Advertisement
ಬೆಳಗಾವಿರಾಜ್ಯದಲ್ಲೇ ಅತೀ ದೊಡ್ಡ ಜಿಲ್ಲೆಯಾಗಿದ್ದು ಒಟ್ಟು 15 ತಾಲೂಕು ಹೊಂದಿದೆ. ಆಡಳಿತಾತ್ಮಕ, ಜನರ ಅನುಕೂಲ ದೃಷ್ಟಿಯಿಂದ ಚಿಕ್ಕೋಡಿ-ಗೋಕಾಕ ಜಿಲ್ಲೆ ರಚನೆ ಮಾಡಬೇಕೆಂಬ ಒತ್ತಾಯ ಬಲವಾಗಿದೆ.
ಕಾಡಾನೆಗಳ ಹಾವಳಿ ತಡೆಗೆ ಶಾಶ್ವತ ಪರಿಹಾರವಾಗಿ ಸಕಲೇಶಪುರ ತಾಲೂಕಿನಲ್ಲಿ ಆನೆ ಕಾರಿಡಾರ್ ನಿರ್ಮಾಣದ ನಿರೀಕ್ಷೆ. ಪ್ರವಾಸೋದ್ಯಮದ ಅಭಿವೃದ್ಧಿ ಹಾಗೂ ಮೂಲ ಸೌಕರ್ಯಗಳಿಗೆ ಅನುದಾನ ನಿರೀಕ್ಷೆ. ಕೆಶಿಪ್-4 ಯೋಜನೆಯಡಿ ಹಾಸನ-ತಿಪಟೂರು ನಡುವೆ 101 ಕಿ.ಮೀ., ಶ್ರೀರಂಗಪಟ್ಟಣ-ಚನ್ನರಾಯಪಟ್ಟಣ ನಡುವೆ 69ಕಿ.ಮೀ. ರಸ್ತೆ ಅಭಿವೃದ್ಧಿ ಘೋಷಣೆಯ ನಿರೀಕ್ಷೆ. ಅರಸೀಕೆರೆ ತಾಲೂಕು ನಾಗಪುರಿ ಅರಣ್ಯದಲ್ಲಿ ರಾಜ್ಯದ 2ನೇ ಕರಡಿಧಾಮ ನಿರ್ಮಾಣದ ಘೋಷಣೆ ನಿರೀಕ್ಷೆ.
Related Articles
ಜಿಲ್ಲಾ ಕೇಂದ್ರದಲ್ಲಿ ಸರ್ಕಾರಿ ವೈದ್ಯಕೀಯ-ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ. ಮಾವು-ಟೊಮೆಟೋ ಸಂಸ್ಕರಣಾ ಘಟಕ. ಕೆಸಿ ವ್ಯಾಲಿ ನೀರನ್ನು ಮೂರು ಬಾರಿ ಶುದ್ಧೀಕರಿಸಬೇಕು. ಘೋಷಣೆಯಾಗಿರುವ ಕೋಲಾರ ಜಿಲ್ಲಾ ರೈಲ್ವೆ ಯೋಜನೆಗಳಿಗೆ ಭೂಮಿ ನೀಡಬೇಕು.
Advertisement
ಕೆಜಿಎಫ್ ಚಿನ್ನದ ಗಣಿ ಪುನಾರಂಭ, ಕಾರ್ಮಿಕರಿಗೆ ಪರ್ಯಾಯ ಕೈಗಾರಿಕೆಗಳ ಸ್ಥಾಪನೆ. ವೇಮಗಲ್, ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು. ಹೈನೋದ್ಯಮವನ್ನು ಉತ್ತೇಜಿಸಿ ಹಾಲು ಖರೀದಿ ದರ ಹೆಚ್ಚಿಸಬೇಕು. ಜಿಲ್ಲೆಯಲ್ಲಿ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಬೇಕು. ಜಿಲ್ಲಾ ಕ್ರೀಡಾಂಗಣಕ್ಕೆ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸಬೇಕು.
ಚಿಕ್ಕಬಳ್ಳಾಪುರ ರೇಷ್ಮೆಗೆ ಖ್ಯಾತಿ ಹೊಂದಿರುವ ಜಿಲ್ಲೆಯಲ್ಲಿ ಟೆಕ್ಸ್‌ಟೈಲ್ಸ್ ಪಾರ್ಕ್ ನಿರ್ಮಾಣ, ಸ್ಯಾಟಲೈಟ್ ಸಿಟಿ ಘೋಷಣೆ. ಹಣ್ಣು ತರಕಾರಿಗೆ ಶೀಥಲ ಕೇಂದ್ರ ತೆರೆಯಬೇಕು. ಮಂಚೇನಹಳ್ಳಿ ಮತ್ತು ಚೇಳೂರು ನೂತನ ತಾಲೂಕು ಘೋಷಿಸಿದ್ದು ಅಭಿವೃದ್ಧಿ ನೆರವು. ಬೆಂಗಳೂರು ವಿವಿ ಜಮೀನು ಮಂಜೂರಾಗಿದ್ದು, ಕಾಮಗಾರಿ ಪ್ರಾರಂಭಿಸಬೇಕು.
ಜಿಲ್ಲೆಗೆ ಪ್ರತ್ಯೇಕವಾಗಿ ಡಿಸಿಸಿ ಬ್ಯಾಂಕ್ ಸ್ಥಾಪನೆ ಮಾಡಲು ವಿಶೇಷ ಆದ್ಯತೆ ನೀಡಬೇಕು. ಜಿಲ್ಲಾ ಕೇಂದ್ರದಲ್ಲಿ ರೈಲ್ವೆ ಜಂಕ್ಷನ್ ಮಾಡಿ ನೆರೆಯ ಆಂಧ್ರ ಮತ್ತು ತಮಿಳುನಾಡು ಸಹಿತ ಉತ್ತರ ಭಾರತಕ್ಕೆ ತರಕಾರಿ ಮತ್ತು ಹಣ್ಣು ರಫು¤ ಮಾಡಲು ಅವಕಾಶಕ್ಕೆ ನಿರೀಕ್ಷೆ ಮಾಡಲಾಗಿದೆ. ಬಳ್ಳಾರಿ
ಶತಮಾನದ ಹಿನ್ನೆಲೆಯುಳ್ಳ ಹಗರಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಪದವಿ ಕಾಲೇಜು ಸ್ಥಾಪಿಸಬೇಕೆಂಬ ಬೇಡಿಕೆ ದಶಕದಿಂದ ಕೇಳಿಬರುತ್ತಿದೆ. ಬಳ್ಳಾರಿ ತಾಲೂಕಿನ ಕುಡತಿನಿ ಗ್ರಾಮದ ಬಳಿ ಕೈಗಾರಿಕೆ ಸ್ಥಾಪಿಸುವುದಾಗಿ ಆರ್ಸೆಲ್ಲಾರ್ ಮಿತ್ತಲ್, ಉತ್ತಮ್ ಗಾಲ್ವಾ, ಎನ್‌ಎಂಡಿಸಿ ಕಂಪನಿಗಳು ಸಾವಿರಾರು ಎಕರೆಯನ್ನು ಖರೀದಿಸಿ ದಶಕ ಕಳೆದರೂ ಕೈಗಾರಿಕೆ ಸ್ಥಾಪನೆಯಾಗಿಲ್ಲ. ರಾಜ್ಯ ಸರ್ಕಾರ ಕೈಗಾರಿಕೆ ಸ್ಥಾಪಿಸಿ, ಸ್ಥಳೀಯರಿಗೆ ಉದ್ಯೋಗ ದೊರಕಿಸುವಲ್ಲಿ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರ ಹಂಪಿಯನ್ನು “ಐಕಾನಿಕ್’ ಪ್ರದೇಶವೆಂದು ಘೋಷಿಸಿದೆ. ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಸಿಂಥೆಟಿಕ್ ಟ್ರ್ಯಾಕ್, ಹೊಸ ಹೊಸ ವಾಹನಗಳ ವ್ಯವಸ್ಥೆ ಸೇರಿ ಹಲವು ಮೂಲಸೌಲಭ್ಯ ಕಲ್ಪಿಸಬೇಕಿದೆ. ದಾವಣಗೆರೆ
ದಾವಣಗೆರೆಯಲ್ಲಿ ಪಿಪಿಪಿ ಮಾದರಿ ಸರ್ಕಾರಿ ವೈದ್ಯಕೀಯ ಕಾಲೇಜು ಘೋಷಣೆಯಾಗಿದೆ. ಆದರೆ ಪೂರ್ಣ ಪ್ರಮಾಣದ ಸರ್ಕಾರಿ ವೈದ್ಯಕೀಯ ಕಾಲೇಜು ಜನರ ನಿರೀಕ್ಷೆ. ಭದ್ರಾ ಅಚ್ಚುಕಟ್ಟು, ಮಳೆಯಾಶ್ರಿತ ಪ್ರದೇಶ ಹೊಂದಿರುವ ಜಿಲ್ಲೆಯಲ್ಲಿ ಕೃಷಿ ಕಾಲೇಜು ಪ್ರಾರಂಭದ ಬೇಡಿಕೆ ಇದೆ. ಈ ಬೇಡಿಕೆ ದಶಕಗಳಷ್ಟು ಹಳೆಯದ್ದು.
ಶಿವಮೊಗ್ಗ ಹಾಲು ಒಕ್ಕೂಟದಲ್ಲಿ ಪ್ರಮುಖ ಪಾತ್ರ ವಹಿಸಿರುವ ದಾವಣಗೆರೆ-ಚಿತ್ರದುರ್ಗ ಜಿಲ್ಲೆ ಒಳಗೊಂಡಂತೆ ಪ್ರತ್ಯೇಕ ಹಾಲು ಒಕ್ಕೂಟ(ದಾಮುಲ್) ಮಂಜೂರಾಗಿದೆ. ಆದರೆ ರಸ್ತೆ ಕಾರಣಕ್ಕೆ ಕಾರ್ಯಗತವಾಗಿಲ್ಲ. ಬಜೆಟ್‌ನಲ್ಲಿ ಕಾರ್ಯಾರಂಭದ ನಿರೀಕ್ಷೆಯಿದೆ. ಶಿವಮೊಗ್ಗ
ಶಿವಮೊಗ್ಗದ ನೂತನ ಆಯುಷ್ ವಿಶ್ವವಿದ್ಯಾನಿಲಯ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನದ ಅಗತ್ಯವಿದೆ. ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಸೂಪರ್ ಸ್ಪೆಶಾಲಿಟಿ ವಿಭಾಗಕ್ಕೆ 30 ಕೋಟಿ ರೂ. ವಿಶೇಷ ಅನುದಾನದ ಬೇಡಿಕೆ ಇದೆ. ಸಾಗರ ತಾಲೂಕಿನ ಇರುವಕ್ಕಿಯಲ್ಲಿ ನೂತನವಾಗಿ ಆರಂಭವಾಗಿರುವ ಕೃಷಿ ಮತ್ತು ತೋಟಗಾರಿಕೆ ವಿವಿ ಕ್ಯಾಂಪಸ್‌ನ ಮೂಲಸೌಲಭ್ಯ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ ನಿರೀಕ್ಷೆಯಿದೆ. ಶಿವಮೊಗ್ಗ- ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟ(ಶಿಮೂಲ್)ದಲ್ಲಿ ಹಾಲಿನ ಪುಡಿ ತಯಾರಿಕಾ ಘಟಕ ಪ್ರಾರಂಭಿಸಲು 50 ಕೋಟಿ ರೂ. ಅಗತ್ಯವಿದೆ. ಉಡುಪಿ
ಉಡುಪಿಗೆ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಅಗತ್ಯವಿದ್ದು, ಇದಕ್ಕಾಗಿ ಹಲವು ವರ್ಷಗಳಿಂದ ಬೇಡಿಕೆಯಿದೆ. ತೋಕೂರು – ಬೈಂದೂರು ರೈಲ್ವೆ ಹಳಿ ದ್ವಿಪಥಕ್ಕೆ ಹೆಚ್ಚುವರಿ ಅನುದಾನ ಬೇಡಿಕೆ. ಮಲ್ಪೆ ಬಂದರಿನಲ್ಲಿ ಹೂಳೆತ್ತುವ ಕಾಮಗಾರಿ ಕೈಗೆತ್ತುಕೊಳ್ಳಬೇಕು. ಬೈಂದೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಬೇಡಿಕೆ. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಶ್ಚೇತನ. ತುಮಕೂರು
ವಸಂತನರಸಾಪುರದ ಇಂಡಸ್ಟ್ರಿಯಲ್ ನೋಡ್ ಮತ್ತು ಉದ್ದೇಶಿತ ರಿಂಗ್ ರಸ್ತೆಯ ಮಧ್ಯದ ಪ್ರದೇಶಗಳೂ ಸೇರಿ ತ್ರಿವಳಿ ನಗರಗಳನ್ನು ಅಂ.ರಾ.ಮಟ್ಟದ ವಾಣಿಜ್ಯ ಹಬ್ ಮತ್ತು ಕೈಗಾರಿಕಾ ಹಬ್ ಅಗಿ ಪರಿವರ್ತಿಸಬೇಕು. ಜಿಲ್ಲೆಯಲ್ಲಿ ಕೋಕೊನಟ್ ಸ್ಪೆಷಲ್ ಎಕಾನಾಮಿಕಲ್ ಝೊàನ್ ಸ್ಥಾಪಿಸಬೇಕು. ಕ್ರೀಡಾ ಯೂನಿವರ್ಸಿಟಿ ಸ್ಥಾಪಿಸಬೇಕು. ಶಿರಾ ತಾಲೂಕಿನಲ್ಲಿ 811 ಎಕರೆ ಸರ್ಕಾರಿ ಜಮೀನು ಮೀಸಲಿರಿಸಿ ನನೆಗುದಿಗೆ ಬಿದ್ದಿರುವ ಕರ್ನಾಟಕ ಹೆರಿಟೇಜ್ ಹಬ್ ಸ್ಥಾಪಿಸಬೇಕು. ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಮಂಜೂರು ಮಾಡಬೇಕು. ಉಪವಿಭಾಗಗಳಾದ ತಿಪಟೂರು ಮತ್ತು ಮಧುಗಿರಿಯನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು. ಕೊಪ್ಪಳ
ವಿಶ್ವ ಪ್ರಸಿದ್ಧ ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸುತ್ತಿರುವ ಸರ್ಕಾರವು ಈ ಬಾರಿ ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿಡುವ ನಿರೀಕ್ಷೆಯಿದೆ. ಹನುಮಂತ ಅಂಜನಾದ್ರಿಯಲ್ಲಿಯೇ ಜನಿಸಿದ್ದನು ಎನ್ನುವ ಅ ಧಿಕೃತ ಘೋಷಣೆ ಸಾಧ್ಯತೆ ಇದೆ. ನವಲಿ ಡ್ಯಾಂ ಕಾರ್ಯ ಸಾಧ್ಯತೆಯ ಡಿಪಿಆರ್‌ನ ಕುರಿತಂತೆಯೂ ಚರ್ಚೆ, ಅನುದಾನ ಮೀಸಲಿಡುವ ನಿರೀಕ್ಷೆಯಿದೆ. ಇನ್ನು ಹೊಸ ವಿಮಾನ ಹಾಗೂ ಹೊಸ ವಿಶ್ವವಿದ್ಯಾಲಯ ಸ್ಥಾಪನೆಯ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪವಾಗುವ ಸಾಧ್ಯತೆ ಹೆಚ್ಚಿದೆ. ಬಾಗಲಕೋಟೆ
ಆಲಮಟ್ಟಿ ಜಲಾಶಯದ ಮಟ್ಟವನ್ನು 524.256 ಮೀಟರ್‌ಗೆ ಎತ್ತರಿಸಬೇಕು. ಆಗ ಇನ್ನೂ 22 ಹಳ್ಳಿಗಳು ಮುಳುಗಡೆಯಾಗಲಿದ್ದು, ಅವುಗಳೂ ಸ್ಥಳಾಂತರಗೊಳ್ಳಲಿವೆ. ಇದಕ್ಕಾಗಿ ಕೃಷ್ಣಾ ಭಾಗ್ಯ ಜಲ ನಿಮಗಕ್ಕೆ 3 ವರ್ಷಗಳ ಕಾಲ ಪ್ರತಿವರ್ಷವೂ 35 ಸಾವಿರ ಕೋಟಿ ಅನುದಾನ ಕೊಡಬೇಕು ಎಂಬುದು ಬಹು ಒತ್ತಾಯದ ಬೇಡಿಕೆ.
ಬಾಗಲಕೋಟೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಘೋಷಣೆಯಾಗಿ ಏಳು ವರ್ಷ ಕಳೆದರೂ ಅನುಷ್ಠಾನಕ್ಕೆ ಬಂದಿಲ್ಲ. ಈ ಬಜೆಟ್‌ನಲ್ಲಿ ಅನುದಾನ ದೊರೆಯುವ ನಿರೀಕ್ಷೆ ಇದೆ. ಐಹೊಳೆ ಸ್ಥಳಾಂತರಕ್ಕೆ ಸರ್ಕಾರ ಈಗಲೇ ಅನುದಾನ ಕೊಡಬೇಕು ಎಂಬುದು ಬಹುದಿನಗಳ ಬೇಡಿಕೆ ಕೂಡ. ಚಿತ್ರದುರ್ಗ
ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗಕ್ಕೆ ಈವರೆಗಿನ ಯಾವ ಸರ್ಕಾರಗಳೂ ಅನುದಾನ ನೀಡಿಲ್ಲ. ಈ ಯೋಜನೆ ಅನುಷ್ಠಾನಗೊಂಡಲ್ಲಿ ಮೂರು ಜಿಲ್ಲೆಗಳಿಗೆ ಅನುಕೂಲ. ಭದ್ರಾ ಮೇಲ್ದಂಡೆ ಯೋಜನೆ ಸದ್ಯ ರಾಷ್ಟ್ರೀಯ ಯೋಜನೆಯಾಗುವ ಹಂತದಲ್ಲಿದ್ದು, ಕೇಂದ್ರ ಸರ್ಕಾರದಿಂದ ಅನುದಾನ ಹರಿದು ಬರಲಿದೆ. ಇದಕ್ಕೆ ರಾಜ್ಯ ಸರ್ಕಾರ ಶೇ. 40 ಅನುದಾನ ಭರಿಸಬೇಕು. ಈ ಬಜೆಟ್‌ನಲ್ಲಿ ದೊಡ್ಡ ಮಟ್ಟದ ಅನುದಾನ ಮೀಸಲಿಡಲಿ ಎನ್ನುವುದು ಜನರ ಬೇಡಿಕೆ. ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ಉದ್ಯೋಗ ನೀಡುವ ಕೈಗಾರಿಕೆಗಳಿಲ್ಲ. ಈ ಬಗ್ಗೆ ಡಾ| ಶಿವಮೂರ್ತಿ ಮುರುಘಾ ಶರಣರ ಒತ್ತಾಯಕ್ಕೆ ಮಣಿದ ಸಿಎಂ ಬೊಮ್ಮಾಯಿ, ಕೈಗಾರಿಕಾ ಹಬ್ ಮಾಡುವ ಭರವಸೆ ನೀಡಿ ಸಾವಿರ ಎಕರೆ ಜಾಗ ಹುಡುಕಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರು. ಈಗ ಬಜೆಟ್‌ನಲ್ಲಿ ಅನುದಾನ, ಜಾಗ ಎಲ್ಲವನ್ನೂ ಅಂತಿಮಗೊಳಿಸಬೇಕಿದೆ. ಚಿಕ್ಕಮಗಳೂರು
ಕಾಫಿ ಬೆಳೆಗಾರರ 10 ಎಚ್.ಪಿ. ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಘೋಷಣೆ, ಒತ್ತುವರಿ ಜಮೀನು ಗುತ್ತಿಗೆ ಆಧಾರದ ಮೇಲೆ ನೀಡಲು ಬಜೆಟ್‌ನಲ್ಲಿ ಪ್ರಸ್ತಾಪಿಸುವಂತೆ ಒತ್ತಾಯ, ಬೆಳೆಗಾರರಿಗೆ ಅನುದಾನದ ನಿರೀಕ್ಷೆ.
ಜಿಲ್ಲೆಯಲ್ಲಿ ಸ್ಪೈಸ್ ಪಾರ್ಕ್ ನಿರ್ಮಾಣ, ಪ್ರತ್ಯೇಕ ಹಾಲು ಒಕ್ಕೂಟ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮಂಜೂರು, ವಸತಿ ನಿವೇಶನ ಸಮಸ್ಯೆಗೆ ಅನುದಾನ, ಕಾಫಿತೋಟಗಳಿಗೆ ಕಾಡಾನೆ ಹಾವಳಿ ಮತ್ತು ಕಾಡುಪ್ರಾಣಿ ಹಾವಳಿ ತಡೆಗಟ್ಟಲು ವಿಶೇಷ ಯೋಜನೆ. ಬೆಳೆಗಾರರ ಸಾಲದ ಮೇಲಿನ ಬಡ್ಡಿ ಮನ್ನಾ, ಜಿಲ್ಲೆಗೆ ತೋಟಗಾರಿಕೆ ವಿಶ್ವವಿದ್ಯಾಲಯ ಘೋಷಣೆ ಈ ಸಾಲಿನ ಬಜೆಟ್‌ನಲ್ಲಿ ಜನರ ನಿರೀಕ್ಷೆಗಳಾಗಿವೆ. ರಾಯಚೂರು
ಜಿಲ್ಲೆಯಲ್ಲಿ ಜವಳಿ ಪಾರ್ಕ್ ಸ್ಥಾಪನೆ ವಿಚಾರ ಹೆಚ್ಚು ಪ್ರಸ್ತುತವಾಗಿದ್ದು, ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕಿದೆ. ತುಂಗಭದ್ರಾ ಜಲಾಶಯಕ್ಕೆ ಸಮಾನಾಂತರ ಜಲಾಶಯ ನಿರ್ಮಾಣ ವಿಚಾರ ಬರೀ ಡಿಪಿಆರ್ ಹಂತದಲ್ಲೇ ಉಳಿಯುತ್ತಿದ್ದು, ಈ ಬಾರಿಯಾದರೂ ಅನುದಾನ ಒದಗಿಸುವ ಮೂಲಕ ಯೋಜನೆಗೆ ಚಾಲನೆ ನೀಡಬೇಕಿದೆ. ರಾಯಚೂರು-ಯಾದಗಿರಿ ಒಳಗೊಂಡು ರಾಯಚೂರು ವಿವಿ ಸ್ಥಾಪನೆಯಾಗಿ ವರ್ಷ ಕಳೆಯುತ್ತಿದ್ದು, ಅಗತ್ಯ ಅನುದಾನ ಒದಗಿಸಿ ಶೈಕ್ಷಣಿಕ ಚಟುವಟಿಕೆ ಸುಗಮವಾಗಿಸಬೇಕಿದೆ. ಕಲಬುರಗಿ
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮಲ್ಲಾಬಾದ್, ಕಾಗಿಣಾ ಏತ ನೀರಾವರಿ ಸೇರಿ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಸೂಕ್ತ ಅನುದಾನ ನಿರೀಕ್ಷೆ. ಕಲಬುರಗಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕೌಶಲ ವಿವಿ ಸ್ಥಾಪನೆಗೆ ಹಸಿರು ನಿಶಾನೆ ಹಾಗೂ ಅನುದಾನ ಘೋಷಣೆ. ಜಿಲ್ಲೆಯ ಪ್ರವಾಸೋದ್ಯಮ ಉತ್ತೇಜನ ಹಾಗೂ ಗುಲ್ಬರ್ಗ ವಿವಿಯಲ್ಲಿ ತಲೆ ಎತ್ತಲಿರುವ ಕ್ರೀಡಾ ಸಂಕೀರ್ಣಕ್ಕೆ ಅನುದಾನ ನಿರೀಕ್ಷೆ. ಉತ್ತರ ಕನ್ನಡ
ಉತ್ತರ ಕನ್ನಡ ಜಿಲ್ಲೆಯ 2 ಪ್ರಮುಖ ಕುಡಿಯುವ ನೀರಿನ ಯೋಜನೆಗಳು ಘೋಷಣೆಯಾಗಬಹುದು ಎಂಬ ನಿರೀಕ್ಷೆ ಜನರದ್ದು. ಕಾಳಿ ನದಿಯ ಕದ್ರಾ ಅಣೆಕಟ್ಟಿನಿಂದ ಪೈಪ್ ಲೈನ್ ಮೂಲಕ ಕಾಳಿ ನದಿ ದಂಡೆಯ ಕಾರವಾರ ಹಾಗೂ ಕಾರವಾರ ತಾಲೂಕಿನ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಇದಾಗಿದೆ. ಅಲ್ಲದೆ ಅಘನಾಶಿನಿ ನದಿಯಿಂದ ಕುಮಟಾ ವಿಧಾನಸಭಾ ಕ್ಷೇತ್ರದ ಗೋಕರ್ಣ ಹಾಗೂ ಕೆಲವು ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಗಳು ಬಜೆಟ್‌ನಲ್ಲಿ ಘೋಷಣೆಯಾಗುವ ನಿರೀಕ್ಷೆ ಇದೆ. ಪ್ರವಾಸಿ ತಾಣ ಯಾಣಕ್ಕೆ ರೋಪ್ ವೇ ರೂಪಿಸಲು ಪ್ರವಾಸೋದ್ಯಮ ಇಲಾಖೆಯಿಂದ ಪ್ರಸ್ತಾವನೆ ಕಳುಹಿಸಲಾಗಿದ್ದು ಬಜೆಟ್‌ನಲ್ಲಿ ಇದಕ್ಕೆ ಅನುದಾನ ನೀಡಬೇಕು ಎಂಬುದು ಜನರ ಒತ್ತಾಯ. ಮೈಸೂರು
ಜಿಲ್ಲೆಯ ಸರಗೂರು ಹಾಗೂ ಸಾಲಿಗ್ರಾಮ ಹೊಸ ತಾಲೂಕು ಕೇಂದ್ರಗಳಲ್ಲಿ ಮೂಲ ಸೌಲಭ್ಯಗಳ ಅಭಿವೃದ್ಧಿ ಆಗಬೇಕು. ಹೊಸ ತಾಲೂಕುಗಳ ಘೋಷಣೆಯಾದರೂ ಮೂಲ ಸೌಲಭ್ಯಗಳ ಅಭಿವೃದ್ಧಿಯಾಗಿಲ್ಲ.
ಮೈಸೂರು ಸುತ್ತಮುತ್ತ ಸ್ಥಳೀಯ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸಿ ನಗರಸಭೆ ಹಾಗೂ ಪುರಸಭೆಗಳನ್ನಾಗಿ ಪರಿವರ್ತಿಸಲಾಗಿದೆ. ಇವುಗಳ ವ್ಯಾಪ್ತಿಯ ಪ್ರದೇಶಗಳಲ್ಲಿ ಅಭಿವೃದ್ಧಿ ಆಗಬೇಕು. ಮೈಸೂರು ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿ. ಚಾಮರಾಜನಗರ
ಜಿಲ್ಲೆಯಲ್ಲಿ 5 ತಾಲೂಕುಗಳಿದ್ದು, ಒಂದೇ (ಕೊಳ್ಳೇಗಾಲ) ಉಪ ವಿಭಾಗ ಇದೆ. ಕಾರ್ಯನಿರ್ವಹಣೆಗೆ ಅನುಕೂಲವಾಗಲು ಮತ್ತೂಂದು ಉಪವಿಭಾಗ ರಚನೆ ಮಾಡಬೇಕು. ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದು, ಪ್ರವಾಸಿ ತಾಣಗಳ ಅಭಿವೃದ್ಧಿ ಮತ್ತು ಪ್ರವಾಸಿಗರನ್ನು ಆಕರ್ಷಿಸುವ ಯೋಜನೆಗಳಿಗೆ ಅನುದಾನ ನೀಡಬೇಕು. ಚಾಮರಾಜನಗರದ ಡಾ.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರವನ್ನು ಪ್ರತ್ಯೇಕ ವಿಶ್ವ ವಿದ್ಯಾಲಯ ವನ್ನಾಗಿ ಪರಿವರ್ತಿಸಬೇಕು. ಜಿಲ್ಲೆಗೇ ಪ್ರತ್ಯೇಕ ವಿವಿ ನೀಡಬೇಕು. ವಿಜಯಪುರ
ಸಿದ್ದರಾಮಯ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದ ಮುದ್ದೇಬಿಹಾಳ ತಾಲೂಕಿನಲ್ಲಿ ಕೃಷಿ ಸಂಶೋಧನಾ ಕೇಂದ್ರ ಅನುಷ್ಠಾನವಾಗಲಿಲ್ಲ. ಕುಮಾರಸ್ವಾಮಿ ಮೈತ್ರಿ ಸರ್ಕಾರದಲ್ಲಿ ಬಜೆಟ್‌ನಲ್ಲಿ ಘೋಷಿಸಿದ್ದ ಆಲಮೇಲದಲ್ಲಿ ಸರ್ಕಾರಿ ತೋಟಗಾರಿಕೆ ಕಾಲೇಜು ಕೈತಪ್ಪಿದೆ. ಮೈತ್ರಿ ಸರ್ಕಾರದ ಬಜೆಟ್‌ನಲ್ಲಿ ಘೋಷಿಸಿದ್ದ 250 ಕೋಟಿ ರೂ. ವೆಚ್ಚದ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಚಾಲನೆ ಪಡೆದಿಲ್ಲ.ಯಡಿಯೂರಪ್ಪ ಸರ್ಕಾರ ಕಳೆದ ವರ್ಷ ಬಜೆಟ್‌ನಲ್ಲಿ ಘೋಷಿಸಿದ್ದ ದ್ರಾಕ್ಷಿ-ದ್ರಾಕ್ಷಿರಸ ಅಭಿವೃದ್ಧಿ ಮಂಡಳಿ ಸ್ಥಾಪಿಸುವ ಘೋಷಿತ ಭರವಸೆ ಈಡೇರಿಲ್ಲ. ಸ್ಥಗಿತಗೊಂಡಿರುವ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಅನುದಾನ ಬೇಕಿದೆ. ವೈನ್ ಪಾರ್ಕ್ ಸ್ಥಾಪನೆಗೆ ಸ್ಥಳ ನಿಗದಿ ಆಗಿದ್ದರೂ ಅನುಷ್ಠಾನಕ್ಕೆ ಬಂದಿಲ್ಲ. ಯಾದಗಿರಿ
ಜಿಲ್ಲೆಯಲ್ಲಿ ಅತಿಹೆಚ್ಚು ಹತ್ತಿ ಬೆಳೆಯುವ ರೈತರಿರುವುದರಿಂದ ಇಲ್ಲಿ ಟೆಕ್ಸ್‌ಟೈಲ್ ಪಾರ್ಕ್ ಅಗತ್ಯವಿದ್ದು, ಅದಕ್ಕೆ ಬೇಕಾದ 1000 ಎಕರೆ ಭೂಮಿ ಕಡೆಚೂರು-ಬಾಡಿಯಾಳ ಪ್ರದೇಶದಲ್ಲಿದೆ. ಯಾದಗಿರಿ ಜಿಲ್ಲೆಯಲ್ಲಿ 5571 ಶಿಕ್ಷಕರಲ್ಲಿ 3255 ಶಿಕ್ಷಕರಿದ್ದು, ಇನ್ನು 2316 ಶಿಕ್ಷಕ ಹುದ್ದೆಗಳು ಖಾಲಿ ಇದ್ದು, ಭರ್ತಿಗಾಗಿ ಕ್ರಮವಹಿಸಬೇಕಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ನೀರಾವರಿಗಾಗಿ ಗಡ್ಡೆಸೂಗೂರು, ಠಾಣಗುಂದಿ ಸೇರಿದಂತೆ ವಿವಿಧೆಡೆ ಬ್ರಿàಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಈ ಬಜೆಟ್‌ನಲ್ಲಿ ಸರ್ಕಾರ ಅನುಮತಿ ನೀಡಬಹುದು ಎನ್ನಲಾಗಿದೆ. ಹಾವೇರಿ
