ಹೊಸದಿಲ್ಲಿ: ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ನಿಶ್ಚಿತ ಠೇವಣಿ (ಎಫ್ ಡಿ) ಇಟ್ಟವರಿಗೆ ಇದೊಂದು ಕಹಿಸುದ್ದಿ.
ಒಂದೇ ತಿಂಗಳಲ್ಲಿ ಎರಡನೇ ಬಾರಿಗೆ ಎಸ್‌ಬಿಐ ತನ್ನ ನಿಶ್ಚಿತ ಠೇವಣಿ ಮೇಲಿನ ಬಡ್ಡಿ ದರವನ್ನು ಶೇ.0.40ರಷ್ಟು ಕಡಿತಗೊಳಿಸಿದೆ.
ಕಳೆದ ವಾರವಷ್ಟೇ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಶೇ.0.40ರಷ್ಟು ಕಡಿತಗೊಳಿಸಿ ಆದೇಶ ಹೊರಡಿಸಿತ್ತು.
ಅದರ ಬೆನ್ನಲ್ಲೇ ಎಸ್‌ಬಿಐ ಈ ನಿರ್ಧಾರ ಕೈಗೊಂಡಿದೆ. ಬುಧವಾರದಿಂದಲೇ ಪರಿಷ್ಕೃತ ದರ ಜಾರಿಯಾಗಿದೆ. ಹೆಚ್ಚಿನ ಮೊತ್ತದ ಠೇವಣಿ (2 ಕೋಟಿ ರೂ. ಮತ್ತು ಅದಕ್ಕಿಂತ ಹೆಚ್ಚು) ಮೇಲಿನ ಬಡ್ಡಿ ದರ ಶೇ.0.50 ಇಳಿಕೆ ಯಾಗಿದೆ. 5 ರಿಂದ 10 ವರ್ಷಗಳ ಅವಧಿಗೆ ಠೇವಣಿ ಇಟ್ಟವರಿಗೆ ಶೇ.5.40ರಷ್ಟು ಬಡ್ಡಿ ಸಿಗಲಿದೆ. ಈ ಹಿಂದೆ ಇದು ಶೇ.5.70 ಆಗಿತ್ತು.
ಮೇ 12ರಂದು ಎಸ್‌ಬಿಐ ನಿಶ್ಚಿತ ಠೇವಣಿ ಮೇಲಿನ ಬಡ್ಡಿ ದರವನ್ನು ಶೇ.0.20ರಷ್ಟು ಕಡಿತ ಮಾಡಿತ್ತು. ಹಿರಿಯ ನಾಗರಿಕರು ತಮ್ಮ ನಿಶ್ಚಿತ ಠೇವಣಿ ಮೇಲೆ ಉತ್ತಮ ಬಡ್ಡಿ ಪಡೆಯ ಲಿದ್ದಾರೆ. ಆದರೆ ಠೇವಣಿ ಅವಧಿಯ 5ರಿಂದ 10 ವರ್ಷ ಆಗಿರಬೇಕು ಅಷ್ಟೇ.
ಪರಿಷ್ಕೃತ ಬಡ್ಡಿ ದರ
7ರಿಂದ 45 ದಿನಗಳ ಠೇವಣಿ: ಶೇ.2.90
46ರಿಂದ 179 ದಿನ: ಶೇ.3.90
180 ರಿಂದ 210 ದಿನ: ಶೇ.4.40
211 ರಿಂದ 1 ವರ್ಷದೊಳಗೆ: ಶೇ.4.40
1 ವರ್ಷದಿಂದ 2 ವರ್ಷದೊಳಗೆ: ಶೇ.5.10
2 ರಿಂದ 3 ವರ್ಷದೊಳಗೆ: ಶೇ.5.10
3 ರಿಂದ 5 ವರ್ಷದೊಳಗೆ: ಶೇ.5.30
5 ರಿಂದ 10 ವರ್ಷದೊಳಗೆ: ಶೇ.5.40