Advertisement

ಹೂಗುಚ್ಛ, ಹಾರಕ್ಕೆ ರಾಜ್ಯ ಸರ್ಕಾರ ಬ್ರೇಕ್‌

04:10 PM Aug 12, 2021 | Team Udayavani |

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ನಡೆಯುವ ಸರ್ಕಾರಿ ಸಭೆ, ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರದ ಹೆಸರಲ್ಲಿ ಹೂಗುಚ್ಛ, ಹಾರ, ಶಾಲು ಹಾಗೂ ನೆನಪಿನ ಕಾಣಿಕೆ ನೀಡುವುದನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಹೂ ಬೆಳೆಗಾರರು, ಮಾರಾಟಗಾರರು ತೀವ್ರ ಅಸಮಾಧಾನ
ವ್ಯಕ್ತಪಡಿಸಿದ್ದಾರೆ.

Advertisement

ಸರ್ಕಾರಿ ಕಾರ್ಯಕ್ರಮಗಳಲ್ಲಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕುವ ಸಲುವಾಗಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು
ಹೂವಿನ ಹಾರ ಹೂಗುಚ್ಛ ಶಾಲು ಇನ್ನಿತರೆ ಕಾಣಿಕೆಗಳು ನೀಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಕೋವಿಡ್‌ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಹೂ ಬೆಳೆದ ಬೆಳೆಗಾರರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ದರ ಕುಸಿತದ ಕಾರಣಗಳಿಂದಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಲವು ಹೂ ಬೆಳೆಗಾರರು ತಮ್ಮ ತೋಟಗಳಲ್ಲಿ ಸಮೃದ್ಧವಾಗಿ ಬೆಳೆದಿದ್ದ ಬೆಳೆಗಳನ್ನು ಟ್ರ್ಯಾಕ್ಟರ್‌ ಮತ್ತು ಟಿಲ್ಲರ್‌ಗಳ ಮೂಲಕ ನಾಶಪಡಿಸಿದರೆ, ಇನ್ನೊಬ್ಬ ರೈತರು ತನ್ನ ಹೂವಿನ ತೋಟಕ್ಕೆ ಬೆಂಕಿಯಿಡುವ ಮೂಲಕ ಆಕ್ರೋಶ ವ್ಯಕ್ತಪಡಿ ಸಿದರು.

ಬೆಳೆಗಾರರ ಮೈಮೇಲೆ ಬರೆ:
ಸರ್ಕಾರಿ ಕಾರ್ಯ ಕ್ರಮಗಳಲ್ಲಿ ಭಾಗವಹಿಸುವ ಗಣ್ಯರಿಗೆ ಹೂಗುತ್ಛ ನೀಡಿ ಸ್ವಾಗತಿಸುವ ಸಂಪ್ರದಾಯವನ್ನುಅಧಿಕಾರಿಗಳು ಹಿಂದಿನಿಂದಲೂ
ರೂಢಿಸಿಕೊಂಡಿದ್ದಾರೆ. ಮತ್ತೂಂದೆಡೆ ವಿವಿಧ ರಾಜಕೀಯ ಪಕ್ಷಗಳ ನಾಯಕರ ಮನ ಗೆಲ್ಲಲು ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು
ತಮ್ಮ ನೆಚ್ಚಿನ ನಾಯಕರಿಗೆ ಹೂ ಮತ್ತು ಬೃಹತ್‌ ಗಾತ್ರದ ಹಣ್ಣಿನ ಹಾರ ಹಾಕಿ ಪ್ರಯತ್ನ ಮಾಡುತ್ತಾರೆ. ಆದರೆ, ಸರ್ಕಾರ ಜಾರಿಗೊಳಿಸಿರುವ ಈ
ಆದೇಶದಿಂದ ಅಧಿಕಾರಿಗಳು ದುಂದು ವೆಚ್ಚಗಳಿಗೆ ಕಡಿವಾಣ ಹಾಕಲು ಸಹಕಾರಿಯಾಗಿದೆ. ಮತ್ತೊಂದೆಡೆ ಪುಷ್ಪೋದ್ಯಮಕ್ಕೆ ನೆಚ್ಚಿಕೊಂಡು ಜೀವನ ನಡೆಸುತ್ತಿರುವ ಬೆಳೆಗಾರರು ಮತ್ತು ವ್ಯಾಪಾರಿಗಳಿಗೆ ಆದೇಶ ಗಾಯದ ಮೇಲೆ ಬರೆ ಎಳೆದಿದೆ.

ಇದನ್ನೂ ಓದಿ:ಕೋವಿಡ್:ಆಗಸ್ಟ್ 30ರವರೆಗೆ ಪಶ್ಚಿಮಬಂಗಾಳದಲ್ಲಿ ಲಾಕ್ ಡೌನ್ ವಿಸ್ತರಣೆ, ಕರ್ಫ್ಯೂ ಸಮಯ ಸಡಿಲಿಕೆ

Advertisement

ವಿವಿಧ ರಾಜ್ಯಗಳಲ್ಲದೆ, ವಿದೇಶಕ್ಕೂ ರಫ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು2 ಸಾವಿರ ಹೆಕ್ಟೇರ್‌ ವಿವಿಧ ಬಗೆಯ ಹೂವು ಬೆಳೆಯುತ್ತಾರೆ. ಚಿಕ್ಕಬಳ್ಳಾಪುರದಲ್ಲಿ ಶೇ.50 ಹೂವು ಬೆಳೆಯುತ್ತಾರೆ. ಇನ್ನೂಳಿದ ಶೇ.25 ಕನಕಾಂಬರ, ಟ್ಯೂಬ್‌ ರೋಸ್‌ ಗೌರಿಬಿದನೂರು ತಾಲೂಕಿನಲ್ಲಿ
ಬೆಳೆಯುತ್ತಾರೆ. ಶೇ.10-15 ಉಳಿದ ತಾಲೂಕುಗಳು ಹೂವುಗಳನ್ನು ಬೆಳೆಯುತ್ತಾರೆ.

ಸಾಮಾನ್ಯವಾಗಿ ರೋಸ್‌, ಚೆಂಡು ಹೂವು, ಸೇವಂತಿಗೆ,ಕನಕಾಂಬರ, ಸುಗಂದರಾಜ ಬೆಳೆಯುತ್ತಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಹೈದ್ರಾಬಾದ್‌ ಶೇ.65 ಹೂವು ರಫ್ತು ಆಗುತ್ತದೆ. ಉಳಿದದ್ದು ಬೆಂಗಳೂರು ಇನ್ನಿತರೆ ಪ್ರದೇಶಗಳಿಗೆ ಮಾರಾಟವಾಗುತ್ತದೆ. ವಿಶೇಷವಾಗಿ ಜಿಲ್ಲೆಯಲ್ಲಿ 250 ಪಾಲಿಹೌಸ್‌ ಗಳಲ್ಲಿ ಅಂದಾಜು 120 ಎಕರೆ ಪ್ರದೇಶದಲ್ಲಿ ಕಟ್‌ರೋಸ್‌,ಕಾನೇಷನ್‌, ಜರ್ಬೇರಾ ಹೂವುಗಳನ್ನು ವಿದೇಶಕ್ಕೆ, ದೆಹಲಿ,ಕೋಲ್ಕತಾಗೆ ರಫ್ತು ಮಾಡಲಾಗುತ್ತದೆ.

ರಾಜ್ಯ ಸರ್ಕಾರ ದುಂದು ವೆಚ್ಚಗಳಿಗೆ ಕಡಿವಾಣ ಹಾಕಲು ನಿರ್ಧರಿಸಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹೂ ಹಣ್ಣು ಮತ್ತು ಹಾರಗಳಿಗೆ ಕಡಿವಾಣ ಹಾಕಿರುವುದರಿಂದ ಪುಷ್ಪೋದ್ಯಮವನ್ನು ನೆಚ್ಚಿಕೊಂಡಿರುವ ಬೆಳೆಗಾರರಿಗೆ ತೊಂದರೆಯಾಗಲಿದೆ. ಸರ್ಕಾರಕೂಡಲೇ ನಿರ್ಧಾರವನ್ನು ರೈತರ ಹಿತದೃಷ್ಟಿಯಿಂದ ವಾಪಸ್‌ ಪಡೆಯಬೇಕು. ಪುಸ್ತಕ ವಿತರಣೆ ಮಾಡುವಯೋಜನೆಗೆ ತಾವು ಸ್ವಾಗತಿಸುತ್ತೇವೆ.
-ಭಕ್ತರಹಳ್ಳಿ ಬೈರೇಗೌಡ, ಪ್ರಧಾನ ಕಾರ್ಯದರ್ಶಿ, ರಾಜ್ಯ
ರೈತ ಸಂಘ ಹಾಗೂ ಹಸಿರುಸೇನೆ.

ಕೋವಿಡ್‌ ಸೋಂಕಿನ ಪ್ರಭಾವದಿಂದ ಈಗಾಗಲೇ ಹೂವು ಬೆಳೆಯುವ ಬೆಳೆಗಾರರು ಮತ್ತು ವ್ಯಾಪಾರಿಗಳು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಹೂ-ಹಣ್ಣು ಮತ್ತು ಹಾರಗಳಿಗೆ ಕಡಿವಾಣ ಹಾಕಿ ನಿಷೇಧಿಸಿರುವ ಆದೇಶದಿಂದ ಪುಷ್ಪೋದ್ಯಮಮಕ್ಕೆ ಪೆಟ್ಟು ಬೀಳುತ್ತದೆ. ಈಗಲೇಕಷ್ಟದಲ್ಲಿ ಇದ್ದೇವೆ, ಮತ್ತಷ್ಟು ಸಂಕಷ್ಟದಲ್ಲಿ ಸಿಲುಕುವಂತಹ ನಿರ್ಧಾರವನ್ನು ಮರು ಪರಿಶೀಲಿಸಬೇಕು. ಹೂವು ಬೆಳೆಗಾರರು ಮತ್ತು ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಬೇಕೆಂದು ಮನವಿ ಮಾಡುತ್ತೇವೆ.
-ಶಬ್ಬೀರ್‌, ಹೂವಿನ ವ್ಯಾಪಾರಿ.

-ಎಂ.ಎ.ತಮೀಮ್‌ ಪಾಷ

Advertisement

Udayavani is now on Telegram. Click here to join our channel and stay updated with the latest news.

Next