ಮುಂಚೂಣಿಯಲ್ಲಿದೆ ಪ್ರತ್ಯೇಕ ಸಹಕಾರಿ ಬ್ಯಾಂಕ್ ಆಗಬೇಕೆಂಬ ಕಳೆದೊಂದು ದಶಕದ ಬೇಡಿಕೆ. ಜಿಲ್ಲೆಯಲ್ಲಿಲ್ಲ ಹೇಳಿಕೊಳ್ಳುವಂತಹ ದೊಡ್ಡ ಕೈಗಾರಿಕೆ, ಆಗಬೇಕಿದೆ ಕೈಗಾರಿಕೆ ಹಬ್ ಸ್ಥಾಪನೆ. ನಿರ್ಮಾಣವಾಗಬೇಕಿದೆ ಬ್ಯಾಡಗಿಯಲ್ಲಿ ಸ್ಪೈಸ್ ಪಾರ್ಕ್ ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುದಾನ ನೀಡುವ ನಿರೀಕ್ಷೆ. ರಾಮನಗರ
ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿಯ ಮಗ್ಗುಲಲ್ಲೆ ಇದ್ದರೂ, ಮೂಲ ಸೌಕರ್ಯಗಳಿಂದ ಈ ಜಿಲ್ಲೆ ವಂಚಿತವಾಗಿದೆ. ಸಿಲ್ಕ್, ಮಿಲ್ಕ್, ಮಾವು ಬೆಳೆಗೆ ಪ್ರಸಿದ್ಧಿ ಇದ್ದರೂ ಈ ಕ್ಷೇತ್ರಗಳ ಅಭಿವೃದ್ಧಿಗೆ ಯಾವ ಸರ್ಕಾರವೂ ಪ್ರಾಮಾಣಿಕ ಪ್ರಯತ್ನ ಪಟ್ಟಿಲ್ಲ ಎಂಬ ಆರೋಪವಿದೆ. ರಾಮನಗರದಲ್ಲಿ ಈಗಲೂ ಮೈಸೂರು ಕಡೆಗೆ ಪ್ರಯಾಣಿಸಲು ಬಸ್ ನಿಲ್ದಾಣವಿಲ್ಲ. ಹೆದ್ದಾರಿ ರಸ್ತೆ ಬದಿಯಲ್ಲೇ ಬಿಸಿಲು, ಮಳೆ, ಧೂಳು, ಗಾಳಿಯಲ್ಲಿ ನಿಂತು ಬಸ್‌ಗಾಗಿ ಕಾಯುವ ಪರಿಸ್ಥಿತಿ ಇದೆ. ಐಜೂರು ವೃತ್ತದ ಬಳಿಯಲ್ಲೇ ಸುಸಜ್ಜಿತ, ಆಧುನಿಕ ಸವಲತ್ತುಗಳಿಂದ ಕೂಡಿದ ಬಸ್ ನಿಲ್ದಾಣ ನಿರ್ಮಿಸುವಂತೆ ಜಿಲ್ಲಾ ಕೇಂದ್ರದ ನಾಗರಿಕರು ಒತ್ತಾಯಿಸಿದ್ದಾರೆ. ಧಾರವಾಡ
ರಾಜ್ಯದ ಎರಡನೇ ದೊಡ್ಡ ನಗರ ಎಂದು ಗುರುತಿಸಿಕೊಂಡ ಹುಬ್ಬಳ್ಳಿ-ಧಾರವಾಡಕ್ಕೆ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ, ಜಿಲ್ಲೆಯಲ್ಲಿ ಸಣ್ಣ-ಮಧ್ಯಮ ಹಾಗೂ ಬೃಹತ್ ಕೈಗಾರಿಕೆ ಸ್ಥಾಪನೆಗೆ ಉತ್ತೇಜನ, ಜಿಲ್ಲೆಯಲ್ಲಿರುವ ಎಲ್ಲ ಹಳ್ಳಗಳ ನೀರಿನ ಸದ್ಬಳಕೆಗೆ ಯೋಜನೆ ರೂಪಿಸಿ ಅನುದಾನ ಮೀಸಲಿಡಬಹುದು ಎಂಬ ನಿರೀಕ್ಷೆ ಇದೆ. ಧಾರವಾಡದಲ್ಲಿರುವ ಸಾಹಿತ್ಯ, ಸಾಂಸ್ಕೃತಿಕ ಟ್ರಸ್ಟ್‌ಗೆ ಹೆಚ್ಚು ಅನುದಾನ, ಪುಣೆ ಮಾದರಿಯಲ್ಲಿ ಅಂತಾರಾಷ್ಟ್ರೀಯ ಸಂಗೀತೋತ್ಸವಕ್ಕೆ ಅನುದಾನ, ಬೆಂಗಳೂರು-ಮುಂಬೈ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿಗೆ ಒತ್ತು, ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಪೂರ್ವ ಬೈಪಾಸ್‌ಗೆ ಅನುದಾನ ಸಿಗಬಹುದು ಎಂಬ ನಿರೀಕ್ಷೆ ಇದೆ. ಮಂಡ್ಯ
