Advertisement

ರಾಜ್ಯ ಕಾಂಗ್ರೆಸ್‌ ಸರ್ಕಾರ ದೇಶಕ್ಕೆ ಮಾದರಿ: ವಿಷ್ಣುನಾಥನ್‌

12:27 PM Jul 20, 2017 | Team Udayavani |

ಎನ್‌.ಆರ್‌.ಪುರ: ನಮ್ಮ ಕಾಂಗ್ರೆಸ್‌ ಸರ್ಕಾರ ದೇಶದಲ್ಲಿಯೇ ಮಾದರಿ ಸರ್ಕಾರವಾಗಿದೆ ಎಂದು ಕಾಂಗ್ರೆಸ್‌ ಪಕ್ಷದ ಮೈಸೂರು ವಿಭಾಗದ ವೀಕ್ಷಕ ವಿಷ್ಣುನಾಥನ್‌ ತಿಳಿಸಿದರು.

Advertisement

ಅವರು ಪಟ್ಟಣದ ಸಹರಾ ಕನ್ವೆನನ್‌ ಹಾಲ್‌ನಲ್ಲಿ ನಡೆದ ತಾಲೂಕು ಮಟ್ಟದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್‌ ಪಕ್ಷದ ಪರ ಜನರ ಒಲವಿದೆ. ಹಾಗಾಗಿ ಪಕ್ಷದ ಬಲವರ್ಧನೆಗೆ ಕಾರ್ಯಕರ್ತರು ಶ್ರಮಿಸಬೇಕು. ಪ್ರತಿ ತಿಂಗಳೂ ಕೂಡ ಬೂತ್‌ ಕಮಿಟಿಯ ಸಭೆ ನಡೆಸಬೇಕು. ಈ ಬಾರಿಯ ಚುನಾವಣೆ ಮಾಡು ಇಲ್ಲವೆ ಮಡಿ ಎಂಬಂತಾಗಿದೆ. ಹಾಗಾಗಿ ಎಲ್ಲರೂ ಕೂಡ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ ಎಂದರು.

ಅನ್ನಭಾಗ್ಯ, ವಿದ್ಯಾಸಿರಿ, ಕ್ಷೀರ ಭಾಗ್ಯ, ಶಾದಿ ಭಾಗ್ಯದಂತಹ ಜನಪರ ಕಾರ್ಯಕ್ರಮಗಳೊಂದಿಗೆ ರೈತರ ಸಂಕಷ್ಟ ಅರಿತು ಅವರ ಸಾಲವನ್ನು ಮನ್ನಾ ಮಾಡಿದೆ. ಅದೇ ಬಿಜೆಪಿ ಸರ್ಕಾರ ಈ ಹಿಂದೆ ಅಧಿಕಾರದಲ್ಲಿದ್ದಾಗ ರೈತರನ್ನು ಕೊಲ್ಲಿಸಿತ್ತು. ಅದನ್ನು ಜನ ಮರೆತಿಲ್ಲ. ನಮ್ಮ ಸರ್ಕಾರ ರೈತರ ಪರವಾಗಿದೆ ಎಂದು ಹೇಳಿದರು.

ಮನೆ ಮನೆಗೆ ತೆರಳಿ ಮೋದಿ ಸರ್ಕಾರಕ್ಕೂ ನಮ್ಮ ಸರ್ಕಾರಕ್ಕೂ ಇರುವ ವ್ಯತ್ಯಾಸವನ್ನು ಮನವರಿಕೆ ಮಾಡಿ. ನಮ್ಮ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮನವರಿಕೆ ಮಾಡಿಸಿ ಎಂದು ಕಾರ್ಯಕರ್ತರಿಗೆ ಸೂಚಿಸಿದರು.  ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾತನಾಡಿ, ಕೇಂದ್ರ ಸರ್ಕಾರದ ಪ್ರಚಾರದಿಂದಾಗಿ ಅಂಬಾನಿ ಅದಾನಿಯವರಿಗೆ ಒಳ್ಳೆಯದಾಗಿದೆಯೇ
ಹೊರತು ಜನಸಾಮಾನ್ಯರಿಗಾಗಿಲ್ಲ. ಅಚ್ಚೇದಿನ್‌ ಎಲ್ಲಿ ಬಂದಿದೆ. ಟಿವಿ ವಾಹಿನಿಗಳು ಅವರ ಹಿಡಿತದಲ್ಲಿವೆ. ಹಾಗಾಗಿಯೇ ಅವರ ಬಗ್ಗೆಯೇ ಪ್ರಚಾರ ಮಾಡುತ್ತಿವೆ. ನಮ್ಮ ಕಾಂಗ್ರೆಸ್‌ನಿಂದ ಎಲ್ಲೂ ಭ್ರಷ್ಟಾಚಾರವಾಗಿಲ್ಲ. ಯಾರೂ ಜೈಲಿಗೆ ಹೋಗಿಲ್ಲ. ನಾವೆಲ್ಲರೂ ಒಗ್ಗಾಟ್ಟಿದ್ದೇವೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿಯೇ ಚುನಾವಣೆಗೆ ಹೊರಟಿದ್ದೇವೆ ಎಂದರು.

ಸಂಸದೆ ಶೋಭಾ ಕರಂದ್ಲಾಜೆ ಅವರು 23 ಜನ ಹಿಂದೂಗಳು ಬಂಟ್ವಾಳ ಕೋಮು ಗಲಭೆಯಲ್ಲಿ ಸತ್ತಿದ್ದಾರೆ ಎಂದು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಆದರೆ ಆ ಪಟ್ಟಿಯಲ್ಲಿನ ಒಬ್ಬ ಬದುಕಿದ್ದಾನೆ. ಇನ್ನುಳಿದವರು ಬೇರೆ ಬೇರೆ ಕಾರಣಗಳಿಂದ ಸತ್ತಿದ್ದಾರೆ. ಇಂತಹ ಕೀಳು ಮಟ್ಟದ ರಾಜಕಾರಣವನ್ನು ಶೋಭಾ ಅವರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ನಿಮ್ಮ ಸಮಸ್ಯೆಗಳನ್ನು ಆಲಿಸುವ ಮನಸ್ಥಿತಿ
ಬಿಜೆಪಿಯವರಲ್ಲಿ ಇಲ್ಲ. ನಾವು ನಿಮ್ಮೆಲ್ಲರ ಸಮಸ್ಯೆಗೆ ಸ್ಪಂ ದಿಸುತ್ತೇವೆ. ಆ.14ರಂದು ಕೊಪ್ಪಕ್ಕೆ ಮತ್ತೆ ಆಗಮಿಸಿ ಸಭೆ ನಡೆಸುತ್ತೇನೆ. ಪ್ರತಿಯೊಂದು ನಾಯಕರಿಗೂ ಒಂದೊಂದು ಬೂತ್‌ನ್ನು ನೀಡಿ, ಅದರ ಉಸ್ತುವಾರಿಯನ್ನು ನಾಯಕರಿಗೆ ಬಿಡಿ. ಪಕ್ಷ
ಸಂಘಟನೆಯಾಗಬೇಕು. ನಮ್ಮೆಲ್ಲರ ಗುರಿ ಒಂದೇ ಆಗಿರಬೇಕು. ಅದು ಈ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸಿ ಉತ್ತಮ ಶಾಸಕನನ್ನು ನೀಡುವುದು ಎಂದು ಕಾರ್ಯಕರ್ತರಲ್ಲಿ ಹುರುಪು ತುಂಬಿದರು. ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ|ಡಿ. ಎಲ್‌.ವಿಜಯಕುಮಾರ್‌ ಮಾತನಾಡಿ, ಎಐಸಿಸಿ ನಿರ್ಣಯದಂತೆ ಚುನಾವಣೆಗೆ ನಾವು ತಯಾರಿ ಆಗಬೇಕಿದೆ ಎಂದರು.

Advertisement

ಜಿಪಂ ಮಾಜಿ ಅಧ್ಯಕ್ಷ ಟಿ.ಡಿ.ರಾಜೇಗೌಡ, ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಾ| ಕೆ.ಪಿ.ಅಂಶುಮಂತ್‌, ಕಾಂಗ್ರೆಸ್‌ ರಾಜ್ಯ ಕಿಸಾನ್‌ ಸೆಲ್‌ ಘಟಕದ ಅಧ್ಯಕ್ಷ ಸಚಿನ್‌ ಮೀಗಾ, ಕೆಪಿಸಿಸಿ ಕಾರ್ಯದರ್ಶಿ ಸವಿತಾ ರಮೇಶ್‌, ರಾಜೀವ್‌ ಗಾಂಧಿ  ಸಂಘಟನೆಯ ಸಂದೀಪ್‌, ಜಿ.ಪಂ. ಸದಸ್ಯ ಆರ್‌.ಸದಾಶಿವ, ಚಂದ್ರಮ್ಮ, ಎಂಎಡಿಬಿ ಮಾಜಿ ಅಧ್ಯಕ್ಷೆ ಬಿ.ಸಿ.ಗೀತಾ, ಬಗರ್‌ ಹುಕುಂ ಸಮಿತಿ ಸದಸ್ಯ ಬಿ.ಎಸ್‌.
ಸುಬ್ರಮಣ್ಯ, ಎಸ್‌.ಪಿ. ದಿನೇಶ್‌ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next