಗೆ ಕನಿಕರ ಹುಟ್ಟುತ್ತಿದೆ ಎಂದರು. 2009ರಲ್ಲಿ ನೆರೆ ಪರಿಸ್ಥಿತಿ ವೇಳೆ ಆಗಿನ ಪ್ರಧಾನಿ ಡಾ| ಮನಮೋಹನ ಸಿಂಗ್ ಹಾಗೂ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಾಜ್ಯಕ್ಕೆ 1500 ಕೋ.ರೂ. ಮಂಜೂರು ಮಾಡಿಸಿದ್ದರು ಎಂದವರು ಹೇಳಿದರು.
ಅನರ್ಹ ಶಾಸಕರಲ್ಲಿ ಕೆಲವು ಮಂದಿ ಮರಳಿ ಕಾಂಗ್ರೆಸ್ ಸೇರಲು ಉತ್ಸುಕತೆ ತೋರ್ಪಡಿಸುತ್ತಿದ್ದಾರೆ. ಪಕ್ಷಕ್ಕೆ ದ್ರೋಹವೆಸಗಿದವರನ್ನು ಮರಳಿ ಪಕ್ಷಕ್ಕೆ ಸೇರ್ಪಡೆ ಗೊಳಿಸುವ ಪ್ರಶ್ನೆಯೇ ಇಲ್ಲ ಎಂದರು. ಮಾಜಿ ಸಚಿವ ಬಿ.ರಮಾನಾಥ ರೈ, ಕೆಪಿಸಿಸಿ ವೀಕ್ಷಕರಾದ ವಿ.ಆರ್. ಸುದರ್ಶನ್, ಸೂರಜ್ ಹೆಗ್ಡೆ, ಎಐಸಿಸಿ ಕಾರ್ಯ ದರ್ಶಿ ವಿಷ್ಣುನಾಥನ್, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಮಾಜಿ ಶಾಸಕರಾದ ವಿಜಯ ಕುಮಾರ್ ಶೆಟ್ಟಿ , ಜೆ.ಆರ್.ಲೋಬೋ, ಶಕುಂತಳಾ ಶೆಟ್ಟಿ, ಡಿಸಿಸಿ ಅಧ್ಯಕ್ಷ ಕೆ.ಹರೀಶ್ ಕುಮಾರ್, ಮುಖಂಡರಾದ ಕಳ್ಳಿಗೆ ತಾರನಾಥ ಶೆಟ್ಟಿ , ಮೋಹನ್ ಪಿ.ವಿ., ಮಿಥುನ್ ರೈ, ಧನಂಜಯ ಅಡ³ಂಗಾಯ, ಶಾಲೆಟ್ ಪಿಂಟೋ, ಶಶಿಧರ ಹೆಗ್ಡೆ, ನವೀನ್ ಡಿ’ಸೋಜಾ, ಪ್ರಸಾದ್ ರಾಜ್ ಕಾಂಚನ್, ಟಿ.ಕೆ.ಸುಧೀರ್, ನಜೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.
Related Articles
ಮಹಾನಗರ ಪಾಲಿಕೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು ಬುಧವಾರ ಪ್ರಕಟಿಸಲಾಗುವುದು. ಹಿಂದಿನ ಸಿದ್ಧರಾಮಯ್ಯ ಸರಕಾರ ಮಂಗಳೂರಿಗೆ ಸಾಕಷ್ಟು ಅನುದಾನ ನೀಡಿದೆ. ಕಳೆದ 5 ವರ್ಷಗಳಲ್ಲಿ ಮಹಾನಗರದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಪಕ್ಷ ಒಗ್ಗಟ್ಟಿನಿಂದ, ಆತ್ಮವಿಶ್ವಾಸದಿಂದ ಚುನಾ ವಣೆಗೆ ಎದುರಿಸುತ್ತಿದ್ದು ಕಳೆದ ಸಾಲಿಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ದಿನೇಶ್ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದರು.
Advertisement