ಮಂಡ್ಯ ನಗರದ ಸಮಗ್ರ ಅಭಿವೃದ್ಧಿಗೆ 660 ಕೋಟಿ ರೂ. ಬಿಡುಗಡೆಗೆ ಪ್ರಸ್ತಾವನೆ. ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಹಾಗೂ ಪಾಳು ಬಿದ್ದಿರುವ ಸರ್ ಎಂ ವಿಶ್ವೇಶ್ವರಯ್ಯ ಕಬ್ಬು ಸಂಶೋಧನೆ ಕೇಂದ್ರ ಪುನಶ್ಚೇತನಕ್ಕೆ 1 ಕೋಟಿ ರೂ. ಬಿಡುಗಡೆಗೆ ಪ್ರಸ್ತಾವನೆ. ಕಳೆದ ನಾಲ್ಕೈದು ವರ್ಷಗಳಿಂದ ಪುನಾರಂಭವಾಗದ ಮೈಷುಗರ್ ಕಾರ್ಖಾನೆ ಪುನಶ್ಚೇತನಕ್ಕೆ 257 ಕೋಟಿ ರೂ. ಪ್ರಸ್ತಾವನೆ. ದಕ್ಷಿಣ ಕನ್ನಡ
ದಕ್ಷಿಣ ಜಿಲ್ಲೆ ಗೆ ಐಟಿ ಪಾರ್ಕ್ ಸ್ಥಾಪನೆ. ಜಿಲ್ಲೆ ಯಲ್ಲಿ ಬೀಚ್, ಹೆಲ್ತ್ ಟೂರಿಸಂ, ಟೆಂಪಲ್ ಟೂರಿಸಂ ಸೇರಿದಂತೆ ಸಮಗ್ರ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಅನುದಾನದ ನಿರೀಕ್ಷೆ. ಜಿಲ್ಲೆಗೆ ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಆಕರ್ಷಣೆಗೆ ಉತ್ತೇಜನ. ಗದಗ
ಕಪ್ಪತ್ತಗುಡ್ಡದಲ್ಲಿ ಸರಕಾರಿ ಆಯುರ್ವೆàದ ಕಾಲೇಜು ಸ್ಥಾಪಿಸಬೇಕು. ಗದಗ ಸರಕಾರಿ ವೈದ್ಯಕೀಯ ಆಸ್ಪತ್ರೆಗೆ ಈ ಹಿಂದಿನ ಬಜೆಟ್‌ನಲ್ಲಿ ಘೋಷಣೆಯಾಗಿರುವ ಕ್ಯಾಥ ಲ್ಯಾಬ್ ಸ್ಥಾಪಿಸುವ ಜತೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿಸಿ ಮೇಲ್ದರ್ಜೆಗೇರಿಸಬೇಕು. ಜಿಲ್ಲೆಯ ಬೆಟಗೇರಿ, ಶಿಗ್ಲಿ ಹಾಗೂ ಗಜೇಂದ್ರಗಢದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ನೇಕಾರರ ಅನುಕೂಲಕ್ಕಾಗಿ ಬೆಟಗೇರಿಯಲ್ಲಿ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆ. ಜಿಲ್ಲೆಯ ಬಿಂಕದಕಟ್ಟಿ ಝೂ, ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನವನ್ನು ಒಳಗೊಂಡಂತೆ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಗೋವಾ-ಗದಗ- ಹಂಪಿ ಟೂರಿಸಂ ಕಾರಿಡಾರ್ ಘೋಷಿಸಬೇಕು. ಬೆಂಗಳೂರು ಗ್ರಾಮಾಂತರ
ಎಲ್ಲ ಜಿಲ್ಲೆಗಳಿಗೆ ಒಂದೊಂದು ಜಿಲ್ಲಾ ಕೇಂದ್ರದ ಹೆಸರಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ನಿರ್ದಿಷ್ಟ ಹೆಸರು ಇಲ್ಲದಿರುವು ದರಿಂದ ಜಿಲ್ಲಾ ಕೇಂದ್ರ ಘೋಷಣೆಯ ನಿರೀಕ್ಷೆ ಹೆಚ್ಚಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದರಿಂದ ಸಾಕಷ್ಟು ಅಭಿವೃದ್ಧಿಯಾಗಬೇಕಾಗಿದೆ. ಜಿಲ್ಲಾ ಆಸ್ಪತ್ರೆ, ಜಿಲ್ಲಾ ಕ್ರೀಡಾಂಗಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸ್ಥಳಾಂತರ, ಕೈಗಾರಿಕೆಗಳ ಸ್ಥಾಪನೆಯಾಗಬೇಕಿದೆ. ವಿಜಯಪುರ ಹೈಟೆಕ್ ಬಸ್ ನಿಲ್ದಾಣ, ದೇವನಹಳ್ಳಿ ತಾಲೂಕಿನ ಆವತಿ ರಣಬೈರೇಗೌಡರ ಆಳ್ವಿಕೆಯ ಸ್ಥಳಗಳು, ದೇವನಹಳ್ಳಿ ಕೋಟೆ ಸೇರಿದಂತೆ ವಿವಿಧ ಪ್ರದೇಶಗಳನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕಿದೆ.