Advertisement
ಜಗತ್ತಿನಾದ್ಯಂತ ಏಪ್ರಿಲ್ 1 ಮೂರ್ಖರ ದಿನ. ಆದರೆ, ಆರು ಕೋಟಿ ಕನ್ನಡಿಗರಿಗೆ ಏಪ್ರಿಲ್ 01, 2017, 104 ವರ್ಷದಿಂದ ಅರ್ಥಿಕ ಜೀವನದ ಸಂಗಾತಿಯನ್ನು ಕಳೆದುಕೊಂಡು ಹಿಂದಿನದನ್ನು ಮೆಲುಕು ಹಾಕುವ ಮತ್ತು ಪರಿತಪಿಸುವ ದಿನ. ಒಂದು ಶತಮಾನ ಕಾಲ ತಮ್ಮ ಬ್ಯಾಂಕಿಂಗ್ ಅವಶ್ಯಕತೆಗಳ ಬೆನ್ನೆಲುಬಾಗಿದ್ದ, ಕನ್ನಡಿಗರ ಹೆಮ್ಮೆಯ, ಗರ್ವದ ಮತ್ತು ಕನ್ನಡಿಗರನ್ನು ಗುರುತಿಸುವ ಮೈಸೂರು ಬ್ಯಾಂಕ್ ಎಂದೇ ಮನೆ ಮಾತಾದ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಬ್ಯಾಂಕುಗಳ ದೊಡ್ಡಣ್ಣ ಸ್ಟೇಟ್ ಬ್ಯಾಂಕ್ ಆಫ ಇಂಡಿಯಾದೊಂದಿಗೆ ವಿಲೀನವಾಗುತ್ತಿದೆ. ಏಪ್ರಿಲ್ ಒಂದರಿಂದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಅಥವಾ ಮೈಸೂರು ಬ್ಯಾಂಕ್ ಎನ್ನುವ ಹೆಸರು ಇತಿಹಾಸದ ಗರ್ಭ ಸೇರುತ್ತದೆ. ಈ ಹೆಸರು ಇನ್ನು ಕೇವಲ ನೆನಪಷ್ಟೇ…
ಭವ್ಯ ಕಟ್ಟಡಗಳ ಮೇಲೆ ಕಂಗೊಳಿಸುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಫಲಕದ ಬದಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಫಲಕ ನೋಡಿ, ಬ್ಯಾಂಕಿಂಗ ವಲಯದಲ್ಲಿ ನಡೆದ ಈ ಬದಲಾವಣೆಯ ಹಿನ್ನೆಲೆ ತಿಳಿಯದ ಹಲವರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮೈಸೂರು ಬ್ಯಾಂಕ್ ಅನ್ನು ನುಂಗಿ ಹಾಕಿ ಬಿಡ್ತಾ ಅಂದು ಕೊಂಡರೆ ಆಶ್ಚರ್ಯವೇನಿಲ್ಲ. ಏಪ್ರಿಲ್ ಒಂದರಿಂದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಎನ್ನುವ ಹೆಸರು ಬ್ಯಾಂಕಿನ ನಾಮಫಲಕದಲ್ಲಿ, ಮುದ್ರಣ ಸಾಮಗ್ರಿಗಳಲ್ಲಿ, ರಬ್ಬರ್ ಮುದ್ರೆಗಳಲ್ಲಿ ಬ್ಯಾಂಕಿನ ಗಣಕಯಂತ್ರಗಳಲ್ಲಿ ಸೆಬಿ ಆಫೀಸುಗಳಲ್ಲಿ, ಕ್ಲಿಯರಿಂಗ್ ಆಫೀಸುಗಳಲ್ಲಿ ಬದಲಾಗಿ, ಅದರ ಸ್ಥಾನದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೆಸರು ಕಾಣಬರುತ್ತದೆ. ಸಿಬ್ಬಂದಿಗಳೆÇÉಾ ಆ ದಿನದಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಿಬ್ಬಂದಿಗಳಾಗುತ್ತಾರೆ. ಅವರಿಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವೇತನ ಸೌಲಭ್ಯಗಳು ದೊರಕುವ ಬಗೆಗೆ ನಿಖರವಾದ ಮಾಹಿತಿಗಳಿಲ್ಲ. ಆದರೆ, ಅವರು ಈಗ ಪಡೆದುಕೊಳ್ಳುವ ವೇತನ ಸೌಲಭ್ಯಗಳಿಗೆ ಚ್ಯುತಿಯ ಸಾಧ್ಯತೆ ಇರುವುದಿಲ್ಲ. ಹಾಗೆಯೇ ಸಿಬ್ಬಂದಿಗಳ ಜ್ಯೇಷ್ಠತೆ ಬಗೆಗೆ ಗೊಂದಲದ ಸಾಧ್ಯತೆಗಳು ಕಾಣುತ್ತಿವೆ.
Related Articles
Advertisement
ಜನರ ಬಾಯಲ್ಲಿ ಇಂದಿಗೂ ಮೈಬ್ಯಾಂಕ್ ಅಥವಾ ಮೈಸೂರು ಬ್ಯಾಂಕ್ ಎಂದೇ ಕರೆಸಿಕೊಳ್ಳುತ್ತಿರುವ ಕರ್ನಾಟಕದ ರಾಜ್ಯದ ಆರ್ಥಿಕ ಬೆಳವಣಿಗೆಯಲ್ಲಿ ಮಹತ್ತರವಾದ ಕೊಡುಗೆಯನ್ನು ನೀಡಿದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಏಪ್ರಿಲ್ 1, 2017ರಿಂದ ಇತಿಹಾಸ ಪುಟ ಸೇರಲಿದೆ. ಭಾರತದ ಬ್ಯಾಂಕುಗಳ ಪೈಕಿ ಹಿರಿಯಣ್ಣನೆಂದೇ ಬಿಂಬಿತವಾದ ಭಾರತೀಯ ಸ್ಟೇಟ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸೇರಿದಂತೆ ತನ್ನ ಐದು ಸಹವರ್ತಿ ಬ್ಯಾಂಕುಗಳನ್ನು ಅದರ ಜೊತೆಗೆ ಭಾರತೀಯ ಮಹಿಳಾ ಬ್ಯಾಂಕನ್ನು ತನ್ನೊಳಗೆ ಲೀನಗೊಳಿಸಿಕೊಳ್ಳಲಿದೆ. ಅಲ್ಲಿಗೆ ಪಂಚ ರಾಜ್ಯಗಳಲ್ಲಿ ಅಲ್ಲಿನ ಸಾಂಸ್ಕೃತಿಕ ಕಂಪಿನೊಂದಿಗೆ, ಜನರೊಂದಿಗೆ ಹಾಸುಹೊಕ್ಕಾಗಿದ್ದ, ಸ್ವಾತಂತ್ರ್ಯಪೂರ್ವದಲ್ಲಿಯೇ ಆಯಾ ರಾಜರುಗಳಿಂದ ಸ್ಥಾಪಿತವಾಗಿದ್ದ ಐದು ಸ್ಟೇಟ್ ಬ್ಯಾಂಕುಗಳು ತಮ್ಮ ಯುಗಾಂತ್ಯ ಕಾಣಲಿವೆ.
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು(ಎಸ್‌ಬಿಎಂ-1913), ಸ್ಟೇಟ್ ಬ್ಯಾಂಕ್ ಆಫ್ ಬಿಕಾನಿರ ಅಂಡ್ ಜೈಪುರ್, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ತ್ರವಾಂಕೂರ್, ಸ್ಟೇಟ್ ಬ್ಯಾಂಕ್ ಆಫ್ ಪಾಟಿಯಾಲ- ಇವೇ ಆ ಐದು ಎಸ್‌ಬಿಐನ ಸಹವರ್ತಿಬ್ಯಾಂಕುಗಳು.
ಮೈಸೂರು ಬ್ಯಾಂಕಿನ ಇತಿಹಾಸ
1913ರ ಅಕ್ಟೋಬರ್ 2ರಂದು ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಆಶ್ರಯದಲ್ಲಿ ಮೇದಾವಿ, ಮುತ್ಸದ್ಧಿ, ಉಜ್ವಲ ಭವಿಷ್ಯದ ಕನಸುಗಾರ ಸರ್ ಎಂ. ವಿಶ್ವೇಶ್ವರಯ್ಯನವರು ಅಧ್ಯಕ್ಷರಾಗಿದ್ದ ಬ್ಯಾಂಕಿಂಗ್ ಸಮಿತಿಯ ಶಿಫಾರಸ್ಸಿನ ಮೇಲೆ ದಿ ಬ್ಯಾಂಕ್ ಆಫ್ ಮೈಸೂರು ಲಿ ಎಂಬ ಹೆಸರಿನಲ್ಲಿ ಈ ಬ್ಯಾಂಕ್ ಸ್ಥಾಪಿತವಾಯಿತು. ಈಗ ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿರುವ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಭವ್ಯವಾಗಿ ತಲೆಯೆತ್ತಿ ನಿಂತಿರುವ ಈಗಿನ ಕೇಂದ್ರಕಚೇರಿಯ ಆವರಣದಲ್ಲಿಯೇ, ಅವಿನ್ಯೂ ರಸ್ತೆಗೆ ತಾಗಿ ನಿಂತಿರುವ ಬೆಂಗಳೂರು ಶಾಖೆಯ ಪಕ್ಕ ಇದರ ಪ್ರಧಾನ ಕಚೇರಿ ಇತ್ತು. ಇವೆಲ್ಲವೂ ಅಂದಿನ ಮೈಸೂರು ಮಹಾರಾಜರ ಕೊಡುಗೆ. 1960ರಲ್ಲಿ ಬ್ಯಾಂಕು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧೀನ ಬ್ಯಾಂಕಾಯಿತು. 1975 ರಿಂದ ಭಾರತೀಯ ಸ್ಟೇಟ್ ಬ್ಯಾಂಕಿನ ಸಹವರ್ತಿ ಬ್ಯಾಂಕಾಗಿ ಮುಂದುವರೆಯುತ್ತಾ ಬಂದಿದೆ. ಎಸ್‌ಬಿಐ ಮೈಸೂರು ಬ್ಯಾಂಕಿನ ಶೇ.92.33 ಷೇರುಗಳನ್ನು ಹೊಂದಿದ್ದು ಉಳಿದ ಷೇರುಗಳು ಖಾಸಗಿ ಷೇರುದಾರರು ಹಾಗೂ ಇತರೆ ಸಂಘಸಂಸ್ಥೆಗಳು ಹೊಂದಿವೆ. ಈ ಬ್ಯಾಂಕಿನ ಹೆಗ್ಗಳಿಕೆಯೆಂದರೆ ಇದು ಸ್ಥಾಪನೆಯಾದ 103 ವರ್ಷಗಳಲ್ಲಿ ಸತತವಾಗಿ ಲಾಭಗಳಿಸುತ್ತಾ ಷೇರುದಾರರಿಗೆ ಲಾಭಾಂಶವನ್ನು ನೀಡುತ್ತಾ ಬಂದಿದೆ. ಇಷ್ಟು ವರ್ಷಗಳ ಕಾಲ ಲಾಭಾಂಶ ನೀಡುತ್ತಿರುವುದು ಬ್ಯಾಂಕ್ ಹೆಗ್ಗಳಿಕೆ.
ಈಗ ಮೈಸೂರು ಬ್ಯಾಂಕಿನ 1056 ಶಾಖೆಗಳು ದೇಶಾದ್ಯಂತ ಕಾರ್ಯನಿರ್ವಸುತ್ತಿದ್ದು ಹೆಚ್ಚಿನ ಶಾಖೆಗಳು ನಮ್ಮ ರಾಜ್ಯದಲ್ಲಿಯೇ ಇವೆ. ಈ ಬ್ಯಾಂಕಿನಲ್ಲಿ ಇರುವ ಒಟ್ಟು ಉದ್ಯೋಗಿಗಳ ಸಂಖ್ಯೆ 10,510. ಅದೇನೋ ನಮ್ಮ ರಾಜ್ಯದ ಜನರಿಗೆ ಮೈಸೂರು ಬ್ಯಾಂಕೆಂದರೆ ಮಹಾ ಪ್ರೀತಿ. ಇವತ್ತಿಗೂ ಮೈಸೂರು ಬ್ಯಾಂಕಿನ ಎಲ್ಲಾ ಶಾಖೆಗಳಲ್ಲೂ ಕುಟುಂಬದ ವಾತಾವರಣ. ಈವರೆಗೆ ಅಲ್ಲಿ ದೊರೆಕುತ್ತಿದ್ದದ್ದು ಅಚ್ಚ ಕನ್ನಡದ ಗ್ರಾಹಕ ಸೇವೆ. ಇನ್ನು ಮುಂದೆ ಅದು ಮರೀಚಿಕೆಯೇ? ಕಾದು ನೋಡಬೇಕು. ರಾಜ್ಯ ಸರ್ಕಾರದ ಟ್ರಜರಿ ಸೇವೆಯನ್ನು ನಿರ್ವಹಿಸುತ್ತಿರುವ ಈ ಬ್ಯಾಂಕಿನ ಗ್ರಾಹಕರಲ್ಲಿ ರೈತರು ಹಾಗೂ ಸರ್ಕಾರಿ ನೌಕರರು ಹೆಚ್ಚಿನ ಖಾತೆ ಹೊಂದಿದ್ದಾರೆ. ಜನರ ದೃಷ್ಟಿಯಲ್ಲಿ ಇದೊಂದು ಸರ್ಕಾರಿ ಬ್ಯಾಂಕು. ಇಲ್ಲಿ ಠೇವಣಿ ಇಟ್ಟರೆ ತಮ್ಮ ಹಣ ಸುರಕ್ಷಿ$ತವೆಂಬ ಭಾವನೆ ಬೇರೂರಿದೆ.
ಇಂಡಿಯಾ ಜೊತೆ ಹೆಜ್ಜೆಇನ್ನು ಸ್ಟೇಟ್ ಬ್ಯಾಂಕ್ ಇಂಡಿಯಾ ಇತಿಹಾಸವೂ ರೋಚಕವಾಗಿದೆ. 1806ರಲ್ಲಿ ಸ್ಥಾಪಿತವಾದ ಬ್ಯಾಂಕ್ ಆಫ್ ಬೆಂಗಾಲ್, ಬ್ಯಾಂಕ್ ಆಫ್ ಬಾಂಬೆ, ಬ್ಯಾಂಕ್ ಆಫ್ ಮದ್ರಾಸ್ ಎಂಬ ಮೂರು ಪ್ರಸಿಡೆನ್ಸಿ ಬ್ಯಾಂಕುಗಳು ಪೆಪರ್ ಕರೆನ್ಸಿ ತಯಾರಿಸುತ್ತಿದ್ದವು. ಇದರ ಹಕ್ಕುಗಳನ್ನು ಆಗಿನ ಸರ್ಕಾರ ವಹಿಸಿಕೊಡಿದ್ದರಿಂದ ಈ ಮೂರು ಬ್ಯಾಂಕುಗಳು ಸೇರಿ 27 ಜನವರಿ 1921 ರಲ್ಲಿ ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾ ಎಂಬ ಹೊಸ ಬ್ಯಾಂಕು ಆರಂಭಿಸಿದರು. 1 ಜುಲೈ 1955ರಲ್ಲಿ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಬ್ಯಾಂಕನ್ನು ತನ್ನ ಸ್ವಾಮ್ಯಕ್ಕೆ ತೆಗೆದುಕೊಂಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಂದು ನಾಮಕರಣ ಮಾಡಿತು.2008 ರಲ್ಲಿ ಭಾರತ ಸರ್ಕಾರ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಸ್ವಾಮ್ಯತೆಯನ್ನು ಬಿಡಿಸಿ ತನ್ನ ಅಧೀನದಲ್ಲಿರಿಸಿಕೊಂಡಿದೆ. 1959 ರಿಂದ 1960 ರಲ್ಲಿ ಭಾರತ ಸರ್ಕಾರವು ಸ್ವಾತಂತ್ರ್ಯ ಪೂರ್ವದಲ್ಲಿ ರಾಜರ ಆಳ್ವಿ$Ìಕೆಯಲ್ಲಿದ್ದ ಏಳು ಬ್ಯಾಂಕುಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹವರ್ತಿ ಬ್ಯಾಂಕುಗಳನ್ನಾಗಿಸಿತು. ಏಕೆ ಈ ವಿಲೀನ?
2008 ರಲ್ಲಿ ಸಹವರ್ತಿ ಬ್ಯಾಂಕುಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಸೌರಾಷ್ಟ್ರವನ್ನು ವಿಲೀನ ಮಾಡಿಕೊಂಡ ಎಸ್‌ಬಿಐ 2010 ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂದೋರನ್ನು ವಿಲೀನಗೊಳಿಸಿಕೊಂಡಿತು. ತಾನು ಪ್ರಪಂಚದ ಭೂಪಟದಲ್ಲಿ ಐವತ್ತು ದೊಡ್ಡ ಬ್ಯಾಂಕುಗಳಲ್ಲಿ ಒಂದಾಗಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಇನ್ನುಳಿದ ಸಹವರ್ತಿ ಬ್ಯಾಂಕುಗಳನ್ನು ಲೀನಗೊಳಿಸಿಕೊಳ್ಳುತ್ತಿದೆ. ಆದರೆ ಆರ್ಥಿಕತಜ್ಞರ ಪ್ರಕಾರ ಎಸ್‌ಬಿಐ ಈ ನಿಲುವಿಗೆ ಕಾರಣ ದೊಡ್ಡದೊಡ್ಡ ಕಾರ್ಪೊàರೇಟ್‌ಗಳಿಗೆ ಸಾಲ ನೀಡಬೇಕಿದ್ದರೆ ಬ್ಯಾಂಕಿನ ಬಂಡವಾಳ ಸಾಕ್ಟರಬೇಕು. ಅದಿಲ್ಲದಿದ್ದರೆ ಮೂರ್‍ನಾಲ್ಕು ಬ್ಯಾಂಕುಗಳು ಸೇರಿ ಇಂತಹ ಕಾರ್ಪೊàರೇಟುಗಳಿಗೆ ಸಾಲ ಕೊಡಬೇಕು. ಅದಕ್ಕಾಗಿ ಈ ಎಲ್ಲಾ ಬ್ಯಾಂಕುಗಳನ್ನು ನುಂಗಿ ತನ್ನ ಅಸ್ತಿತ್ವವನ್ನು ಸ್ತರಿಸುತ್ತಿದೆ. ಅದಿಲ್ಲದಿದ್ದರೆ ನಷ್ಟದಲ್ಲಿರುವ ಬ್ಯಾಂಕುಗಳ ಬದಲಾಗಿ ಸದಾ ಲಾಭದಲ್ಲಿರುವ ಬ್ಯಾಂಕುಗಳನ್ನು ವಿಲೀನ ಗೊಳಿಸುವುದೇಕೆ? ಶ್ರೀಮತಿ ಇಂದಿರಾಗಾಂಧಿಯವರು ಮಾಡಿದ ಬ್ಯಾಂಕಿಂಗ್ ರಾಷ್ಟ್ರೀಕರಣದ ಆಶಯಗಳು ಹಿಂದೆಬಿದ್ದು ಕಾರ್ಪೊರೇಟೀಕರಣ ಮಾಡುತ್ತಿದ್ದಾರೆ ಎಂದು ಲೀನ ವಿರೋಧಿಸುತ್ತಿರುವ ನೌಕರ ಸಂಘಟನೆಗಳು ಮುಷ್ಕರಮಾಡಿ ತಮ್ಮ ವಿರೋಧವನ್ನು ದಾಖಲಿಸಿದ್ದಾರೆ. ಎಲ್ಲಾ ಸಹವರ್ತಿ ಬ್ಯಾಂಕುಗಳ ಕಾರ್ಯವೈಖರಿ, ಸಂಸ್ಕೃತಿ ಎಲ್ಲಾ ಒಂದೇ ತೆರನಾದದ್ದು. ಅಲ್ಲಿನ ನೌಕರರ ಸಂಬಳ ಸವಲತ್ತುಗಳು ಒಂದೇ ರೀತಿಯದ್ದು. ಆದರೆ ನೌಕರ ಸಂಘಟನೆಗಳ ಅಭಿಪ್ರಾಯದ ಪ್ರಕಾರ ಎಸ್‌ಬಿಐನದು ಬ್ರಿಟೀಷರು ಆರಂಭಿಸಿದ ಇಂಪೀರಿಯಲ್ ಬ್ಯಾಂಕು ಇದಾದ್ದರಿಂದ ಇದರ ಆಡಳಿತ ವರ್ಗದ ನಿಲವುಗಳು, ನಿಯಮಗಳು ಬ್ರಿಟಿಷರಂತೆ ಆಕ್ರಮಣಕಾರಿ, ಏಕಪಕ್ಷೀಯ ಹೇರಿಕೆಯ ನಿಲುವುಗಳು. ಪರಿಣಾಮ -ವಿಲೀನದಿಂದಾಗಿ ಶೇ47 ರಷ್ಟು ಆಡಳಿತಾತ್ಮಕ ಕಚೇರಿಗಳು, ಶಾಖೆಗಳು ಮುಚ್ಚಲ್ಪಡುತ್ತಿವೆ. ನೌಕರರ ಗಾತ್ರ ಕಡಿಮೆಮಾಡಲು ಸಹವರ್ತಿಬ್ಯಾಂಕುಗಳಲ್ಲಿ ಮಾತ್ರ ವಿಆರ್‌ಎಸ್ ಜಾರಿಗೆ ತರಲಾಗುತ್ತಿದೆ. ಹೆಚ್ಚಾದ ಸಿಬ್ಬಂದಿಗಳನ್ನು ಬೇಕಾಬಿಟ್ಟಿ ವರ್ಗಾವಣೆ ಮಾಡುವ ಅಪಾಯವಿದೆ. ಸಹ ಸಿಬ್ಬಂದಿಯಂತಹ ನೌಕರರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಹಣದ ವ್ಯವಹಾರ ನಡೆಯುವ ಇಂತಹ ಜಾಗದಲ್ಲಿ ಇದು ಅಪಾಯಕರ ಎಂಬುದು ಸಂಘಟನೆಗಳ ವಾದ. ಆಯಾ ರಾಜ್ಯಗಳ ಜನಜೀವನದಲ್ಲಿ ಹಾಸುಹೊಕ್ಕಾಗಿರುವ ಸಹವರ್ತಿ ಬ್ಯಾಂಕುಗಳು ರಾಜ್ಯದ ಆರ್ಥಿಕ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಗಳನ್ನು ನೀಡಿವೆ. ಅವುಗಳನ್ನು ಇರುವ ರೀತಿಯಲ್ಲಿಯೇ ಉಳಿಸಿಕೊಳ್ಳುವ ಸಾಂಸ್ಕೃತಿಕ ಜವಬಾœರಿ ಆಯಾ ರಾಜ್ಯ ಸರ್ಕಾರದ್ದಾಗಿದೆ. ಅದಕ್ಕಾಗಿ ರಾಜಕೀಯ ಪ್ರಭಾವದ ಮೂಲಕ ಈ ವಿಲೀನಕ್ಕೆ ರಾಜ್ಯಸರ್ಕಾರಗಳು ವಿರೋಧ ತೋರಬೇಕಿತ್ತು ಎಂಬ ಅಭಿಪ್ರಾಯವೂ ಇದೆ. ವಿಲೀನದಿಂದ ಏನೇನಾಗಬಹುದು?
ಒಂದು ವರದಿ ಪ್ರಕಾರ, ಮೈಸೂರು ಬ್ಯಾಂಕ್ ತನ್ನದೇ ಸ್ವಂತ ಐಕಾನಿಕ್ ಕಟ್ಟಡ ಹೊಂದಿದ್ದು, ಅದನ್ನು ಉಳಿಸಿಕೊಳ್ಳಬಹುದು ಎನ್ನುವ ಆಶಾಭಾವನೆ ಕೆಲವರಲ್ಲಿ ಇದೆ. ಸ್ವಂತ ಕಟ್ಟಡಗಳನ್ನು ಉಳಿಸಿಕೊಂಡು ಬಾಡಿಗೆ ನೀಡುವ ಕಟ್ಟಡಗಳನ್ನು ಬಿಡಬಹುದು ಎನ್ನುವ ವದಂತಿಗಳು ಕೇಳುತ್ತವೆ. ವಿಲೀನವಾಗುವ ಬ್ಯಾಂಕುಗಳ data merger ಏಪ್ರಿಲ್ 20 ಕ್ಕೆ ಆರಂಭವಾಗಿ ಮೇ 31 ಕ್ಕೆ ಮುಗಿಯುತ್ತದೆ. 15 ದಿನಗಳೊಳಗಾಗಿ ಹೊಸ ಬ್ಯಾಲೆನ್ಸ ಶೀಟ್ ಪಡೆಯುವ ವಿಶ್ವಾಸವನ್ನು ವ್ಯಕ್ತ ಮಾಡಲಾಗುತ್ತಿದೆ. ವಿಲೀನ ಪ್ರಕ್ರಿಯೆ ಸಂಪೂರ್ಣವಾಗಿ ಆರು ತಿಂಗಳಲ್ಲಿ ಮುಗಿಯಬಹುದು. ಮೈಸೂರು ಬ್ಯಾಂಕ್‌ನ ಯಾವ, ಯಾವ ಶಾಖೆಗಳು ಉಳಿಯಬಹುದು, ಯಾವ ಶಾಖೆಗಳು ಮುಚ್ಚಬಹುದು, ಶಿಫ್ಟ್ ಆಗಬಹುದು ಎನ್ನುವ ಬಗೆಗೆ ಇನ್ನೂ ನಿಖರವಾದ ಮಾಹಿತಿಗಳಿಲ್ಲ. ನಮ್ಮ ಎದುರಿಗಿರುವ ಉದಾಹರಣೆ ಎಂದರೆ ನೆಡುಂಗಾಡಿ ಬ್ಯಾಂಕ್‌ಅನ್ನು ಪಂಜಾಬ… ನ್ಯಾಷನಲ… ಬ್ಯಾಂಕ್‌ನಲ್ಲಿ ವಿಲೀನ ಗೊಳಿಸಿದಾಗ, ಕೋಜಿಕೋಡ…ನಲ್ಲಿ ಇರುವ ನೆಡುಂಗಾಡಿ ಬ್ಯಾಂಕ್‌ನ ಬೃಹತ್ ಕಟ್ಟಡವನ್ನು ಉಳಿಸಿಕೊಂಡು, ಅದನ್ನು ಪಂಜಾಬ್ ನ್ಯಾಷನಲ… ಬ್ಯಾಂಕ್‌ನ ತರಬೇತಿ ಕೇಂದ್ರವನ್ನಾಗಿ ಮಾರ್ಪಡಿಸಲಾಗಿದೆಯಂತೆ. ಈ ನಿಟ್ಟಿನಲ್ಲಿ ಯೋಚಿಸಿದಾಗ ಮೈಸೂರು ಬ್ಯಾಂಕ್ ತನ್ನ ಸcಂತ ಮತ್ತು ಬೃಹತ… ಕಟ್ಟಡಗಳನ್ನು ಉಳಿಸಿಕೊಳ್ಳಬಹುದು. ವ್ಯವಹಾರ ಯಾವುದೇ ಇರಲಿ, ರಿಯಲ… ಎಸ್ಟೇಟ್ ಮೇಲ್ಮುಖವಾಗಿರುವ ದಿನಗಳಲ್ಲಿ ಸ್ವಂತ ಕಟ್ಟಡಗಳನ್ನು ಯಾರೂ ಅಷ್ಟು ಸುಲಭವಾಗಿ ಬಿಟ್ಟು ಕೊಡುವುದಿಲ್ಲ. ಮುಂದಿನ ಬೆಳವಣಿಗೆಯನ್ನು ಊಹಿಸಿ ಅವುಗಳನ್ನು ಜತನದಿಂದ ಕಾಯ್ದು ಕೊಳ್ಳುತ್ತಾರೆ. ವಿಲೀನ ಪ್ರಕ್ರಿಯೆಯಲ್ಲಿ, ಆಡಳಿತಾತ್ಮಕ ಅನುಕೂಲಕ್ಕಾಗಿ ಸಿಬ್ಬಂದಿಗಳ ಸ್ಥಾನ ಪಲ್ಲಟ ಅನಿವಾರ್ಯ. ಅದು ಇರುವಲ್ಲಿಯೇ ಸ್ವಲ್ಪ ಹೊಂದಾಣಿಕೆ ಇರಬಹುದು ಅಥವಾ ಹೊರಗೂ ಆಗಬಹುದು. ಈ ನಿಟ್ಟಿನಲ್ಲಿ ಅಡಳಿತ ವರ್ಗ ಕೊಡುವ ಭರವಸೆ ಏನೇ ಇರಬಹುದು, ಉದ್ಯೋಗ ಮತ್ತು ಸ್ಥಾನಪಲ್ಲಟ ಮದ್ಯೆ ಒಂದನ್ನು ಆಯ್ಕೆ ಮಾಡಿಕೊಳ್ಳುವಂಥ ಪರಿಸ್ಥಿತಿಯನ್ನು ಅಲ್ಲಗೆಳೆಯಲಾಗದು. ಉಳಿದ ವಿಲೀನವಾದ ಬ್ಯಾಂಕುಗಳಂತೆ, ಮೈಸೂರು ಬ್ಯಾಂಕಿನ ಗ್ರಾಹಕರ ಖಾತೆ ನಂಬರುಗಳು ಬದಲಾವಣೆ, ಹೊಸ ಚೆಕ್ ಬುಕ್‌ಗಳನ್ನು ಪಡೆಯಬೇಕಾದ ಸಾಧ್ಯತೆಯೂ ಇರುತ್ತದೆ. ಮಾಸಿಕ ಕಂತು, ಇಸಿಎಸ್, ಕ್ರೆಡಿಕಾರ್ಡ್ ಕಂತು ಬಿಲ್ ಪೇಮೆಂಟ್ ರದ್ದಾಗುವ ಸಾಧ್ಯೆ ಇದ್ದು ಹೊಸದಾಗಿ ನಿರ್ದೇಶನದ ತನಕ ಕಾಯಬೇಕಾಗಬಹುದು. ಪೋಸ್ಟ್ ಡೇಟೆಡ್ ಚೆಕ್, ಸ್ಟಾಂಡಿಂಗ್ ಇನ್‌ಸ್ಟ್ರಕ್ಷನ್ ರದ್ದಾಗುವ ಸಾಧ್ಯತೆಯೂ ಇರಬಹುದು. – ರಮಾನಂದ ಶರ್ಮ