Advertisement
ಕಳೆದ ಸಾಲಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಒಟ್ಟು 170 ಕೋಟಿ ರೂ. ನೀಡಲಾಗಿತ್ತು. ಈ ಬಾರಿ ಕ್ರೀಡಾಪಟುಗಳ ಹಿತ ಕಾಯುವ ದೃಷ್ಟಿಯಿಂದ ನಗದು ಹಣವನ್ನು ಮತ್ತಷ್ಟು ಹೆಚ್ಚಿಸಲಾಗಿದೆ.
Related Articles
Advertisement
ವ್ಯಾಯಾಮ ಶಾಲೆಗಾಗಿ 8 ಕೋಟಿ ರೂ.: 4 ಕ್ರೀಡಾ ವಿದ್ಯಾರ್ಥಿನಿಲಯಗಳಲ್ಲಿ ಅತ್ಯಾಧುನಿಕ ವ್ಯಾಯಾಮ ಶಾಲೆ ಸೌಲಭ್ಯ ಕಲ್ಪಿಸಲು 8 ಕೋಟಿ ರೂ. ಅನುದಾನವನ್ನು ನೀಡಲಾಗಿದೆ.
ಪ್ರಮುಖ ಇತರ ಹೊಸ ಘೋಷಣೆ: ಕ್ರೀಡಾಪಟುಗಳ ಸ್ವವಿವರಗಳನ್ನು ಸಂಪೂರ್ಣ ವಾಗಿ ಡಿಜಿಟಲೀಕರಣಕ್ಕಾಗಿ 1 ಕೋಟಿ ರೂ. ವೆಚ್ಚದಲ್ಲಿ ಐಟಿ ಕೋಶ ಸ್ಥಾಪನೆ, ತಾಲೂಕು ಕ್ರೀಡಾಂಗಣಗಳ ಮೂಲ ಸೌಕರ್ಯ ಹೆಚ್ಚಳಕ್ಕಾಗಿ ಒಟ್ಟು 20 ಕೋಟಿ ರೂ., ಪ್ರತಿ ವರ್ಷ 10 ಮಂದಿ ಕ್ರೀಡಾ ಪ್ರೋತ್ಸಾಹಕರಿಗೆ ‘ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ’, ಒಲಿಂಪಿಕ್ಸ್ ಸ್ವರ್ಣ ಪದಕ (5 ಕೋಟಿ ರೂ.), ಬೆಳ್ಳಿ (3 ಕೋಟಿ ರೂ.), ಕಂಚು ವಿಜೇತರಿಗೆ (2 ಕೋಟಿ ರೂ.) ಹೆಚ್ಚಳ. ಈ ವಿಷಯವನ್ನು ಈ ಹಿಂದೆಯೆ ಘೋಷಣೆ ಮಾಡಲಾಗಿತ್ತು, ಬಜೆಟ್‌ನಲ್ಲಿ ಅಧಿಕೃತವಾಗಿ ಘೋಷಿಸಲಾಗಿದೆ. ಜತೆಗೆ ರಾಜ್ಯ ಸರಕಾರಿ ಉದ್ಯೋಗಳಲ್ಲಿ ಗ್ರೂಪ್ “ಎ’ ಮತ್ತು ಏಶ್ಯನ್ ಕಾಮನೆಲ್ತ್ ಪದಕ ವಿಜೇತರಿಗೆ ಗ್ರೂಪ್ “ಬಿ’ ಹುದ್ದೆ ನೀಡುವುದಾಗಿ ಘೋಷಣೆಯಾಗಿದೆ. ಜತೆಗೆ ವಿಕಲಚೇತನ ಕ್ರೀಡಾಪಟುಗಳಿಗಾಗಿ ಕ್ರೀಡಾ ಕಿಟ್ ಒದಗಿಸಲು 2 ಕೋಟಿ ರೂ. ಮತ್ತು ವಿಕಲಚೇತನ ಸ್ನೇಹಿ ಕ್ರೀಡಾ ಸೌಕರ್ಯ ಒದಗಿಸಲು 2 ಕೋಟಿ ಸೇರಿದಂತೆ ಒಟ್ಟಾರೆ 4 ಕೋಟಿ ರೂ. ಒದಗಿಸಲಾಗಿದೆ.
ಮಾಜಿ ಕುಸ್ತಿಪಟುಗಳಿಗೆ ಮಾಸಾಶನ ಹೆಚ್ಚಳ ಮಾಜಿ, ರಾಜ್ಯ, ರಾಷ್ಟ್ರೀಯ, ಅಂತಾ ರಾಷ್ಟ್ರೀಯ ಕುಸ್ತಿ ಪಟುಗಳಿಗೆ ನೀಡುತ್ತಿರುವ ಮಾಸಾಶನವನ್ನು ಹೆಚ್ಚಿಸಲಾಗಿದೆ. 1500 ರೂ.ಗಳಿಂದ 2500 ರೂ., 2000 ರೂ.ಗಳಿಂದ 3000 ಸಾವಿರ ರೂ.ಗಳಿಗೆ ಹಾಗೂ 3000 ಸಾವಿರ ರೂ.ಗಳಿಂದ 4000 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ.