Advertisement

ಚುನಾವಣೆ ಸಿದ್ಧತೆಯಲ್ಲಿ ರಾಜ್ಯ ಬಿಜೆಪಿ ಹಿಂದೆ

12:30 AM Mar 06, 2019 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದರೂ ರಾಜ್ಯ ಬಿಜೆಪಿಯಲ್ಲಿ ಸಿದ್ದತಾ ಕಾರ್ಯಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯದಿರುವ ಬಗ್ಗೆ ಪಕ್ಷದಲ್ಲೇ ಅಪಸ್ವರವಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳು ಮಾತ್ರವಲ್ಲದೇ ಅನ್ಯ ಪಕ್ಷದ ಸರ್ಕಾರವಿರುವ ರಾಜ್ಯಗಳಲ್ಲಿನ ಬಿಜೆಪಿ ಸಿದ್ದತಾ ಕಾರ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಚುನಾವಣೆ ಸಿದಟಛಿತೆ ಸುಮಾರು ಒಂದೂವರೆ ತಿಂಗಳಿನಿಂದ ಎರಡು ತಿಂಗಳಷ್ಟು ಹಿಂದೆ ಉಳಿದಿದೆ. ಜತೆಗೆ ಲೋಕಸಭಾ ಕ್ಷೇತ್ರವಾರು ಹಾಗೂ ರಾಜ್ಯ ಮಟ್ಟದ ನಿರ್ವಹಣಾ ಸಮಿತಿಗಳ ರಚನೆ ಇನ್ನೂ ಅಂತಿಮವಾಗದ ಕಾರಣ ಯೋಜಿತ ರೀತಿಯಲ್ಲಿ ಸಂಘಟಿತವಾಗಿ ಚುನಾವಣಾ ಪೂರ್ವ ಸಿದಟಛಿತೆ ಕೈಗೊಳ್ಳುವ ಕಾರ್ಯದಲ್ಲಿ ತುಸು ಹಿನ್ನಡೆಯಾಗಿದೆ ಎಂಬ ಬಗ್ಗೆ ಪಕ್ಷದ ನಾಯಕರಲ್ಲೇ ಬೇಸರವಿದೆ ಎನ್ನಲಾಗಿದೆ.

Advertisement

ಚುನಾವಣೆಗೆ ಸಂಬಂಧಪಟ್ಟಂತೆ ಬಿಜೆಪಿಯು ದೇಶಾದ್ಯಂತ ಕೆಲ ತಿಂಗಳ ಹಿಂದೆಯೇ ಸಿದ್ದತಾ ಕಾರ್ಯ ಆರಂಭಿಸಿತ್ತು. ಆದರೆ ಬಿಜೆಪಿಯ ಪ್ರಮುಖ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕದಲ್ಲಿ ಈ ಬಾರಿಯ ಚುನಾವಣೆಗೆ ಸಿದಟಛಿತೆ ಆರಂಭದಿಂದಲೂ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದು ಪಕ್ಷದ ಹಲವು ನಾಯಕರಲ್ಲೇ ಅಸಮಾಧಾನಕ್ಕೆ ಕಾರಣವಾಗಿದೆ.

ಲೋಕಸಭಾ ಕ್ಷೇತ್ರವಾರು ಸಮಿತಿಗಳು ಇಲ್ಲ: ಲೋಕಸಭಾ ಕ್ಷೇತ್ರವಾರು ನಿರ್ವಹಣಾ ಸಮಿತಿಗಳು ಸಹ ಈವರೆಗೆ ರಚನೆಯಾಗಿಲ್ಲ. ಇದರಿಂದ ಕ್ಷೇತ್ರ ಮಟ್ಟದಲ್ಲಿ ಪಕ್ಷ ಸಂಘಟನೆ ಹಾಗೂ ಚುನಾವಣಾ ಪ್ರಕ್ರಿಯೆಗಳನ್ನು ಸುಗಮವಾಗಿ ನಡೆಸುವ ಕಾರ್ಯಕ್ಕೆ ಅಡ್ಡಿಯಾದಂತಿದೆ. 28 ಕ್ಷೇತ್ರಗಳ ಪೈಕಿ ಸುಮಾರು 12 ಕ್ಷೇತ್ರಗಳ ನಿರ್ವಹಣಾ ಸಮಿತಿಗಳ ವಿವರವಷ್ಟೇ ರಾಜ್ಯ ಬಿಜೆಪಿಗೆ ಸಲ್ಲಿಕೆಯಾಗಿವೆ. ಎಲ್ಲ ಕ್ಷೇತ್ರಗಳ ಸಮಿತಿ ವಿವರ ಸಲ್ಲಿಕೆಯಾಗುತ್ತಿದ್ದಂತೆ ರಾಜ್ಯಾಧ್ಯಕ್ಷರು ಪರಿಶೀಲಿಸಿ ಅಂತಿಮಗೊಳಿಸಲಿದ್ದಾರೆ.

ಮುಗಿಯದ ಗೊಂದಲ: ರಾಜ್ಯದ ಚುನಾವಣಾ ಪ್ರಭಾರಿ, ಸಹಪ್ರಭಾರಿಗಳ ನೇಮಕ ಈ ಹಿಂದೆಯೇ ಆಗಿದ್ದರೂ ಹಲವು ಬಾರಿ ಬದಲಾವಣೆಯಾಗಿ ಗೊಂದಲ ಮುಂದುವರಿದಿದೆ ಎಂದು ಬಿಜೆಪಿ ಮುಖಂಡರೊಬ್ಬರು ಬೇಸರ ವ್ಯಕ್ತಪಡಿಸಿದರು.

ರಚನೆಯಾಗದ ರಾಜ್ಯಮಟ್ಟದ ನಿರ್ವಹಣಾ ಸಮಿತಿ
ಚುನಾವಣೆಗೆ ಸಂಬಂಧಪಟ್ಟಂತೆ ರಾಜ್ಯ ಮಟ್ಟದ ನಿರ್ವಹಣಾ ಸಮಿತಿ ಈವರೆಗೆ ರಚನೆ ಯಾಗಿಲ್ಲ. ಇದರಿಂದ ರಾಜ್ಯಮಟ್ಟದಲ್ಲಿ ತಂಡೋಪಾದಿಯಲ್ಲಿ ಸಂಘಟಿತವಾಗಿ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದಕ್ಕೆ ತುಸು ಹಿನ್ನಡೆಯಾಗಿದೆ. ಈ ಹಿಂದೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚುನಾವಣಾ ಸಂಚಾಲಕರಾಗಿದ್ದ ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ರಾಜ್ಯ ಮಟ್ಟದ ನಿರ್ವಹಣಾ ಸಮಿತಿ ಸಂಚಾಲಕ ಸ್ಥಾನಕ್ಕೆ ಆಸಕ್ತಿ ತೋರಿದ್ದಾರೆ ಎನ್ನಲಾಗಿದ್ದು, ಇದಕ್ಕೆ ರಾಜ್ಯ ಬಿಜೆಪಿ ಹೇಗೆ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

Advertisement

ವಿಧಾನಸಭೆ ಚುನಾವಣೆಗೆ 5 ತಿಂಗಳ ಹಿಂದೆ ರಚನೆ
ಕಳೆದ ರಾಜ್ಯ ವಿಧಾನಸಭೆ ಚುನಾವಣೆಗೆ ನಿರ್ವಹಣಾ ಸಮಿತಿ ಸೇರಿ ಇತರೆ ಸಿದ್ಧತಾ ಕಾರ್ಯಗಳ ಬಗ್ಗೆ ಸಮಿತಿ
ಐದು ತಿಂಗಳ ಹಿಂದೆಯೇ ರಚನೆಯಾಗಿತ್ತು. ಆದರೆ ಲೋಕಸಭಾ ಚುನಾವಣೆಗೆ ಎರಡು ತಿಂಗಳಷ್ಟೇ ಬಾಕಿ ಇದ್ದರೂ
ಈವರೆಗೆ ಸಮಿತಿಗಳು ರಚನೆಯಾಗಿಲ್ಲ. ಈ ನಡುವೆ ಕೇಂದ್ರ ಬಿಜೆಪಿ ಸೂಚನೆಯಂತೆ ನಡೆದ ಕಮಲ ಜ್ಯೋತಿ ಸಂಕಲ್ಪ,
“ಮೇರಾ ಬೂತ್‌ ಸಬ್‌ಸೆ ಮಜಬೂತ್‌’, ಪ್ರಧಾನಿಯವರು ಕಾರ್ಯಕರ್ತರೊಂದಿಗೆ ವಿಡಿಯೋ ಸಂವಾದ, ಬಿಜೆಪಿ
ಕಾರ್ಯಕರ್ತರ ಮನೆಗಳ ಮೇಲೆ ಧ್ವಜ ಹಾರಿಸುವ ಕಾರ್ಯಕ್ರಮ, ಬೈಕ್‌ ರ್ಯಾಲಿ ಕಾರ್ಯಕ್ರಮಗಳಿಗೆ ಉಸ್ತುವಾರಿ
ಸಮಿತಿಗಳನ್ನಷ್ಟೇ ರಚಿಸಿ ನಡೆಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಅಮಿತ್‌ ಶಾ ಹಾಗೂ ರಾಮಲಾಲ್‌ ಅವರ ರಾಜ್ಯ ಭೇಟಿ ಬಳಿಕ ಸಿದಟಛಿತಾ ಕಾರ್ಯ ವೇಗ ಪಡೆದು ಕೊಂಡಿದೆ. ಸರ್ವ ರೀತಿಯಲ್ಲೂ ಸಿದ್ಧತಾ ಕಾರ್ಯಗಳನ್ನು ಆರಂಭಿಸಲಾಗಿದ್ದು, ಇನ್ನಷ್ಟು ಚುರುಕುಗೊಳ್ಳಲಿವೆ.
● ಸಿ.ಟಿ. ರವಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

ಎಂ. ಕೀರ್ತಿ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next