Advertisement

ಕೇಂದ್ರದ ಅನುದಾನ ವಿನಿಯೋಗಿಸುವಲ್ಲಿ ರಾಜ್ಯ ಸರಕಾರ ವಿಫ‌ಲ: ಶೋಭಾ

09:54 PM Jun 10, 2019 | Sriram |

ಅಜೆಕಾರು: ರಾಜ್ಯದ ಕಾಂಗ್ರೆಸ್‌ ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರಕಾರ ಕೇಂದ್ರ ಸರಕಾರದ ಅನುದಾನ ವಿನಿಯೋಗ ಮಾಡುವಲಿ ಸಂಪೂರ್ಣ ವಿಫ‌ಲವಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಅಜೆಕಾರಿನಲ್ಲಿ ಜೂ.9ರಂದು ನಡೆದ ಬಿಜೆಪಿ ಕಾರ್ಯಕರ್ತರ ಸಭೆ ಹಾಗೂ ಅಭಿನಂದನ ಕಾರ್ಯಕ್ರಮದಲ್ಲಿ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ರಾಜ್ಯ ಸರಕಾರವು ದುರಾಡಳಿತ ನಡೆಸುತ್ತಿದ್ದು ಯಾವುದೇ ಸಂದರ್ಭ ಅಧಿಕಾರದಿಂದ ಕೆಳಗಿಳಿಯಬಹುದು. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.

ಹೋಬಳಿ ಮಟ್ಟದಲ್ಲಿ ಅಭಿವೃದ್ಧಿಗಾಗಿ ಅನುದಾನ ಒದಗಿಸಲಾಗುವುದು. ಪ್ರತಿ ಗ್ರಾಮದ ಆಭಿವೃದ್ಧಿಗೂ ಸಮಾನ ಅನುದಾನ ನೀಡುವ ಭರವಸೆಯನ್ನು ಸಂಸದರು ನೀಡಿದರು.
ಅಧ್ಯಕ್ಷತೆಯನ್ನು ಕ್ಷೇತ್ರಾಧ್ಯಕ್ಷರಾದ ಮಣಿರಾಜ ಶೆಟ್ಟಿವಹಿಸಿದ್ದರು. ಜಿ.ಪಂ. ಸದಸ್ಯೆ ಜ್ಯೋತಿ ಹರೀಶ್‌, ಉದಯ ಕೋಟ್ಯಾನ್‌, ಬಿಜೆಪಿ ಮುಖಂಡ ಸತೀಶ್‌ ಶೆಟ್ಟಿ ಮುಟ್ಲುಪಾಡಿ, ರವೀಂದ್ರ ಕುಮಾರ್‌, ಸಂಧ್ಯಾ ರಮೇಶ್‌, ದೀನೆಶ್‌ ಕುಮಾರ್‌, ಭವಾನಿ ಶಂಕರ್‌, ಶಾಂತಿರಾಜ್‌ ಜೈನ್‌, ನಂದಕುಮಾರ್‌ ಹೆಗ್ಡೆ, ಜ್ಯೋತಿ ಪೂಜಾರಿ ಉಪಸ್ಥಿತರಿದ್ದರು.

ಬಜಗೊಳಿ ಶಕ್ತಿ ಕೇಂದ್ರದ ಅಧ್ಯಕ್ಷ ನಂದಕುಮರ್‌ ಹೆಗ್ಡೆ ಪ್ರಸ್ತಾವಿಸಿ ಕಂದಾಯ, ಡೀಮ್ಡ್ ಫಾರೆಸ್ಟ್‌, ಮರಳು ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವಂತೆ ಮನವಿ ಮಾಡಿದರು.

Advertisement

ತಾ.ಪಂ. ಸದಸ್ಯ ಹರೀಶ್‌ ನಾಯಕ್‌ ಕಾರ್ಯಕ್ರಮ ನಿರೂಪಿಸಿದರು. ಗೌತಮ್‌ ನಾಯಕ್‌ ಸ್ವಾಗತಿಸಿದರು. ರಾಘವೇಂದ್ರ ವಂದಿಸಿದರು.

ರಾಜ್ಯ ಸರಕಾರ ನಿದ್ರಾವಸ್ಥೆಯಲ್ಲಿದೆ
ಶಾಸಕ ಸುನಿಲ್‌ ಕುಮಾರ್‌ ಮಾತನಾಡಿ, ಆಶ್ರಯ ವಸತಿ, ಕುಡಿಯುವ ನೀರು, ರಸ್ತೆ ಅಭಿವೃದ್ಧಿ ಸೇರಿದಂತೆ ಜನತೆಯ ಮೂಲ ಸೌಕರ್ಯ ಒದಗಿಸಲು ರಾಜ್ಯ ಸರಕಾರ ಅನುದಾನ ನೀಡುತ್ತಿಲ್ಲ. ಕಳೆದ ಒಂದು ವರ್ಷದಿಂದ ರಾಜ್ಯ ಸರಕಾರ ನಿದ್ರಾವಸ್ಥೆಯಲ್ಲಿದೆ. ಮುಂದಿನ 10 ತಿಂಗಳಲ್ಲಿ ಗ್ರಾ.ಪಂ. ಚುನಾವಣೆ ಬರಲಿದ್ದು ತಾಲೂಕಿನ ಎಲ್ಲ 34 ಗ್ರಾಮ ಪಂಚಾಯತ್‌ಗಳಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರಕ್ಕೆ ಬರುವಲ್ಲಿ ಕಾರ್ಯಕರ್ತರು ಶ್ರಮಿಸ‌ಬೇಕು ಎಂದರು.

ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ: ಸುನಿಲ್‌
ಅಜೆಕಾರು: ಕಳೆದ ಒಂದು ವರ್ಷದಿಂದ ರಾಜ್ಯ ಸರಕಾರವು ಶಾಸಕರ ನಿಧಿ ಸಹಿತ ಕ್ಷೇತ್ರದ ಅಭಿವೃದ್ಧಿಗೆ ಅನುದಾನವನ್ನು ನೀಡುತ್ತಿಲ್ಲ. ಕೇಂದ್ರ ಸರಕಾರದಿಂದ ಮಂಜೂರಾದ ಕಾಮಗಾರಿಗಳಿಗೆ ಟೆಂಡರ್‌ ಪ್ರಕ್ರಿಯೆಯನ್ನೂ ನಡೆಸುತ್ತಿಲ್ಲ ಎಂದು ಶಾಸಕ ಸುನಿಲ್‌ ಕುಮಾರ್‌ ಆರೋಪಿಸಿದರು.

ನಿಟ್ಟೆ ಗ್ರಾಮದ ಸಾಗರ್‌ ಆರ್ಕೆಡ್‌ನ‌ಲ್ಲಿ ಜೂ. 9ರಂದು ನಡೆದ ಕಾರ್ಯಕರ್ತರ ಸಭೆ ಹಾಗೂ ಸಂಸದರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮ್ಮಾನ ಸ್ವೀಕರಿಸಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುವುದಲ್ಲದೆ ತಿಂಗಳ ಒಂದು ದಿನ ಉಡುಪಿಯ ಕಚೇರಿಯಲ್ಲಿ ಅಹವಾಲು ಸ್ವೀಕರಿಸಲು ಲಭ್ಯವಿರುತ್ತೇನೆ ಎಂದರು.

ಬಾಲಕೃಷ್ಣ ಹೆಗ್ಡೆ, ರವೀಂದ್ರ ಕುಮಾರ್‌, ಪ್ರವೀಣ್‌ ಸಾಲ್ಯಾನ್‌, ಜಯವರ್ಮ ಸಾಲ್ಯಾನ್‌, ಇನ್ನಾ ಉದಯ್‌ ಕುಮಾರ್‌ ಶೆಟ್ಟಿ, ರೇಷ್ಮಾ ಶೆಟ್ಟಿ, ಹರಿಶ್ಚಂದ್ರ, ಸಬಿತಾ ಪೂಜಾರಿ, ಪ್ರಶಾಂತ್‌ ಜೈನ್‌ ಉಪಸ್ಥಿತರಿದ್ದರು. ಪ್ರವೀಣ್‌ ಸಾಲ್ಯಾನ್‌ ಸ್ವಾಗತಿಸಿದರು. ಬಾಲಕೃಷ್ಣ ಹೆಗ್ಡೆ ವಂದಿಸಿದರು. ಸುರೆಶ್‌ ಭಟ್‌ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next