Advertisement

ವಿವಿಧ ಅಕಾಡೆಮಿ, ಪ್ರಾಧಿಕಾರಗಳಿಗೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕ

09:22 AM Oct 16, 2019 | Hari Prasad |

ಬೆಂಗಳೂರು: ರಾಜ್ಯದ ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಿ ರಾಜ್ಯ ಸರಕಾರ ಇಂದು ಆದೇಶ ಹೊರಡಿಸಿದೆ.

Advertisement

ಹದಿನಾರು ಅಕಾಡೆಮಿಗಳ ಅಧ್ಯಕ್ಷರ ಪಟ್ಟಿ ಈ ರೀತಿಯಾಗಿದೆ:

ಕನ್ನಡ ಅಭಿವೃದ್ಧಿ ಪ್ರಾಧಿಕಾರ: ಟಿ.ಎಸ್. ನಾಗಾಭರಣ
ಬ್ಯಾರಿ ಅಕಾಡೆಮಿ: ರಹೀಂ ಉಚ್ಚಿಲ
ಕನ್ನಡ ಸಾಹಿತ್ಯ ಅಕಾಡೆಮಿ: ಡಾ.ಬಿ.ವಿ ವಸಂತ್ ಕುಮಾರ್
ಕನ್ನಡ ಪುಸ್ತಕ ಪ್ರಾಧಿಕಾರ: ಡಾ. ಎಂ.ಎನ್. ನಂದೀಶ್ ಹಂಜೆ
ಕುವೆಂಪು ಭಾಷಾ ಭಾರತಿ: ಅಜರ್ಕಳ ಗಿರೀಶ್ ಭಟ್
ಕರ್ನಾಟಕ ನಾಟಕ ಅಕಾಡೆಮಿ: ಭೀಮಾಸೇನ
ಸಂಗೀತ, ನೃತ್ಯ ಅಕಾಡೆಮಿ: ಅನೂರು ಅನಂತಕೃಷ್ಣ ಶರ್ಮ
ಕರ್ನಾಟಕ ಶಿಲ್ಪಕಲಾ ಅಕಾಡೆಮಿ: ವೀರಣ್ಣ ಅರ್ಕಸಾಲಿ
ಕರ್ನಾಟಕ ಲಲಿತಾ ಕಲಾ ಅಕಾಡೆಮಿ: ಡಿ. ಮಹೇಂದ್ರ
ಕರ್ನಾಟಕ ಜಾನಪದ ಅಕಾಡೆಮಿ: ಮಂಜಮ್ಮ ಜೋಗತಿ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ: ದಯಾನಂದ ಕತ್ತಲ್ ಸಾರ್
ಕರ್ನಾಟಕ ಯಕ್ಷಗಾನ ಅಕಾಡೆಮಿ: ಪ್ರೊ. ಎಂ.ಎ ಹೆಗ್ಡೆ
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ: ಡಾ. ಪಾರ್ವತಿ ಅಪ್ಪಯ್ಯ
ಕೊಂಕಣಿ ಸಾಹಿತ್ಯ ಅಕಾಡೆಮಿ: ಡಾ. ಜಗದೀಶ್ ಪೈ
ಅರೆಭಾಷೆ ಸಾಹಿತ್ಯ ಸಂಸ್ಕೃತಿ ಅಕಾಡೆಮಿ: ಲಕ್ಷ್ಮೀ ನಾರಾಯಣ ಕಜೆಗದ್ದೆ

ಅರೆಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಸದಸ್ಯರಾಗಿ ಜಾನಕಿ ಬೈತಡ್ಕ, ಸ್ಮಿತಾ ಅಮೃತರಾಜ್,ಪ್ರೇಮಾ ರಾಘವಯ್ಯ,ಎ.ಪಿ. ಧನಂಜಯ, ಅನಂದ ದಂಬೆಕೋಡಿ,ಸೋಮಣ್ಣ ಸೂರ್ತಲೆ ನೇಮಕಗೊಂಡಿದ್ದಾರೆ.

ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಮೂಲತಃ ಸುಳ್ಯದವರಾದ ರಾಧಾಕೃಷ್ಣ ಕಲ್ಚಾರ್ ನೇಮಕಗೊಂಡಿದ್ದಾರೆ. ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಪುತ್ತೂರಿನ ಉಪನ್ಯಾಸಕ ರೋಹಿಣಾಕ್ಷ ಶಿರ್ಲಾರು, ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಸದಸ್ಯರಾಗಿ ಡಾ.ಮಾಧವ ಪೆರಾಜೆ ನೇಮಕಗೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next