ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ರಾಜ್ಯದ ಕೋವಿಡ್ 19 ಸ್ಥಿತಿಗತಿ ಕುರಿತು ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದರು. ತಜ್ಞರ ವರದಿ ಸೇರಿದಂತೆ ಹಲವಾರು ವಿಚಾರಗಳ ಆಧಾರದಲ್ಲಿ ರಾಜ್ಯದಲ್ಲಿ ಜಾರಿಯಲ್ಲಿದ್ದ ವಾರಾಂತ್ಯದ ಕರ್ಫ್ಯೂವನ್ನು ತೆರವು ಮಾಡಲು ಸರ್ಕಾರ ನಿರ್ಧರಿಸಿದೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡೊದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ನಾಗೇಶ್, ಬೆಂಗಳೂರಿನಲ್ಲಿ ಜ.29ರವರೆಗೆ ಶಾಲೆಗಳನ್ನು ತೆರಯುವಂತಿಲ್ಲ. ಮುಂದಿನ ಶುಕ್ರವಾರ (ಜ.28)ದಂದು ಸಭೆ ನಡೆಸಿ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಹೇಳಿದರು.
ಬೆಂಗಳೂರು ಬಿಟ್ಟು ಎಲ್ಲ ಕಡೆ ಶಾಲೆಯನ್ನು ಒಂದು ಯುನಿಟ್ ಎಂದು ಪರಿಗಣಿಸಲಾಗುವುದು. ಶಾಲೆಯಲ್ಲಿ ಕಡಿಮೆ ಪ್ರಕರಣ ಕಂಡು ಬಂದರೆ 3 ದಿನ ಬಂದ್, ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣ ಕಂಡುಬಂದರೆ ಏಳು ದಿನ ಬಂದ್ ಮಾಡಿ ಮತ್ತೆ ಆರಂಭವಾಗಲಿದೆ ಎಂದು ಹೇಳಿದರು.
ಇದನ್ನೂ ಓದಿ:ಕೋವಿಡ್ ಮಹತ್ವದ ಸಭೆ: ವೀಕೆಂಡ್ ಕರ್ಫ್ಯೂ ತೆರವು, ನೈಟ್ ಕರ್ಫ್ಯೂ ಮುಂದುವರಿಕೆ
533104 ಜನರನ್ನು ಪರೀಕ್ಷೆ ಮಾಡಲಾಗಿದೆ 5.94% ಪೊಸಿಟಿವ್ ಬಂದಿದೆ. 1-10 ವಿದ್ಯಾರ್ಥಿಗಳು 5.9% ಇದೆ. ಬೆಂಗಳೂರಿನಲ್ಲಿ 14.12% ಇದೆ. 6 ಜಿಲ್ಲೆಗಳಲ್ಲಿ 9% ರಷ್ಟಿದೆ. 13 ಜಿಲ್ಲೆಗಳಲ್ಲಿ 9 % ಗಿಂತ ಕಡಿಮೆ ಇದೆ. ಉಳಿದ ಜಿಲ್ಲೆಗಳಲ್ಲಿ 5% ಕ್ಕಿಂತ ಕಡಿಮೆ ಇದೆ ಎಂದು ಸಚಿವರು ಹೇಳಿದರು.