ಬೆಂಗಳೂರು: ರಾಜ್ಯಕ್ಕೆ ಕೇಂದ್ರದಿಂದ ಬರುವ ಅನುದಾನ ಕಡಿಮೆಯಾಗುತ್ತಿದೆ. ವಿಶೇಷವಾಗಿ 15ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ಪ್ರತಿ ವರ್ಷ ರಾಜ್ಯಕ್ಕೆ 11 ಸಾವಿರ ಕೋಟಿ ರೂ. ಅನುದಾನ ಕಡಿತವಾಗಲಿದೆ. ಇಷ್ಟೊಂದು ಪ್ರಮಾಣದಲ್ಲಿ ಅನುದಾನ ಕಡಿತ ಮಾಡಿದರೆ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಚರ್ಚೆ ಯಲ್ಲಿ ಮಾತನಾಡಿ, ಐದು ವರ್ಷಗಳಲ್ಲಿ ಸುಮಾರು 50 ಸಾವಿರ ಕೋ. ರೂ. ಅನುದಾನ ಕಡಿತವಾಗಲಿದೆ. ಕೇಂದ್ರದ ಈ ನಿರ್ಧಾರವನ್ನು ಪಕ್ಷಭೇದ ಮರೆತು ವಿರೋಧಿಸಿ ರಾಜ್ಯದ ಪಾಲಿನ ಅನುದಾನ ಪಡೆಯಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ತೆರಿಗೆ ನೀಡುವ ಮೂರನೇ ದೊಡ್ಡ ರಾಜ್ಯ ಕರ್ನಾಟಕ. ರಾಜ್ಯ ದಿಂದ ಕೇಂದ್ರಕ್ಕೆ 1 ರೂ. ತೆರಿಗೆ ನೀಡಿದರೆ ಕೇಂದ್ರವು ರಾಜ್ಯಕ್ಕೆ ಕೇವಲ 42 ಪೈಸೆ ವಾಪಸ್ ನೀಡು ತ್ತದೆ. ಆದರೆ ಉತ್ತರ ಪ್ರದೇಶ, ಬಿಹಾರ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡುತ್ತದೆ. ಇದರಿಂದ ಕರ್ನಾಟಕದ ಅಭಿವೃದ್ಧಿಗೆ ಹೊಡೆತ ಬೀಳುತ್ತದೆ. ಕೇಂದ್ರ ಸರಕಾರವು ತರಾತುರಿಯಲ್ಲಿ ಜಿಎಸ್‌ಟಿ ಜಾರಿಗೊಳಿಸಿರುವುದು ಮತ್ತು ನಗದು ಅಪಮೌಲ್ಯಗೊಳಿಸಿರುವುದೇ ಇಂತಹ ತಾರತಮ್ಯಕ್ಕೆ ಕಾರಣ ಎಂದರು.
ಭಯದ ವಾತಾವರಣ ಸೃಷ್ಟಿಗೆ ಯತ್ನ
ಮಂಗಳೂರು ಪ್ರಕರಣವು ಕೋಮುಗಲಭೆ ಅಲ್ಲ; ಹಿಂಸಾತ್ಮಕ ಕೃತ್ಯಗಳ ಮೂಲಕ ಭಯದ ವಾತಾವರಣ ನಿರ್ಮಾಣ ಮಾಡುವ ಉದ್ದೇಶದ ಒಂದು ಭಾಗ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಪರಿಷತ್‌ನಲ್ಲಿ ಗುರು ವಾರ ಉತ್ತರಿಸಿ, ಸಿಎಎ ವಿರುದ್ಧ ಹೋರಾಟದ ನೆಪದಲ್ಲಿ ನಡೆದ ಮಂಗಳೂರು ಗಲಭೆ ಖಂಡಿತ ಕೋಮುಗಲಭೆ ಅಲ್ಲ. ಅದರಾಚೆಯ ಅಂದರೆ, ಹಿಂಸಾತ್ಮಕ ಕೃತ್ಯಗಳನ್ನು ಪ್ರಚೋದಿ ಸುವ ಮೂಲಕ ಭಯದ ವಾತಾವರಣ ನಿರ್ಮಿಸುವ ಚಟುವಟಿಕೆಗಳ ಭಾಗವಾಗಿತ್ತು ಎಂದಿದ್ದಾರೆ.