ಸೋಮವಾರಪೇಟೆ: ಕಾವೇರಿ ನೀರನ್ನು ಕೊಡುವ ಕೊಡಗಿಗೆ ರಾಜ್ಯ ಸರಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದರು.
ರಾಜ್ಯ ಸರಕಾರದ ನಗರೋತ್ಥಾನ ಯೋಜನೆಯಲ್ಲಿ 1.98ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ಪಟ್ಟಣ ಪಂಚಾಯತ್ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗ ವಹಿಸಿ ಮಾತನಾಡಿದರು.
ಪ್ರವಾಸೋದ್ಯಮದಲ್ಲಿ ಜಿಲ್ಲೆಯನ್ನು ಉತ್ತುಂಗಕ್ಕೆ ಕೊಂಡೊಯ್ಯಲು ಜಿಲ್ಲೆಯಲ್ಲಿ ಹೆದ್ದಾರಿಯನ್ನು ಅಭಿವೃದ್ಧಿ ಪಡಿಸ ಲಾಗುವುದು. ಪ್ರತಿ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಹೇಳಿದರು. ರಾಜ್ಯ ಸರಕಾರ ಭೂಸ್ವಾಧೀನ ಪ್ರಕ್ರಿಯೆ ಮುಗಿಸಿಕೊಟ್ಟಲ್ಲಿ ಕುಶಾಲನಗರದವರೆಗೆ ರೈಲು ಯೋಜನೆಗೆ ಚಾಲನೆ ನೀಡಲಾಗುವುದು. ಚನ್ನರಾಯಪಟ್ಟಣದಿಂದ ಸೋಮ ವಾರಪೇಟೆ ಮಾರ್ಗವಾಗಿ ಮಡಿಕೇರಿವರೆಗೆ ಚತುಷ–ಥ ರಸ್ತೆ ಉನ್ನತೀಕರಣ ಮಾಡಲಾಗುವುದು. ದೀನ್‌ದಯಾಳ್ ಉಪಾಧ್ಯಾಯ ವಿದ್ಯುತ್ ಯೋಜನೆಯಡಿಯಲ್ಲಿ ಗ್ರಾಮೀಣ ಭಾಗಕ್ಕೆ ವಿದ್ಯುತ್ ಸಂಪರ್ಕ ರೂ.2.57ಕೋಟಿ, ಐಪಿಡಿಎಸ್ ಯೋಜನೆಯಡಿ ವಿದ್ಯುತ್‌ಕಂಬ, ಟ್ರಾನ್ಸ್‌ಫಾರ್ಮರ್‌ಗಳನ್ನು ರೂ.9ಕೋಟಿ 35ಸಾವಿರ ರೂ. ವೆಚ್ಚದ ಕಾಮಗಾರಿಗಳಿಗೆ ವಿನಿಯೋಗಿಸಲಾಗಿದೆ ಎಂದರು.
ಶಾಸಕ ಅಪ್ಪಚ್ಚುರಂಜನ್ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಬಿಜೆಪಿ ಸರಕಾರವಿದ್ದಾಗ, ಖಾಸಗಿ ಬಸ್ ನಿಲ್ದಾಣದ ಕಾಂಕ್ರೀಟ್ ಕಾಮ ಗಾರಿ ಸೇರಿದಂತೆ ವಿವಿಧ ಕಾಮಗಾರಿಗಳಿಗಾಗಿ ರೂ.20ಕೋಟಿ ವಿನಿಯೋಗಿಸಲಾಗಿದೆ. ರೂ.1.5ಕೋಟಿ ವೆಚ್ಚದಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಿಸಲಾಗಿದೆ. ರೂ.5ಕೋಟಿ ವೆಚ್ಚದಲ್ಲಿ ನೆಲಮಾಳಿಗೆಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗುವುದು. ಈ ಹಿಂದೆ ಪಟ್ಟಣ ಪಂಚಾಯತ್‌ಗಳಿಗೆ ವಾರ್ಷಿಕ ಅನುದಾನವಾಗಿ ರೂ. 5ಕೋಟಿ ನೀಡಲಾಗುತ್ತಿತ್ತು. ಆ ಮೂಲಕ ಜಿಲ್ಲೆಯ ಎಲ್ಲಾ ಪಟ್ಟಣ ಪಂಚಾಯತ್, ನಗರಸಭೆಗಳು ಅಭಿವೃದ್ಧಿಪಥದಲ್ಲಿ ಸಾಗುತ್ತಿದೆ. ಆದರೆ ಇದೀಗ ಅನುದಾನವನ್ನು ಕಡಿತಗೊಳಿಸಿ ರೂ.2ಕೋಟಿಗೆ ಮೀಸಲಿರಿಸಲಾಗಿದೆ ಎಂದರು. ಅತೀ ಹೆಚ್ಚು ಮಾಸಿಕ ಬಾಡಿಗೆಯನ್ನು ಪಡೆದುಕೊಳ್ಳುವ ಮೂಲಕ ಸೋಮವಾರಪೇಟೆ ಪ. ಪಂ. ಚಜಿಲ್ಲೆ ಯಲ್ಲಿ ಹೆಸರು ಪಡೆದುಕೊಂಡಿ ರುವುದನ್ನು ಶ್ಲಾಘಿಸಿದರು.
ತನ್ನ ಅಧಿಕಾರದ ಅವಧಿಯಲ್ಲಿ ಕಟ್ಟಡ ಉದ್ಘಾ ಟನೆ ಯಾಗುತ್ತಿರುವುದಕ್ಕೆ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷ್ಮಿà ಸುರೇಶ್‌ಹರ್ಷ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕಿ ಕೆ.ಪಿ.ಚಂದ್ರಕಲಾ ಮಾತನಾಡಿ, ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ಅತೀ ಶೀಘ್ರವಾಗಿ ಹಣ ಬಿಡುಗಡೆ ಮಾಡಿದ ಕಾರಣ ಭವ್ಯ ಕಟ್ಟಡ ನಿರ್ಮಾಣವಾಗಿದೆ. ಕಾಂಗ್ರೆಸ್ ಸರಕಾರ ಜಿಲ್ಲೆಗೆ ವಿಶೇಷ ಅನುದಾನ ನೀಡಿದರೂ ಜನರು ತನಗೆ ಮತ ನೀಡಲಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು. ವಿಧಾನಪರಿಷತ್ ಸದಸ್ಯ ಸುನೀಲ್ ಸುಬ್ರಹ್ಮಣಿ, ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ತಾಪಂ ಉಪಾಧ್ಯಕ್ಷ ಎಂ.ಬಿ.ಅಭಿಮನ್ಯು ಕುಮಾರ್, ಜಿಪಂ ಸದಸ್ಯೆ ಸರೋಜಮ್ಮ ಹಾಗೂ ಪ. ಪಂ ಸದಸ್ಯರು ಇದ್ದರು.
ಕೊಡಗಿಗೆ ರೈಲು ಬೇಕು
ಕೊಡಗಿನಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲು ಕೆಲವರು ಅಡ್ಡಗಾಲು ಹಾಕುತ್ತಿ ದ್ದಾರೆ.ಮುಂದುವರಿದ ರಾಷ್ಟ್ರ ಗಳಲ್ಲೂ ರೈಲು ಸಂಪರ್ಕಕ್ಕೆ ಅದ್ಯತೆ ನೀಡಲಾಗಿದೆ. ಪ್ರವಾಸೋದ್ಯ ಮದಲ್ಲಿ ಬೆಳೆಯಬೇಕಾದರೆ ರೈಲು ಸಂಪರ್ಕ ಬೇಕು. ಅದರಲ್ಲೂ ಕುಶಾಲನಗರದವರೆಗಾದರೂ ರೈಲು ಬೇಕೆ ಬೇಕು . ಸಂಸದರು ಈ ಬಗ್ಗೆ ಕಾಳಜಿ ವಹಿಸಬೇಕು ಎಂದು ಚಂದ್ರಕಲಾ ಹೇಳಿದರು.