Advertisement

ಫೆ.2 ರಂದು ಲಿಂಗಾಯತ ಪಂಚಮಸಾಲಿ ಸಮಾಜದ ರಾಜ್ಯ ಕಾರ್ಯಕಾರಿಣಿ ಸಭೆ

03:58 PM Jan 31, 2022 | Team Udayavani |

ದಾವಣಗೆರೆ: ಪಂಚಮಸಾಲಿ ಮೀಸಲಾತಿ ವಿಳಂಬವಾಗುತ್ತಿರುವ ಮತ್ತು ಮುಂದಿನ ಹೋರಾಟದ ಬಗ್ಗೆ ಚರ್ಚಿಸುವ ಉದ್ದೇಶದಿಂದ ಫೆ. 2 ರಂದು ಬೆಳಗಾವಿಯ ಗಾಂಧಿ ಭವನದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ರಾಜ್ಯ ಕಾರ್ಯಕಾರಿಣಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲ ಸಂಗಮದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಅಂದು ಬೆಳಗ್ಗೆ 11 ಕ್ಕೆ ನಡೆಯುವ ಮಹತ್ವದ ಸಭೆಯಲ್ಲಿ ಶಾಸಕ ಬಸವನಗೌಡ ಯತ್ನಾಳ್, ವಿಜಯಾನಂದ ಕಾಶಪ್ಪನವರ್, ಸಿ.ಸಿ. ಪಾಟೀಲ್ ಇತರರು ಭಾಗವಹಿಸುವರು ಎಂದು ತಿಳಿಸಿದರು.

ಇದನ್ನೂ ಓದಿ:ಜಾಲಹಳ್ಳಿ ಗ್ರಾ.ಪಂ.ನ 31 ಸಿಬ್ಬಂದಿಗೆ ವೇತನ ಬಾಕಿ : ಕಳೆದ 23 ತಿಂಗಳಿಂದ ಬಂದಿಲ್ಲ ವೇತನ

ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ 2ಎ ಮೀಸಲಾತಿಗೆ ಒತ್ತಾಯಿಸಿ ಪಾದಯಾತ್ರೆ, ‌ಬಹಿರಂಗ ಸಭೆ, ಪ್ರತಿಜ್ಙಾ ಪಂಚಾಯತ್, ಶರಣು ಶರಣಾರ್ಥಿ ವಿವಿಧ ಹಂತದ ಹೋರಾಟ ನಡೆಸಲಾಗಿದೆ. ಯಾವ ಮುಖ್ಯಮಂತ್ರಿಯೂ ಸ್ಪಂದಿಸದೆ ಇರುವಷ್ಟು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಂದಿಸಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಮೀಸಲಾತಿ ಸಿಗುವ ವಿಶ್ವಾಸವೂ ಇದೆ. ಆದರೂ, ವಿಳಂಬವಾಗುತ್ತಿದೆ. ಹಾಗಾಗಿ ಕೋವಿಡ್ ನಡುವೆಯೂ ಮುಂದಿನ ಹಂತದ ಬಗ್ಗೆ ಹೋರಾಟ ರೂಪಿಸುವ ಉದ್ದೇಶದಿಂದ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next