ಕಲಬುರಗಿ: ಅಖಿಲ ಕರ್ನಾಟಕ ವಿಪ್ರ ಅಡುಗೆದಾರರು, ಅಡುಗೆ ಸಹಾಯಕರ ಕ್ಷೇಮಾಭಿವೃದ್ಧಿ ಸಂಘ, ಅನ್ನಪೂರ್ಣೇಶ್ವರಿ ಅಡುಗೆ ಮಾಡುವವರು ಮತ್ತು ಬಡಿಸುವವರ ಸಂಘದಿಂದ ಇದೇ ಫೆ. 26ರಿಂದ 27ರ ವರೆಗೆ ನಗರದ ಕೋಟಾರಿ ಭವನದಲ್ಲಿ ಅಖಿಲ ಕರ್ನಾಟಕ ವಿಪ್ರ ಅಡುಗೆದಾರರ ಸಮಾವೇಶ ಹಮ್ಮಿಕೊಳ್ಳಾಗಿದೆ ಎಂದು ಸಂಘದ ಅಧ್ಯಕ್ಷ ಗುರುರಾಜ ಕುಲಕರ್ಣಿ ಚಳ್ಳಾರಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ 5000ಕ್ಕೂ ಅಧಿಕ ವಿಪ್ರ ಅಡುಗೆದಾರರು ಭಾಗವಹಿಸಲಿದ್ದಾರೆ. ಅನ್ನಪೂರ್ಣೇಶ್ವರಿ ಸಂಘದ ಕಾರ್ಯಾಲಯದಿಂದ ಕೋಠಾರಿ ಭವನದವರೆಗೆ ಮಾತಾ ಅಣ್ಣಪೂರ್ಣೇಶ್ವರಿ ದೇವಿಯ ಭವ್ಯ ಮೆರವಣಿಗೆಗೆ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ ಅವರು ಚಾಲನೆ ನೀಡಲಿದ್ದಾರೆ ಎಂದರು.
ಜಿಲ್ಲಾಧ್ಯಕ್ಷ ಅನಿಲ ಅಷ್ಟಗಿ ಅವರಿಂದ ಧ್ವಜಾರೋಹಣ ನೆರವೇರಲಿದೆ. ಅಖಿಲ ಕರ್ನಾಟಕ ಬ್ರಾಹ್ಮಾಣ ಮಹಾಸಭಾ ಉಪಾಧ್ಯಕ್ಷ ರಂಗನಾಥ ದೇಸಾಯಿ ಉದ್ಘಾಟಕರಾಗಿ ಪಾಲ್ಗೊಳ್ಳಲಿದ್ದಾರೆ.ಎಚ್.ಕೆ ವೆಂಕಟೇಶ ಬಳ್ಳಾರಿ, ನಾರಾಯಣರಾವ್ ಕುಲಕರ್ಣಿ, ರಾಘವೇಂದ್ರ ನಾಗಣಸೂರ, ಸುಧಾಕರ ಪಾಟೀಲ್ ಯಂಕಂಚಿ, ಚಂದ್ರಕಾಂತ ಬಂಗರಗಿಕರ್, ಚಂದ್ರಕಾಂತ ಅಕ್ಷಂತಿ ಅನಿಲ ಅಷ್ಟಗಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಫೆ. 27ರಂದು ಬೆಳಗ್ಗೆ 7.30ಕ್ಕೆ ಅನ್ನಪೂರ್ಣೇಶ್ವರಿ ದೇವಿಗೆ ಕುಂಕುಮಾರ್ಚನೆ ನಂತರ ಸುಕ್ತ ಹೋಮ ನಡೆಯಲಿದೆ. ಇದಾದ ಬಳಿಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ ಎರಡನೇ ದಿನದಕಾರ್ಯಕ್ರಮಕ್ಕೆ ಉದ್ಘಾಟಕರಾಗಿಪಾಲ್ಗೊಳ್ಳಲಿದ್ದಾರೆ. ಗುರುರಾಜ ಚಳ್ಳಾರಿ ಅಧ್ಯಕ್ಷತೆ ವಹಿಸಲಿದ್ದು, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ, ಸಂಸದ ಉಮೇಶ ಜಾಧವ, ಶಾಸಕ ದತ್ತಾತ್ರೇಯ ಸಿ.ಪಾಟೀಲ್ ರೇವೂರ, ಬ್ರಾಹ್ಮಾಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದ ಮೂರ್ತಿ, ಮಾಜಿ ಎಂಎಲ್ಸಿ ಅಲ್ಲಮಪ್ರಭು ಪಾಟೀಲ್, ಶಾಸಕ ಬಸವರಾಜ ಮತ್ತಿಮೂಡ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಲ್ಯಾಣ ಜೋಶಿ, ಕಿಶನ್ರಾವ್ ಕುಲಕರ್ಣಿ,ಎಚ್.ಕೆ.ವೆಂಕಟೇಶ,ಅನಿಲ ಅಷ್ಟಗಿ, ಪವಣಕುಮಾರ ಕುಲಕರ್ಣಿ ಇತರರಿದ್ದರು.